ಖ್ಯಾತ ಕಥೆಗಾರ, ನಾಟಕಕಾರ ಸಾಗರ್ ಸರ್ಹದಿ ಅವರ ಸ್ಮರಣಾರ್ಥ ಕಟ್ಪುಥಲಿಯಾ ರಂಗ ತಂಡವು ‘ದಸ್ತಕ್: ಮೂರು ಸಣ್ಣ ಕಥೆಗಳ ಸಂಗ್ರಹ’ ಎನ್ನುವ ಮೂರು ನಾಟಕಗಳ ಪ್ರದರ್ಶನವನ್ನು ಇದೇ 14 ಮತ್ತು 15ರಂದು ರಂಗಶಂಕರದಲ್ಲಿ ಆಯೋಜಿಸಿದೆ. ನಾಟಕಗಳನ್ನು ಜಾಫರ್ ಮೊಹಿಯುದ್ದೀನ್ ಅವರು ನಿರ್ದೇಶಿಸಿದ್ದಾರೆ.
ಸಾಗರ್ ಸರ್ಹದಿ ಅವರು ಭಾರತದ ವಿಭಜನೆಯ ನೋವನ್ನು ಉಂಡವರು. ವಿಭಜನೆಯ ನೋವು, ಸಂಕಟ ಅವರ ಬರಹಗಳಲ್ಲೂ ಪ್ರತಿಫಲಿತವಾಗಿದೆ. ಈ ಮೂರು ನಾಟಕಗಳ ಕಥಾವಸ್ತು ಕೂಡ ವಿಭಜನೆಗೆ ಸಂಬಂಧಿಸಿದವು.
1. ಮಿರ್ಜಾ ಸಾಹೇಬ್: ಜನರ ಒಲವು ಇಲ್ಲದಿದ್ದರೂ, ಧರ್ಮವು ಹೇಗೆ ಸಾಮಾನ್ಯ ಜನರ ಮಧ್ಯೆ ಒಂದು ಕಂದಕವನ್ನು ಸೃಷ್ಟಿ ಮಾಡುತ್ತದೆ. ಒಬ್ಬರನ್ನೊಬ್ಬರು ದ್ವೇಷಿಸುವಂತೆ ಮಾಡುತ್ತದೆ ಎಂಬುದರ ಕುರಿತು ಈ ನಾಟಕವಿದೆ.
2. ಕಿಸಿ ಸೀಮಾ ಕಿ ಏಕ್ ಮಾಮೂಲಿ ಸಿ ಘಟ್ನಾ: ಒಂದು ದೇಶದ ಗಡಿ ಭಾಗದಲ್ಲಿ ನಡೆಯುವ ಒಂದು ಮಾಮೂಲಿ ಸಣ್ಣ ಘಟನೆ ಅಧಿಕಾರದ ಪ್ರವೇಶದಿಂದಾಗಿ ಹೇಗೆ ಬೇರೆ ಬೇರೆ ಬಣ್ಣ ಪಡೆದುಕೊಳ್ಳುತ್ತದೆ, ಒಂದು ವ್ಯವಸ್ಥೆಯನ್ನು ಹೇಗೆ ಅದು ಘಾಸಿಗೊಳಿಸುತ್ತದೆ ಮತ್ತು ಇದರ ಪರಿಣಾಮವಾಗಿ ಮಾನವೀಯತೆ ಹೇಗೆ ಸತ್ತು ಹೋಗುತ್ತದೆ ಎನ್ನುವುದರ ಕುರಿತು ಈ ನಾಟಕವಿದೆ.
3. ಖಯಾಲ್ ಕಿ ದಸ್ತಕ್: ಬೇರೆಯವರೊಂದಿಗೆ ಮದುವೆ ಆಗಿದ್ದ ಪ್ರೇಯಸಿಯನ್ನು, ಮಾಜಿ ಪ್ರಿಯಕರನೊಬ್ಬ ವರ್ಷಗಳ ನಂತರ ಭೇಟಿ ಮಾಡುವ ಕಥಾಹಂದರ ಇದರಲ್ಲಿದೆ.
ಸ್ಥಳ: ರಂಗಶಂಕರ, 8ನೇ ತಿರುವು, ಆರ್.ಕೆ ಕಾಲೊನಿ, 2ನೇ ಹಂತ, ಜೆ.ಪಿ.ನಗರ
ದಿನಾಂಕ: 14 ಮತ್ತು 15ನೇ ಅಕ್ಟೋಬರ್, 2021
ಸಮಯ: ಸಂಜೆ 7ಕ್ಕೆ
ದರ: ₹250, bookmyshowನಲ್ಲೂ ಟಿಕೆಟ್ ಅನ್ನು ಕಾಯ್ದಿರಿಸಬಹುದಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.