ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಇತ್ತೀಚೆಗೆ ಲವ್ ರಂಜನ್ಸ್ ಅವರ ಮನೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ಈ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆಯಾ ಎಂದು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಲವ್ ರಂಜನ್ಸ್ ಅವರ ಮುಂದಿನ ಸಿನಿಮಾದಲ್ಲಿ ಈ ಜೋಡಿ ನಟಿಸುತ್ತಿರುವ ಕುರಿತು ಬಾಲಿವುಡ್ನಲ್ಲಿ ಗುಸು ಗುಸು ಶುರುವಾಗಿದೆ. ಇದೇ ಸಂದರ್ಭದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದು ಗಾಳಿಸುದ್ದಿಗೆ ಬಲ ಬಂದಂತಾಗಿದೆ.

ರಣಬೀರ್ ಹಾಗೂ ದೀಪಿಕಾ ಜೋಡಿ ಈಗಾಗಲೇ ತೆರೆ ಮೇಲೆ ಮೋಡಿ ಮಾಡಿದೆ. ‘ಬಚನಾ ಯೇ ಹಸೀನೋ’, ‘ಯೇ ಜವಾನಿ ಹೈ ದಿವಾನಿ’ ಮತ್ತು ‘ತಮಾಷಾ’ದಲ್ಲಿ ಒಟ್ಟಿಗೆ ನಟಿಸಿದ್ದಾರೆ. ನಿಜ ಜೀವನದಲ್ಲೂ ಒಟ್ಟಿಗೆ ಓಡಾಡಿ ಸುದ್ದಿಯಲ್ಲಿದ್ದ ಈ ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಅಜಯ್ ದೇವಗನ್ ಹಾಗೂ ದೀಪಿಕಾ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್ನಲ್ಲಿ ಹರಿದಾಡುತ್ತಿದೆ. ರಣಬೀರ್ ಕಪೂರ್ ತಂದೆಯಾಗಿ ಅಜಯ್ ನಟಿಸಲಿದ್ದಾರೆ ಎಂಬ ಸುದ್ದಿ ಕೂಡ ಇದೆ. ಇದೇ ಸಿನಿಮಾದಲ್ಲಿ ಮೂರು ನಟರು ಒಂದಾಗಲಿದ್ದಾರಾ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಈ ಸಿನಿಮಾ ವರ್ಷದ ಅಂತ್ಯಕ್ಕೆ ಸೆಟ್ಟೇರಲಿದೆ ಎಂದು ಲವ್ ರಂಜನ್ಸ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ ತಾರಾಗಣದ ಕುರಿತು ಅವರಿನ್ನೂ ಗುಟ್ಟುಬಿಟ್ಟುಕೊಟ್ಟಿಲ್ಲ.

ಕಬೀರ್ ಖಾನ್ ಅವರ ‘83’ ಸಿನಿಮಾದಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ನಟಿಸುತ್ತಿದ್ದಾರೆ. ಆರ್ಯನ್ ಮುಖರ್ಜಿ ಅವರ ‘ಬ್ರಹ್ಮಾಸ್ತ್ರ’ದಲ್ಲಿ ರಣಬೀರ್ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.