ಗುರುವಾರ , ಅಕ್ಟೋಬರ್ 21, 2021
29 °C

ಸಾಮಾಜಿಕ ತಾಣದಲ್ಲಿ ಚರ್ಚೆಗೆ ಗ್ರಾಸವಾದ ಶಾರುಖ್ ಪುತ್ರಿ ಸುಹಾನಾ ಖಾನ್ ಫೋಟೊ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Suhana Khan Instagram Photo

ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ನಟ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಚಿತ್ರರಂಗ ಪ್ರವೇಶಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬಾಲಿವುಡ್‌ನ ಮುಂದಿನ ಪೀಳಿಗೆ ಎಂದು ಕರೆಸಿಕೊಳ್ಳುತ್ತಿರುವ ತಂಡದಲ್ಲಿ ಸುಹಾನಾ ಖಾನ್ ಕೂಡ ಇದ್ದು, ಸೂಕ್ತ ವೇದಿಕೆಯ ಮೂಲಕ ಶಾರುಖ್ ಖಾನ್ ಅವರನ್ನು ಬಾಲಿವುಡ್‌ಗೆ ಪರಿಚಯಿಸಲಿದ್ದಾರೆ ಎಂಬ ಮಾತುಗಳು ಬಿ-ಟೌನ್‌ನಲ್ಲಿ ಕೇಳಿಬಂದಿದೆ.

ಈ ಮಧ್ಯೆ, ಸುಹಾನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೋಟೊ ಮತ್ತು ಅದರಲ್ಲಿ ಬಳಸಿರುವ ಎಮೋಜಿ ಒಂದು ಚರ್ಚೆಗೆ ಗ್ರಾಸವಾಗಿದೆ.

ಸುಹಾನಾ ತಾಯಿ ಗೌರಿ ಖಾನ್ ಕ್ಲಿಕ್ ಮಾಡಿರುವ ಫೋಟೊ ಇದಾಗಿದ್ದು, ಅದರ ಅಡಿಬರಹದಲ್ಲಿ ಸುಹಾನಾ ಕೋಪದ ಎಮೋಜಿ ಬಳಸಿ ಪೋಸ್ಟ್ ಮಾಡಿದ್ದಾರೆ.

ಸುಹಾನಾ ಖಾನ್‌ಗೆ ಇನ್‌ಸ್ಟಾಗ್ರಾಂನಲ್ಲಿ 20 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಜತೆಗೆ ಅವರ ಅಭಿಮಾನಿಗಳು ಕೂಡ ಸುಹಾನಾ ಪೋಟೊವನ್ನು ಇಷ್ಟಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು