ನೆಟ್ಫ್ಲಿಕ್ಸ್, ಜಿಯೋ ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ(ಜ.25–ಜ.31) ಹಲವು ಸಿನಿಮಾ ಹಾಗೂ ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ.

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಬೇರೆ ಬೇರೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ, ನೋಡಲೇಬೇಕಾದ ಸಿನಿಮಾ ಮತ್ತು ವೆಬ್ ಸರಣಿಗಳ ಕುರಿತ ಮಾಹಿತಿ ಇಲ್ಲಿದೆ.

ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳು

ಸಿನಿಮಾ: ಸರ್ವಂ ಮಾಯಾ

ಭಾಷೆ: ಮಲಯಾಳ

ಒಟಿಟಿ: ಜಿಯೋ ಹಾಟ್ಸ್ಟಾರ್

ಬಿಡುಗಡೆ ದಿನಾಂಕ: ಜ.30

ಅಖಿಲ್ ಸತ್ಯನ್ ನಿರ್ದೇಶನದ ಕಾಮಿಡಿ – ಹಾರರ್ ಸಿನಿಮಾ ‘ಸರ್ವಂ ಮಾಯಾ’ ಜ.30ರಂದು ಜಿಯೋ ಹಾಟ್ಸ್ಟಾರ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಸಿನಿಮಾವು ಸಂಗೀತಗಾರನೊಬ್ಬ ಪೂಜಾರಿಯ ಕೆಲಸವನ್ನು ಕೈಗೆತ್ತಿಕೊಂಡಾಗ ದೆವ್ವವೊಂದನ್ನು ಎದುರಿಸುವ ಕಥೆಯನ್ನು ಹೊಂದಿದೆ. ನಿವಿನ್ ಪಾಲಿ, ರಿಯಾ ಶಿಬು, ಅಜು ವರ್ಗೀಸ್, ಜನಾರ್ದನನ್, ಪ್ರೀತಿ ಮುಖುಂದನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. 2025ರ ಡಿ.25ರಂದು ಚಿತ್ರವು ಬಿಡುಗಡೆಯಾಗಿತ್ತು. ಬಾಕ್ಸ್ಆಫೀಸ್ನಲ್ಲಿ ₹145 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಸಿನಿಮಾವು 146 ನಿಮಿಷಗಳ ಅವಧಿಯಿದೆ.

ಸಿನಿಮಾ: ಚಾಂಪಿಯನ್

ಭಾಷೆ: ತೆಲುಗು

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಜ.29

ಕ್ರೀಡಾ ಕತೆಯನ್ನು ಒಳಗೊಂಡ ‘ಚಾಂಪಿಯನ್’ ಸಿನಿಮಾವು ಜ.29ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುವ ಘಟನೆಯು ಚಿತ್ರದಲ್ಲಿದೆ. ಫುಟ್ಬಾಲ್ ಆಟಗಾರನೊಬ್ಬ ಲಂಡನ್ಗೆ ಹೋಗುವ ತನ್ನ ಕನಸನ್ನು ಬೆನ್ನಟ್ಟಿ ಹೋಗುವಾಗ, ಅವನಿಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಪ್ರದೀಪ್ ಅದ್ವೈತಮ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೋಷನ್ ಮೇಕಾ, ಅನಸ್ವರ ರಾಜನ್, ನಂದಮೂರಿ ಕಲ್ಯಾಣ ಚಕ್ರವರ್ತಿ, ಕೇ ಕೇ ಮೆನನ್, ಮುರಳಿ ಶರ್ಮಾ, ಸಂತೋಷ್ ಪ್ರತಾಪ್ ಮುಂತಾದವರು ತಾರಾಗಣದಲ್ಲಿದ್ದಾರೆ. 2025ರ ಡಿ.25ರಂದು ಚಿತ್ರವು ಬಿಡುಗಡೆಯಾಗಿತ್ತು. ಸಿನಿಮಾವು 166 ನಿಮಿಷಗಳ ಅವಧಿಯಿದೆ.

ಸಿನಿಮಾ: ಪತಂಗ್

ಭಾಷೆ: ತೆಲುಗು

ಒಟಿಟಿ: ಸನ್ನೆಕ್ಸ್ಟ್

ಬಿಡುಗಡೆ ದಿನಾಂಕ: ಜ.30

ಟಾಲಿವುಡ್ನ ರೋಮ್ಯಾಂಟಿಕ್–ಕಾಮಿಡಿ ಚಲನಚಿತ್ರ ‘ಪತಂಗ್’ಜ.30ರಂದು ಸನ್ನೆಕ್ಸ್ಟ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಮೂವರು ಗೆಳೆಯರ ಗೆಳೆತನ ಮತ್ತು ಪ್ರೀತಿ – ಪ್ರೇಮ ಹಾಗೂ ಗಾಳಿಪಟ ಸ್ಪರ್ಧೆಯ ಸುತ್ತಾ ಚಿತ್ರವು ಸಾಗುತ್ತದೆ. ಪ್ರಣವ್ ಕೌಶಿಕ್, ಪ್ರೀತಿ ಪಗಡಲ, ಮತ್ತು ವಂಶಿ ಪೂಜಿತ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಪ್ರಣೀತ್ ಪ್ರತ್ತಿಪತಿ ಚಿತ್ರವನ್ನು ನಿರ್ದೇಶಿಸಿದ್ದಾರೆ. 2025ರ ಡಿ.25ರಂದು ಚಿತ್ರವು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಒಟ್ಟು 9 ಹಾಡುಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.