ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಏಕವ್ಯಕ್ತಿ ರಂಗ ಪ್ರಯೋಗದ 'ಊರ್ಮಿಳಾ'

Last Updated 2 ಜುಲೈ 2018, 13:29 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಸಿಜಿಕೆ ರಂಗ ಪುರಸ್ಕಾರ ಸಮಾರಂಭದಲ್ಲಿ ಸಾಗರದ ಸ್ಪಂದನ ತಂಡದ ಕಲಾವಿದೆ ಎಂ.ವಿ. ಪ್ರತಿಭಾ ಅವರು ಶ್ರೀಪಾದ ಭಟ್ ನಿರ್ದೇಶನದಲ್ಲಿ ಅಭಿನಯಿಸಿದ ಏಕವ್ಯಕ್ತಿ ನಾಟಕ ' ಊರ್ಮಿಳಾ' ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಪಟ್ಟಣದ ತುಂಗಾ ಮಹಾವಿದ್ಯಾಲಯದ ರಜತ ಸಭಾಂಗಣದಲ್ಲಿ ಈಚೆಗೆ ಕಿಕ್ಕಿರಿದು ತುಂಬಿದ್ದ ವಿದ್ಯಾರ್ಥಿಗಳು ಎಂ.ವಿ. ಪ್ರತಿಭಾ ಅವರ ಮನೋಜ್ಞ ಅಭಿನಯವನ್ನು ತದೇಕಚಿತ್ತದಿಂದ ವೀಕ್ಷಿಸಿದರು. ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ 'ಊರ್ಮಿಳಾ' ಏಕ ವ್ಯಕ್ತಿ ರಂಗ ನಾಟಕ. ಪಾತ್ರವೊಂದರ ಕಾವ್ಯಾನುಸಂಧಾನ ಮತ್ತು ಅದೇ ಕಾಲಕ್ಕೆ ಪುರಾಣವೊಂದರ ರಾಜಕೀಯ ಓದು ಎರಡೂ ಆಗಿರುವುದು ನಾಟಕದ ವಿಶೇಷ. ಪ್ರಸ್ತುತ ಸಂದರ್ಭದ ಸಮಾಜವನ್ನು ತೆರೆದಿಡುವ ನಾಟಕದಲ್ಲಿ ಪ್ರತಿಭಾ ಅವರ ಅಭಿನಯ ಹಾಗೂ ಸಂಭಾಷಣೆ ಪ್ರೇಕ್ಷಕರನ್ನು ಕಟ್ಟಿಹಾಕುವಂತೆ ಮಾಡಿತು.

ಏಕವ್ಯಕ್ತಿ ಮಹಿಳಾ ರಂಗ ಪ್ರಯೋಗದಲ್ಲಿ ನಟಿಯ ಮೂಲಕ ಪಾತ್ರ ಮಾತನಾಡುವುದಿಲ್ಲ. ಬದಲಾಗಿ ನಟನೆಯೇ ಪಾತ್ರದ ಮೂಲಕ ವರ್ತಮಾನದ ಸಂದಿಗ್ದಗಳ ಕುರಿತು ಪ್ರೇಕ್ಷಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದು ನಾಟಕದುದ್ದಕ್ಕೂ ಕಂಡು ಬಂತು. ರಾಮಾಯಣದಲ್ಲಿ ಶಾಂತವಾದ ಒಳಹರಿವಿನಂತೆ ಕಾಣುವ ಊರ್ಮಿಳಾ ಪಾತ್ರದ ಒಳಗೆಲ್ಲ ತೀವ್ರತೆಯಲ್ಲಿ ಬೆಂದ ಕುರುಹುಗಳನ್ನು ನಾಟಕದಲ್ಲಿ ಕಾಣಬಹುದಾಗಿದೆ. ಅಧಿಕಾರದ ದಾಹ, ರಾಜಕೀಯ ಒಳಸುಳಿವು, ಬಿಳಿ ತೊಗಲ ದಬ್ಬಾಳಿಕೆ, ವರ್ಣ ಸಂಘರ್ಷ, ವಸಾಹತುಕರಣದ ಬಗ್ಗೆ ಮಾತನಾಡುತ್ತಾ 'ಊರ್ಮಿಳಾ' ನಾಟಕ ರಾಮಾಯಣವನ್ನು ವರ್ತಮಾನದತ್ತ ಹೆಣ್ಣು ದನಿಯಲ್ಲಿ ನಿರೂಪಿಸುತ್ತದೆ.

ನಾಟಕದ ಸನ್ನಿವೇಶ, ಘಟನೆಗಳು ತೆರದುಕೊಳ್ಳುತ್ತಾ ಹೋದಂತೆ ವೈಯುಕ್ತಿಕ ಕಾರಣಗಳನ್ನು ದಾಟಿ ಇಡೀ ಮನುಕುಲದ ದುರಂತವನ್ನು ಪ್ರತಿಧ್ವನಿಸುವುದನ್ನು ನಾಟಕದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ದಿನನಿತ್ಯದ ಸಾಂಸಾರಿಕ ಸಣ್ಣತನವನ್ನು ದಾಟಿ ಪ್ರಾಕೃತಿಕ ಜಗತ್ತಿನೊಂದಿಗೆ ಸಂಸಾರವನ್ನು ಕಟ್ಟಿಕೊಳ್ಳುವ ಸಾಧ್ಯತೆಯನ್ನು 'ಊರ್ಮಿಳೆ' ಕಾಣಿಸುತ್ತಾಳೆ. 2004ರಲ್ಲಿ ಸಾಗರದಲ್ಲಿ ಸ್ಪಂದನಾ ಹವ್ಯಾಸಿ ರಂಗ ತಂಡವನ್ನು ಹುಟ್ಟುಹಾಕಿ ರಂಗಚಟುವಟಿಕೆಯಲ್ಲಿ ಸಕ್ರಿಯರಾಗಿ ತೊಡಗಿರುವ ಎಂ.ವಿ. ಪ್ರತಿಭಾ ಅವರು 'ಊರ್ಮಿಳಾ'ನಾಟಕದ ಪ್ರದರ್ಶನವನ್ನು ಸಾಗರ, ಕುಪ್ಪಳಿ, ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿ ನೀಡುವ ಮೂಲಕ ರಂಗಾಸಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಉತ್ತಮ ರಂಗಸಜ್ಜಿಕೆ ಇಂಪಾದ ಸಂಗೀತ, ಮುದ ನೀಡುವ ಬೆಳಕು ನಾಟಕದ ಮೆರುಗನ್ನು ಹೆಚ್ಚಿಸಿದೆ. ರಂಗ ಚಟುವಟಿಕೆಯ ಕಡೆಗೆ ಯುವ ಸಮೂಹ, ವಿದ್ಯಾರ್ಥಿಗಳನ್ನು ಸೆಳೆಯುವಂತೆ ಮಾಡುವಲ್ಲಿ ನಾಟಕ ಪರಿಣಾಮಕಾರಿಯಾಗಿ ಮೂಡಿಬಂತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT