ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

700 ಜನರ ಶ್ರಮ ಹೀರಾಮಂಡಿ ಸೆಟ್‌

Published 8 ಜೂನ್ 2024, 0:39 IST
Last Updated 8 ಜೂನ್ 2024, 0:39 IST
ಅಕ್ಷರ ಗಾತ್ರ

ಹೀರಾಮಂಡಿ ವೆಬ್‌ಸಿರೀಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿ ತಿಂಗಳು ಕಳೆದಿದೆ. ಪ್ರಸಾರವಾದ ದಿನದಿಂದಲೂ ಟಾಪ್‌ ಹತ್ತು ಸಿರೀಸ್‌ನಲ್ಲಿ ತನ್ನ ಸ್ಥಾನ ಭದ್ರವಾಗಿಸಿಕೊಂಡಿದೆ. ಹೀರಾಮಂಡಿಯ ಸೆಟ್‌ ಬಗ್ಗೆ ಸಾಕಷ್ಟು ವಾದವಿವಾದಗಳೂ ಆದವು. ಕೋಠೆವಾಲಿಗಳ ಕೋಠೆಗಳನ್ನು ಮಹಲಿನಂತೆ ತೋರಿಸಲಾಗಿದೆ. ವಾಸ್ತವದಲ್ಲಿ ಹಾಗಿರಲಿಲ್ಲ ಅಂತೆಲ್ಲ ಚರ್ಚೆಗಳಾದವು.

ಹೀರಾಮಂಡಿ ಸೆಟ್ಸ್‌ಗಳಲ್ಲಿ ಸಂಜಯ್‌ಲೀಲಾ ಬನ್ಸಾಲಿ

ಹೀರಾಮಂಡಿ ಸೆಟ್ಸ್‌ಗಳಲ್ಲಿ ಸಂಜಯ್‌ಲೀಲಾ ಬನ್ಸಾಲಿ

ಆದರೆ ಸಂಜಯ್‌ ಲೀಲಾ ಬನ್ಸಾಲಿ ಅವರ ಕಾಲ್ಪನಿಕ ಹೀರಾಮಂಡಿ ಮಹಲುಗಳಂತೆ ತೋರಿಸಲಾಯಿತು. ಈ ಮಹಲುಗಳ ನಿರ್ಮಾಣಕ್ಕೆ 700ಜನ ಕುಶಲಕರ್ಮಿಗಳು ಏಳು ತಿಂಗಳು ಎಡೆಬಿಡದೆ ಶ್ರಮಿಸಿದ್ದಾರೆ. ಮೊಘಲ್‌ ಪೇಂಟಿಂಗ್‌ ಮಿನಿಯೇಚರ್‌ಗಳಿಂದ ಹಿಡಿದು, ಲಾಟೀನು, ಬೆಳಕಿನ ವ್ಯವಸ್ಥೆಗೆ ದೊಡ್ಡ ದೊಡ್ಡ ಝೂಮರ್‌ಗಳು, ಮಾರುಕಟ್ಟೆಯಿಂದ ಹಳೆ ಸಾಗವಾನಿಯ ಮೇಜು, ಕುರ್ಚಿ, ಸೋಫಾಗಳನ್ನೂ ಕೊಳ್ಳಲಾಯಿತು. ಇವುಗಳಲ್ಲಿ ಕಲಾತ್ಮಕವಾಗಿರುವ ಕೆಲವನ್ನು ಸಂಜಯ್‌ ಲೀಲಾ ಬನ್ಸಾಲಿ ಅವರು ತಾವೇ ಕೊಂಡುಕೊಂಡರಂತೆ. ಇನ್ನು ಹಮಾಮ್‌ ನಿರ್ಮಾಣ ಗಮನಸೆಳೆಯುವಂತೆ ಮಾಡಲಾಗಿದೆ. ಇಡೀ ಮೆಹಫಿಲ್‌ಗಳು, ಮಹಲ್‌ಗಳು ಆ ರಸ್ತೆ, ಚೌರಾಹಾಗಳಿಗಾಗಿ ಒಟ್ಟು 60ಸಾವಿರ ಹಲಗೆಗಳನ್ನು ಬಳಸಲಾಗಿದೆಯಂತೆ.

ಹೀರಾಮಂಡಿ ಸೆಟ್‌

ಹೀರಾಮಂಡಿ ಸೆಟ್‌

ಪುಸ್ತಕದಂಗಡಿ, ಬಂಗ್ಲೆಗಳಿಗಾಗಿ ಫ್ರೇಮುಗಳು, ಪೀಠೋಪಕರಣಗಳನ್ನು ಆ್ಯಂಟಿಕ್‌ ಮಳಿಗೆಗಳಿಂದ ಖರೀದಿಸಲಾಗಿದೆಯಂತೆ. ಹೀರಾಮಂಡಿ ಸಂಜಯ್‌ಲೀಲಾ ಬನ್ಸಾಲಿಯವರ ಕಲಾತ್ಮಕ ಸೆಟ್‌ ಆಗಿ ಬದಲಾಗಿದ್ದು ಇವರೆಲ್ಲರ ಶ್ರಮದಿಂದ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಹೀರಾಮಂಡಿ ಸೆಟ್ಸ್‌ಗಳಲ್ಲಿ ಸಂಜಯ್‌ಲೀಲಾ ಬನ್ಸಾಲಿ

ಹೀರಾಮಂಡಿ ಸೆಟ್ಸ್‌ಗಳಲ್ಲಿ ಸಂಜಯ್‌ಲೀಲಾ ಬನ್ಸಾಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT