ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ ನಟಿ ನಯನತಾರಾ

ಬೆಂಗಳೂರು: ನಟಿ ನಯನತಾರಾ ಅವರು ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ.
ಈಗಾಗಲೇ ಬಾಲಿವುಡ್ ನಟಿಯರಾದ ಕತ್ರೀನಾ ಕೈಫ್, ಆಲಿಯಾ ಭಟ್ ಸಿನಿಮಾ ರಂಗದ ಜತೆಗೇ ಉದ್ಯಮದಲ್ಲೂ ಛಾಪು ಮೂಡಿಸಿದ್ದಾರೆ.
ನಯನತಾರಾ ಕೂಡ ಅದೇ ಹಾದಿಯಲ್ಲಿ ಸಾಗಿದ್ದು, ಚರ್ಮರೋಗ ತಜ್ಞರ ಸಹಯೋಗದಲ್ಲಿ ಉದ್ಯಮ ಆರಂಭಿಸುತ್ತಿದ್ದಾರೆ.
ಲಿಪ್‌ಸ್ಟಿಕ್‌ಗಳು ನಯನತಾರಾ ಅವರ ಕಂಪನಿಯ ಪ್ರಮುಖ ಉತ್ಪನ್ನಗಳಾಗಿರಲಿವೆ. ವಿವಿಧ ರೀತಿಯ ಆಯ್ಕೆಗಳು ಒಂದೇ ಬ್ರ್ಯಾಂಡ್ ಅಡಿಯಲ್ಲಿ ದೊರೆಯುವಂತೆ ಮಾಡುವುದು ಅವರ ಉದ್ದೇಶವಾಗಿದೆ..
ಮಾಡೆಲಿಂಗ್ ಲೋಕಕ್ಕೆ ಕಾಲಿರಿಸಿದ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ
ಕಡಿಮೆ ಬೆಲೆಗೆ ಉತ್ತಮ ಉತ್ಪನ್ನ ಒದಗಿಸುವುದು ಮತ್ತು ಗುಣಮಟ್ಟ ಹಾಗೂ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಇರುವುದಾಗಿ ನಯನತಾರಾ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.