ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK-10 | ಸೂಪರ್‌ ಸಂಡೆ ವಿತ್‌ ಸುದೀಪ್‌: ಮಡಿಕೆಯೊಟ್ಟಿಗೆ ಮನಸುಗಳೂ ಒಡೆಯಿತೇ?

Published 17 ಡಿಸೆಂಬರ್ 2023, 6:50 IST
Last Updated 17 ಡಿಸೆಂಬರ್ 2023, 6:50 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್‌ ಮನೆ ದಿನದಿಂದ ದಿನಕ್ಕೆ ಕಷ್ಟದ ದಾರಿಯಲ್ಲಿ ಸಾಗುತ್ತಿದೆ. ಮನೆಯೊಳಗಿನ ಸ್ಪರ್ಧಿಗಳಿಗೆ ಪ್ರತಿ ವಾರವೂ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ.

ಬಿಗ್‌ಬಾಸ್‌ ಮನೆಯೊಳಗೆ ಯಾರೂ ಸ್ನೇಹಿತರಲ್ಲ, ಯಾರೂ ಶತ್ರುಗಳೂ ಅಲ್ಲ ಎಂಬುದು ಸತ್ಯವಾಗುತ್ತಿದೆ. ಇದನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡುವಂತಹ ಚಟುವಟಿಕೆಯೊಂದನ್ನು ‘ಸೂಪರ್‌ ಸಂಡೆ ವಿತ್‌ ಸುದೀಪ್‌’ ಸಂಚಿಕೆಯಲ್ಲಿ ಕಿಚ್ಚ ಮನೆಯ ಸದಸ್ಯರಿಗೆ ನೀಡಿದ್ದಾರೆ.

ಚಟುವಟಿಕೆಯ ಅನುಸಾರ ಒಂದು ಬಿದಿರುಗೊಂಬೆಯನ್ನು ನಿಲ್ಲಿಸಲಾಗಿದ್ದು, ಅದರ ಮೇಲೆ ಒಂದು ಮಡಿಕೆಯನ್ನು ಜೋಡಿಸಲಾಗಿದೆ. ಸದಸ್ಯರು ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಒಬ್ಬರ ಫೋಟೊವನ್ನು ಮಡಿಕೆ ಮೇಲೆ ಅಂಟಿಸಿ, ಯಾವ ವಿಚಾರಕ್ಕೆ ಅವರ ಮೇಲೆ ಕೋಪವಿದೆ ಎಂಬುದನ್ನು ಹೇಳಿ ನಂತರ ಆ ಮಡಿಕೆಯನ್ನು ಒಡೆಯಬೇಕು.

ಎಲ್ಲರ ಊಹೆಯಂತೆ ಈ ಚಟುವಟಿಕೆಯಲ್ಲಿ ವಿನಯ್‌, ಸಂಗೀತಾ ಅವರ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಅದೇ ರೀತಿ ಸಂಗೀತಾ ಕೂಡ ವಿನಯ್‌ ಅವರ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಆದರೆ, ಈ ನಡುವೆ ಕಾರ್ತಿಕ್‌, ಸಂಗೀತಾ ಅವರ ಫೋಟೊ ಇಟ್ಟು ಮಡಿಕೆ ಒಡೆದಿರುವುದು ಎಲ್ಲರನ್ನು ಆಶ್ಚರ್ಯಗೊಳಿಸಿದೆ.

ಯಾವಾಗಲೂ ಸಂಗೀತಾ ನನ್ನ ಫ್ರೆಂಡ್‌ ಎಂದೇ ಹೇಳಿಕೊಂಡು ಬಂದಿದ್ದ ಕಾರ್ತಿಕ್‌, ಹಲವು ಸಂದರ್ಭಗಳಲ್ಲಿ ಸಂಗೀತಾ ಪರವಾಗಿ ನಿಂತಿದ್ದರು. ಆದರೆ, ‘ಕಾರ್ತಿಕ್‌ ಅವರಿಂದ ಸಂಗೀತಾರನ್ನು ಮೈನಸ್‌ ಮಾಡಿದ್ರೆ ಜಿರೊ ಬರುತ್ತದೆ’ ಎಂದು ಹೇಳಿರುವುದು ಅವರಿಗೆ ಅಸಮಾಧಾನವನ್ನುಂಟು ಮಾಡಿದೆ. ಇದೇ ಕಾರಣ ನೀಡಿ ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿರುವ ಕಾರ್ತಿಕ್‌, ‘ನನ್ನಿಂದ ಸಂಗೀತಾರನ್ನು ಮೈನಸ್‌ ಮಾಡಿದ್ದೇನೆ. ನಾನು ಜಿರೊ ಅನ್ನುವುದನ್ನು ಪ್ರೂವ್‌ ಮಾಡಲಿ’ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT