ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎಂಜಿ! ಯೇ ಮೇರಾ ಇಂಡಿಯಾದಲ್ಲಿ ‘ಬೆಂಗಳೂರಿನ ಕತೆ’

Last Updated 26 ಜನವರಿ 2020, 19:45 IST
ಅಕ್ಷರ ಗಾತ್ರ

ಹಿಸ್ಟರಿ ಟಿವಿಯಲ್ಲಿ ಪ್ರಸಾರವಾಗುವ ‘ಒಎಂಜಿ! ಯೇ ಮೇರಾ ಇಂಡಿಯಾ’ ಸೀಸನ್ 6 ಸಂಚಿಕೆಯಲ್ಲಿ ‘ಬೆಂಗಳೂರಿನ ಕತೆಗಳು’ ಪ್ರಸಾರವಾಗಲಿದೆ. ಈ ಕಾರ್ಯಕ್ರಮ ಪ್ರತಿ ಸೋಮವಾರ ಮತ್ತು ಮಂಗಳವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಈ ವಾರದ ಸಂಚಿಕೆಯಲ್ಲಿ ಬೆಂಗಳೂರಿನ ಭಾರತ್ ಬಿಯರ್ಡ್ ಕ್ಲಬ್ ಹಾಗೂ ಮಾಧವಿ ಫಾರ್ಮ್ಸ್ ಬಗ್ಗೆ ಮಾಹಿತಿ ಪ್ರಸಾರವಾಗಲಿದೆ.

2016 ರಲ್ಲಿ ವಿಶಾಲ್ ಸಿಂಗ್ ಎಂಬುವವರು ಭಾರತ್ ಬಿಯರ್ಡ್ ಕ್ಲಬ್ ಆರಂಭಿಸಿದರು. ಈ ಕ್ಲಬ್‌ನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಚಾಂಪಿಯನ್‌ಶಿಪ್‌ ಸ್ಪರ್ಧೆಗಳು, ಕ್ಲಬ್ ಸಾಧನೆಯ ಪರಿಚಯ ಮಾಡಲಿದೆ.

ಮುಂದಿನ ಕಂತಿನಲ್ಲಿ ಅಕ್ವಾಪೋನಿಕ್ಸ್ ಎಂಬ ಹೊಸ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಿರುವ ಮಾಧವಿ ಫಾರ್ಮ್ಸ್ ಪರಿಚಯವಿದೆ. ನಗರದ ನಿವಾಸಿ ಕೆ. ವಿಜಯಕುಮಾರ್ ಸ್ಥಾಪಿಸಿದ ಮಾಧವಿ ಫಾರ್ಮ್ಸ್ ಭಾರತದ ಮೊದಲ ಮತ್ತು ಅತಿದೊಡ್ಡ ಅಕ್ವಾಪೋನಿಕ್ಸ್ ಫಾರ್ಮ್. 60 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಫಾರ್ಮ್ ಪ್ರತಿವರ್ಷ 50 ಟನ್ ಗಿಡಮೂಲಿಕೆಗಳು, 250 ಟನ್ ಹಣ್ಣುಗಳು ಮತ್ತು ತರಕಾರಿಗಳನ್ನು ಉತ್ಪಾದಿಸುತ್ತದೆ. ಮಾಧವಿ ಫಾರ್ಮ್ಸ್ ಬಗ್ಗೆ ವಿಶೇಷ ಕತೆ ಪ್ರಸಾರವಾಗಲಿದೆ. ಜ. 27 (ಸೋಮವಾರ) ಮತ್ತು ಜ. 28 (ಮಂಗಳವಾರ) ರಾತ್ರಿ 8 ಗಂಟೆಗೆ ಹಿಸ್ಟರಿ ಟಿವಿ18ಯಲ್ಲಿ ‘ಒಎಂಜಿ! ಯೇ ಮೇರಾ ಇಂಡಿಯಾ’ ಕಾರ್ಯಕ್ರಮ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT