ಶುಕ್ರವಾರ, ಜುಲೈ 1, 2022
21 °C

ಉದ್ಯಮಿಯಾಗಿ ಯಶ ಕಂಡ ಪ್ರಿಯಾಂಕಾ ಚೋಪ್ರಾ: ರೆಸ್ಟೋರೆಂಟ್‌ಗೆ ವರ್ಷದ ಸಂಭ್ರಮ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

pc instagram post

ಬೆಂಗಳೂರು: ಬಾಲಿವುಡ್‌ನಿಂದ ಹೊರಟು, ಹಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ, ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಅವರು ಆರಂಭಿಸಿದ, ಭಾರತೀಯ ವಿಶೇಷ ಖಾದ್ಯಗಳ ರೆಸ್ಟೋರೆಂಟ್‌ಗೆ ಈಗ ಒಂದು ವರ್ಷ ತುಂಬಿದೆ. ತಮ್ಮ ‘ಸೋನಾ‘ ರೆಸ್ಟೋರೆಂಟ್‌ಗೆ ವರ್ಷ ತುಂಬಿರುವ ಸಂಭ್ರಮದ ಸಂದರ್ಭದಲ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ.

ಫೋಟೊ ಹಾಗೂ ವಿಡಿಯೊ ಹಂಚಿಕೊಂಡಿರುವ ಅವರು, ತಮ್ಮನ್ನು ಪ್ರೋತ್ಸಾಹಿಸಿದ ಎಲ್ಲರಿಗೂ, ರೆಸ್ಟೋರೆಂಟ್ ಪಾಲುದಾರರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ನನ್ನ ಹೃದಯ ಮತ್ತು ಹೊಟ್ಟೆ ತುಂಬಿದೆ.. ಎಂಬ ಹಾಸ್ಯಭರಿತ ಸಾಲಿನೊಂದಿಗೆ ತಮ್ಮ ಪೋಸ್ಟ್ ಕೊನೆಗೊಳಿಸಿರುವ ಪ್ರಿಯಾಂಕಾ, ರೆಸ್ಟೋರೆಂಟ್‌ಗೆ ಒಂದು ವರ್ಷವಾಗಿರುವುದಕ್ಕೆ ತಮಗೆ ಸಂತಸವಾಗಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು