ಸಬಾ ಆಜಾದ್ ಜತೆ ಕಾಣಿಸಿಕೊಂಡ ಬಾಲಿವುಡ್ ನಟ ಹೃತಿಕ್ ರೋಷನ್

ಬೆಂಗಳೂರು: ಬಾಲಿವುಡ್‌ನಲ್ಲಿ ‘ಗ್ರೀಕ್ ಗಾಡ್‘ ಎಂದೇ ಕರೆಸಿಕೊಳ್ಳುವ ನಟ ಹೃತಿಕ್ ರೋಷನ್, ಸುಸಾನೆ ಖಾನ್ ಜತೆಗಿನ ದಾಂಪತ್ಯ ಕೊನೆಗೊಳಿಸಿ ವಿಚ್ಛೇದನ ಪಡೆದುಕೊಂಡಿದ್ದಾರೆ.
ಅದಾದ ಬಳಿಕ ಹೃತಿಕ್ ಹೆಸರು ಹಲವು ನಟಿಯರ ಜತೆ ಕೇಳಿಬಂದಿದ್ದು, ಡೇಟಿಂಗ್ ಮಾಡುತ್ತಿರುವ ಕುರಿತು ಸುದ್ದಿ ಹರಿದಾಡಿದ್ದವು.
ಆದರೆ ಆ ಕುರಿತು ಹೃತಿಕ್ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಈ ಬಾರಿ ಹೃತಿಕ್ ಹೆಸರು, ನಟಿ ಮತ್ತು ಗಾಯಕಿ ಸಬಾ ಆಜಾದ್ ಜತೆ ಕೇಳಿಬಂದಿದೆ.
ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಮಾತು ಕೇಳಿಬರುತ್ತಿದ್ದಂತೆಯೇ, ಅದಕ್ಕೆ ಪೂರಕವಾಗಿ ಇಬ್ಬರೂ ರೆಸ್ಟೋರೆಂಟ್ ಒಂದಕ್ಕೆ ಕೈ–ಕೈ ಹಿಡಿದುಕೊಂಡು ಹೋಗಿ ಬಂದಿರುವ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಅಲ್ಲದೆ, ಇಬ್ಬರೂ, ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಪರಸ್ಪರ ಲೈಕ್ ಮಾಡುವುದು ಕಂಡುಬಂದಿದೆ.
ಗೆಳೆಯ ಅಸ್ಲಾನ್ ಜತೆ ಕ್ರಿಸ್ಮಸ್ ಆಚರಿಸಿದ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ
ಸಬಾ ಪೋಸ್ಟ್‌ಗಳನ್ನು ಹೃತಿಕ್ ಲೈಕ್ ಮಾಡಿರುವುದು ಅವರಿಬ್ಬರೂ ಡೇಟಿಂಗ್ ಮಾಡುತ್ತಿರುವ ಸುದ್ದಿಗೆ ಪುಷ್ಠಿ ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.