ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1981ರ ಅಪರೂಪದ ಚಿತ್ರವಿದು: ಧಾರವಾಡದಲ್ಲಿ ಮಾಸ್ಟರ್‌ ಹಿರಣ್ಣಯ್ಯ ಸತ್ಕಾರ ಸಮಾರಂಭ

Last Updated 2 ಮೇ 2019, 5:55 IST
ಅಕ್ಷರ ಗಾತ್ರ

ಕರ್ನಾಟಕದ ರಂಗಭೂಮಿ ಇತಿಹಾಸದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ ‘ಹಿರಣ್ಣಯ್ಯ ಮಿತ್ರ ಮಂಡಲಿ’ ವೃತ್ತಿಪರ ನಾಟಕ ಕಂಪನಿಗಳಲ್ಲಿ ಅಗ್ರಗಣ್ಯ ಹೆಸರು.

ಹಿರಣ್ಣಯ್ಯನವರ ಮಗ ಎಚ್‌.ನರಸಿಂಹಮೂರ್ತಿ, ‘ಮಾಸ್ಟರ್‌ ಹಿರಣ್ಣಯ್ಯ’ ಎಂದೇ ಖ್ಯಾತಿ ಪಡೆದವರು. ತಮ್ಮ ಮೊನಚು ಮಾತುಗಳಿಂದ, ವಿಡಂಬನೆಗಳಿಂದ, ಹಾಸ್ಯಗಳಿಂದಾಗಿ ಅಪಾರ ಕೀರ್ತಿ ಗಳಿಸಿದ ಅತ್ಯಂತ ಶ್ರೇಷ್ಠ ನಾಟಕಕಾರ. ಅವರ ನಾಟಕಗಳು, ಅದರಲ್ಲಿ ಅವರ ಪಾತ್ರಗಳು ತುಂಬಾ ವಿಭಿನ್ನವಾದವುಗಳು. ಅಲ್ಲದೇ ಕಚಗುಳಿ ಇಡುವ, ಬಡಿದೆಬ್ಬಿಸುವ, ಚುಚ್ಚುವ ಮಾತುಗಳಿಂದಾಗಿ ಸಮಾಜವನ್ನು ಎಚ್ಚರಿಸುವ ಸಂದೇಶಗಳನ್ನು ಹೊತ್ತ ಅವರ ನಾಟಕಗಳು ಅತ್ಯಂತ ಜನಪ್ರಿಯವಾದವುಗಳು.

ಅಲ್ಲದೇ ಜನಮಾನಸದಲ್ಲಿ ಉಳಿಯುವಂಥವು. ‘ಲಂಚಾವತಾರ’ ‘ಭ್ರಷ್ಟಾಚಾರ’ ‘ನಡುಬೀದಿನಾರಾಯಣ’ ‘ದೇವದಾಸಿ’ ಮುಂತಾದ ನಾಟಕಗಳಿಂದ ಮಾಸ್ಟರ್‌ ಹಿರಣ್ಣಯ್ಯ, ವೃತ್ತಿಪರ ರಂಗಭೂಮಿಗೊಂದು ಹೊಸ ಆಯಾಮವನ್ನು ಒದಗಿಸಿದವರು.

ಧಾರವಾಡ ತಾಲ್ಲೂಕು ಬ್ರಾಹ್ಮಣ ಸಮಾಜದ ವತಿಯಿಂದ, ರಂಗಾಸಕ್ತರು ಮಾಸ್ಟರ್‌ ಹಿರಣ್ಣಯ್ಯನವರಿಗೊಂದು ಆತ್ಮೀಯ ಸನ್ಮಾನವನ್ನೇರ್ಪಡಿಸಿ ಸತ್ಕರಿಸಿದಾಗ (19–05–1981) ತೆಗೆದ ಚಿತ್ರವಿದು. ಧಾರವಾಡ ಬಾರ್ ಅಸೋಸಿಯೇಷನ್, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರೂ, ಖ್ಯಾತ ವಕೀಲರೂ ಆಗಿದ್ದ ಎಲ್.ಆರ್.ದುರ್ಗ ಅವರು ಮಾಸ್ಟರ್‌ ಹಿರಣ್ಣಯ್ಯ (ಎಚ್‌. ನರಸಿಂಹಮೂರ್ತಿ) ಅವರನ್ನು ಸತ್ಕರಿಸುತ್ತಿರುವ ಈ ಚಿತ್ರದಲ್ಲಿ ಅಧ್ಯಕ್ಷತೆ ವಹಿಸಿದ್ದ ಖ್ಯಾತ ನಾಟಕಕಾರ ಎನ್ಕೆ ಕುಲಕರ್ಣಿ ಅವರೂ ಇದ್ದಾರೆ.

ಚಿತ್ರ–ವಿವರಣೆ: ಶಶಿ ಸಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT