ಸೋತಾಗ ಸಂಗಾತಿ ಮದ್ದು

ಮಂಗಳವಾರ, ಏಪ್ರಿಲ್ 23, 2019
32 °C

ಸೋತಾಗ ಸಂಗಾತಿ ಮದ್ದು

Published:
Updated:

ರಿಚಾ ಚಡ್ಡಾ... ’ಶಕೀಲಾ‘ ಚಿತ್ರದಲ್ಲಿ ಮಲಯಾಳಂ ಚಿತ್ರರಂಗದ ವಿವಾದಿತ ನಟಿ ಶಕೀಲಾ ಪಾತ್ರ ಮಾಡಿರುವ ಬೋಲ್ಡ್‌ ನಟಿ. ಚಿತ್ರ ಬಿಡುಗಡೆಗೆ ಸಿದ್ಧವಾಗಿರುವ ಖುಷಿಯಲ್ಲಿದ್ಧಾರೆ ಅವರು. ಅದೇ ಖುಷಿಯಲ್ಲಿ ರಿಚಾ ಕೆಲವು ಖಾಸ್‌ಬಾತ್‌ಗಳನ್ನು ಹಂಚಿಕೊಂಡಿದ್ದಾರೆ.

ರಿಚಾಗೆ ಒಬ್ಬ ಬಾಯ್‌ಫ್ರೆಂಡ್‌ ಇದ್ದಾರೆ. ಹೆಸರು ಅಲಿ ಫಜಲ್‌. ಅವರ ಪಾಲಿಗೆ ಈ ಯುವಕ ಅನರ್ಘ್ಯ ರತ್ನವಂತೆ! ಯಾವುದಾದರೂ ಕಾರಣಕ್ಕೆ ಮನಸ್ಸು ಕಿರಿಕಿರಿ, ಗೊಂದಲಕ್ಕೆ ಒಳಗಾದರೆ, ಸಮಸ್ಯೆ ಎದುರಾದರೆ ರಿಚಾ ತನ್ನ ಗೆಳೆಯನ ಮೊರೆ ಹೋಗುತ್ತಾರೆ.

ನಟಿಯಾಗಿ ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಪಾಠ ಕಲಿತಿದ್ದರೂ ಗೆಳೆಯನ ಸಾಂಗತ್ಯದಲ್ಲಿ ಸಮಸ್ಯೆಗಳು ಸಲೀಸಾಗಿ ಬಗೆಹರಿಯುತ್ತವೆ ಎಂಬುದು ಬದುಕು ಕಲಿಸಿದ ಸತ್ಯವಂತೆ!

ದಿಬಾಕರ್‌ ಬ್ಯಾನರ್ಜಿ ಅವರ ’ಓಯೆ ಲಕ್ಕಿ ಲಕ್ಕಿ ಓಯೆ‘ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ರಿಚಾ, ಅದರ ಯಶಸ್ಸಿನಿಂದ ಚಿತ್ರರಂಗದ ಗಮನ ಸೆಳೆದರು. ಅದಾದ ಬೆನ್ನಿಗೆ ’ಮಸಾನ್‌‘, ‘ಗ್ಯಾಂಗ್ಸ್‌ ಆಫ್‌ ವಸೀಪುರ್‘ನಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಹೀಗೆ ಗೆದ್ದಾಗಿನ ಖುಷಿಗೂ, ಸೋತಾಗಿನ ಬೇಸರಕ್ಕೂ ಗೆಳೆಯನೇ ಮದ್ದು ಎನ್ನುತ್ತಾರೆ ಈ ಬೆಡಗಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !