ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಫ್ಯಾಶನ್ ಶೋ Met Galaದಲ್ಲಿ ಪಾಲ್ಗೊಂಡ ಏಕೈಕ ಭಾರತೀಯ ಸುಧಾ ರೆಡ್ಡಿ ಯಾರು?

Last Updated 14 ಸೆಪ್ಟೆಂಬರ್ 2021, 13:36 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಜಗತ್ತಿನ ಪ್ರತಿಷ್ಟಿತ ಫ್ಯಾಶನ್ ಶೋ ಎಂದು ಹೆಸರಾದ ಮೆಟ್ ಗಾಲಾ(Met Gala) ಈ ವರ್ಷ ಕಳೆದ ಭಾನುವಾರ ಆರಂಭವಾಗಿದೆ. ಇಲ್ಲಿ ಭಾಗವಹಿಸಲು ಕೋಟ್ಯಧಿಪತಿಗಳಿಗೆ ಮಾತ್ರ ಸಾಧ್ಯ. ಇಲ್ಲಿ ಒಂದು ಟಿಕೆಟ್‌ಗೆ 30 ಸಾವಿರ ಯುಸ್ ಡಾಲರ್ ಇದೆ.

1948 ರಿಂದ ಅಮೆರಿಕದ ನ್ಯೂಯಾರ್ಕ್‌ ಮೆಟ್ರೊಪಾಲಿಟಿನ್ ಕಲಾ ವಸ್ತುಸಂಗ್ರಹಾಲಯಕ್ಕೆ ನಿಧಿ ಸಂಗ್ರಹಾರ್ಥವಾಗಿ ನಡೆಯುವಮೆಟ್ ಗಾಲಾ ಫ್ಯಾಶನ್ ಶೋ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ನಡೆದಿರಲಿಲ್ಲ.

ಈ ವರ್ಷ ಕಳೆದ ಭಾನುವಾರದಿಂದ ಆರಂಭವಾಗಿದ್ದು ಜಗದ್ವಿಖ್ಯಾತ ಮಾಡೆಲ್‌ಗಳು ಈ ಫ್ಯಾಶನ್‌ ಶೋದಲ್ಲಿ ಬೆಡಗು ಭಿನ್ನಾಣಗಳಿಂದ ಕಂಗೊಳಿಸುತ್ತಿದ್ದಾರೆ. ಇಂತಹ ಪ್ರಸಿದ್ಧ ಜಾಗತಿಕ ಶೋನಲ್ಲಿ ಈ ವರ್ಷ ಏಕೈಕ ಭಾರತೀಯರೊಬ್ಬರು ಮಾತ್ರ ಭಾಗವಹಿಸಿದ್ದಾರೆ. ಅವರೇ ಸುಧಾ ರೆಡ್ಡಿ.

ಅಮೆರಿಕದಲ್ಲಿರುವ ಬಿಲಿಯನೇರ್ ಹಾಗೂ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟಕ್ರ್ಚರ್‌ನ ಎಂಡಿ ಮೇಘ ಕೃಷ್ಣ ರೆಡ್ಡಿ ಅವರ ಹೆಂಡತಿ ಸುಧಾ ರೆಡ್ಡಿ ಅವರು ಮೆಟ್ ಗಾಲಾದಲ್ಲಿ ಭಾಗವಹಿಸಿದ್ದಾರೆ. ಫಲ್ಗುಣಿ ಹಾಗೂ ಶೇನ್ ಪಿಕಾಕ್ ಅವರು ಸಿದ್ದಪಡಿಸಿದ ಅದ್ಭುತ ಡಿಸೈನ್‌ ಉಡುಗೆಯಲ್ಲಿ ಸುಧಾ ರೆಡ್ಡಿ ಮೆಟ್‌ ಗಾಲಾದಲ್ಲಿ ಪಾಲ್ಗೊಂಡಿದ್ದಾರೆ.

ಫ್ಯಾಶನ್ ಪ್ರಿಯರು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಸುಧಾ ರೆಡ್ಡಿ, ಮೆಟ್‌ ಗಾಲಾದಲ್ಲಿ ಭಾಗವಹಿಸಿರುವ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಿಮ್‌ ಕರ್ದಾಶಿಯನ್, ಜೆನ್ನಿಫರ್ ಲೋಪೆಜ್, ಕೆಂಡಾಲ್ ಜೆನ್ನರ್, ಗಿಗಿ ಹಾಡಿಡ್, ಅಲಿಸಿಯಾ ಕೀ, ರಿಟಾ ಓರಾ, ಮಿಂಡಿ ಕಾಲಿಂಗ್, ಎಮಿಲಿ ಬ್ಲಂಟ್, ಮೇಘನ್ ಫಾಕ್ಸ್ ಸೇರಿದಂತೆ ಖ್ಯಾತನಾಮರು ಭಾಗವಹಿಸಿದ ಶೋನಲ್ಲಿ ಸುಧಾ ರೆಡ್ಡಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

ಇವನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT