ಮಂಗಳವಾರ, ಮಾರ್ಚ್ 28, 2023
33 °C

ಹಾಲಿವುಡ್ ನಟ ರಾಕ್‌ನ ತದ್ರೂಪ ಈ ಪೊಲೀಸ್ ಅಧಿಕಾರಿ:ಸ್ವತಃ ಬೆರಗಾದ ಡ್ವೆನ್ ಜಾನ್ಸನ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಗತ್ತಿನಲ್ಲಿ ಒಬ್ಬ ವ್ಯಕ್ತಿಯನ್ನೇ ಹೋಲುವ ಕನಿಷ್ಠ ಏಳು ಜನ ಇರುತ್ತಾರೆ ಎಂದು ಕೇಳಿದ್ದೇವೆ. ಈ ರೀತಿಯ ವ್ಯಕ್ತಿಗಳನ್ನು ನೋಡಿದಾಗ ನಿಜಕ್ಕೂ ಬೆರಗು ಮೂಡುತ್ತದೆ.

ಹಾಲಿವುಡ್ ಜನಪ್ರಿಯ ನಟ, ‘ದಿ ರಾಕ್‘ ಎಂದೇ ಖ್ಯಾತಿಯಾಗಿರುವ ಡ್ವೆನ್ ಜಾನ್ಸನ್ ಅವರಂತೆ ಕಾಣುವ ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬರು ಇಂಟರನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಕಳೆದ ಒಂದು ವಾರದಿಂದ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ಅಮೆರಿಕದ ಅಲ್ಬಾಮಾ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿರುವ ಎರಿಕ್ ಫಿಲ್ಡ್ಸ್ ಅವರು ಇತ್ತೀಚೆಗೆ ವಾಹವವೊಂದರ ತಪಾಸಣೆ ಮಾಡುವ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಜನ ಇದನ್ನು ನೋಡಿ, ಇದು ಹಾಲಿವುಡ್ ನಟ ಡ್ವೆನ್ ಜಾನ್ಸನ್‌ ಎಂದು ಪುಖಾರು ತೆಗೆದರು. ಹಲವು ಜನ ಈ ಫೋಟೊ ಹಿಡಿದುಕೊಂಡು ಇದು ಡ್ವೆನ್ ಹೌದು ಅಲ್ಲ ಎಂದು ಚರ್ಚೆ ಆರಂಭಿಸಿದ್ದರು.

ಈ ಬಗ್ಗೆ ಸ್ವತಃ ಡ್ವೆನ್ ಅವರೇ ಟ್ವೀಟ್ ಮಾಡಿದ್ದು, ತಮ್ಮಂತೆ ಇರುವ ವ್ಯಕ್ತಿಯನ್ನು ಕಂಡು ಬೆರಗಾಗಿದ್ದಾರೆ. ‘ಹುಶಾರಾಗಿರು ಗೆಳೆಯ, ನೀನ್ನ ಸೇವೆಗೆ ನಮ್ಮೆಲ್ಲರ ಧನ್ಯವಾದ, ಶಿಘ್ರವೇ ನಿನ್ನನ್ನು ಭೇಟಿಯಾಗುತ್ತೇನೆ. ಟೆಕ್ಕಿಲಾ ಕುಡಿಯೋಣ‘ ಎಂದು ಶುಭಾಶಯ ಕೋರಿದ್ದಾರೆ.

ಇನ್ನು ಡ್ವೆನ್ ಅವರು ಹಾಲಿವುಡ್‌ನ ಜನಪ್ರಿಯ ನಟರಾಗಿದ್ದು, ಡಬ್ಲೂಡಬ್ಲೂಇ ಶೋಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ತಮ್ಮ ಕಲ್ಲಿನಂತ ಮೈಕಟ್ಟಿನಿಂದ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

 

ಇದನ್ನೂ ಓದಿ: ಮಾಲ್ಡೀವ್ಸ್ ಬೀಚ್‌ನಲ್ಲಿ ಕಾಣಿಸಿಕೊಂಡ ನಟಿ ಸನ್ನಿ ಲಿಯೋನ್!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು