ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್‌ಸ್ಟಾಗ್ರಾಮ್‌ನಲ್ಲಿ 7 ಕೋಟಿ ಫಾಲೋವರ್ಸ್ ಪಡೆದ ಶ್ರದ್ಧಾ ಕಪೂರ್

ಬೆಂಗಳೂರು: ಆಶಿಕಿ 2 ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ವಿಶೇಷ ಹೆಸರು ಗಳಿಸಿದ ಶ್ರದ್ಧಾ ಕಪೂರ್, ಈಗ ಮತ್ತೊಂದು ದಾಖಲೆ ಮೂಲಕ ಸುದ್ದಿಯಾಗಿದ್ದಾರೆ.

ಬಾಲಿವುಡ್‌ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರ ಮನಸ್ಸು ಗೆದ್ದಿರುವ ಶ್ರದ್ಧಾ, ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ 7 ಕೋಟಿ ಫಾಲೋವರ್ಸ್ ಪಡೆಯುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 7.5 ಕೋಟಿ ಫಾಲೋವರ್ಸ್ ಇದ್ದಾರೆ. ಹೀಗಾಗಿ ಇಷ್ಟೊಂದು ಗರಿಷ್ಠ ಸಂಖ್ಯೆಯ ಫಾಲೋವರ್ಸ್ ಪಡೆದವರ ಸಾಲಿನಲ್ಲಿ ಶ್ರದ್ಧಾ ಎರಡನೆಯವರಾಗಿದ್ದಾರೆ.

ಲವ್ ರಂಜನ್ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ಶ್ರದ್ಧಾ, ರಣಬೀರ್ ಕಪೂರ್ ಜತೆಗೆ ನಟಿಸುತ್ತಿದ್ದಾರೆ.

ಉಳಿದಂತೆ, ಸಾಹೋ, ಭಾಗಿ, ಏಕ್ ವಿಲನ್‌ ಚಿತ್ರಗಳಲ್ಲಿನ ಶ್ರದ್ಧಾ ಅವರ ಅಭಿನಯ ಕಂಡು ಅಭಿಮಾನಿಗಳು ಫಿದಾ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT