ಶುಕ್ರವಾರ, ಜುಲೈ 1, 2022
27 °C

ಮಕ್ಕಳಿಗಾಗಿ ಹೃದಯಸ್ಪರ್ಶಿ ಕವನ ಬರೆದ ಐಶ್ವರ್ಯಾ ರಜನಿಕಾಂತ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

AISHWARYA RAJINIKANTH INSTA POST SC

ಬೆಂಗಳೂರು: ನಿರ್ದೇಶಕಿ ಮತ್ತು ನಟ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರು ಧನುಷ್ ಜತೆಗಿನ ದಾಂಪತ್ಯ ಜೀವನ ಕೊನೆಗೊಳಿಸಿ ವಿಚ್ಛೇದನ ಪಡೆದುಕೊಂಡಿದ್ದಾರೆ.

ವಿಚ್ಛೇದನದ ಬಳಿಕ ಐಶ್ವರ್ಯಾ ಅವರು, ಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ.

ಐಶ್ವರ್ಯಾ ಮತ್ತು ಧನುಷ್ ಅವರಿಗೆ ಲಿಂಗ ಮತ್ತು ಯಾತ್ರ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ.

ಆದರೆ ವಿಚ್ಛೇದನದ ಬಳಿಕ ಮಕ್ಕಳ ಜತೆ ಹೆಚ್ಚಿನ ಸಮಯ ಕಳೆಯಲಾಗುತ್ತಿಲ್ಲ ಎಂದು ಐಶ್ವರ್ಯಾ ಹೇಳಿಕೊಂಡಿದ್ದರು. ಜತೆಗೆ ವಿಶ್ವ ಕವನ ದಿನದ ಹಿನ್ನೆಲೆಯಲ್ಲಿ ಅವರು ತನ್ನಿಬ್ಬರು ಮಕ್ಕಳಿಗಾಗಿ ವಿಶೇಷ ಕವನ ಒಂದನ್ನು ರಚಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಯಾತ್ರ ಮತ್ತು ಲಿಂಗನ ಜತೆಗಿರುವ ಫೋಟೊ ಪೋಸ್ಟ್ ಮಾಡಿರುವ ಐಶ್ವರ್ಯಾ, ಮಕ್ಕಳ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಐಶ್ವರ್ಯಾ ನಿರ್ದೇಶನದ ತಮಿಳು ಅಲ್ಬಮ್ ಹಾಡು ‘ಪಯಣಿ‘ ಬಿಡುಗಡೆಯಾಗಿತ್ತು. ಅದರ ಬೆನ್ನಲ್ಲೇ, ಬಾಲಿವುಡ್‌ನಲ್ಲಿ ‘ಓ ಸಾಥಿ ಚಲ್‘ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದಾಗಿ ಐಶ್ವರ್ಯಾ ಘೋಷಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು