ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Big Boss 8: ದಿವ್ಯಾ ಸುರೇಶ್ ಬಗ್ಗೆ ಪ್ರಶಾಂತ್ ಸಂಬರಗಿ ವಿವಾದಾತ್ಮಕ ಕಾಮೆಂಟ್

Last Updated 8 ಏಪ್ರಿಲ್ 2021, 9:26 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯಲ್ಲಿ ವಿವಾದಿತ ವ್ಯಕ್ತಿ ಎಂದೇ ಕುಖ್ಯಾತರಾದ ಪ್ರಶಾಂತ್ ಸಂಬರಗಿ ಮತ್ತೊಮ್ಮೆ ಆಡಬಾರದ ಮಾತನ್ನು ಆಡಿ ವಿವಾದ ಸೃಷ್ಟಿಸಿದ್ದಾರೆ. ಮಂಜು ಜೊತೆ ಚೆನ್ನಾಗಿರುವ ದಿವ್ಯಾ ಸುರೇಶ್ ಅವರನ್ನು 'ನಿನ್ನ ಡವ್' ಎಂದು ಹೇಳಿಕೆ ಕೊಟ್ಟು ಇಬ್ಬರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

‘ನಿನ್ ಡವ್‌ಗೆ ಹೇಳು’: ಮಧ್ಯರಾತ್ರಿಯಲ್ಲಿ ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಬರಗಿ ಉಟ್ಟ ಬಟ್ಟೆಯಲ್ಲೇ ಸ್ವಿಮ್ಮಿಂಗ್ ಪೂಲ್‌ಗೆ ಇಳಿದು ಹಾಡು ಹಾಡುತ್ತಾ ನಲಿದಾಡುತ್ತಿದ್ದರು. ಅತ್ತ, ಲಿವಿಂಗ್ ಏರಿಯಾದಲ್ಲಿ ಮಲಗಿದ್ದ ದಿವ್ಯಾ ಸುರೇಶ್, ಶಬ್ದ ಮಾಡಬೇಡಿಎಂದು ಜೋರಾಗಿ ಹೇಳಿದರು. ಈ ಸಂದರ್ಭ, ನಾಯಕ ಮಂಜು ಪಾವಗಡ ಶಬ್ದ ಮಾಡದಂತೆ ಪ್ರಶಾಂತ್, ಚಕ್ರವರ್ತಿಗೆ ಬುದ್ಧಿ ಹೇಳಿದರು. ಇದಕ್ಕೆ ತಿರುಗಿಬಿದ್ದ ಪ್ರಶಾಂತ್ ಸಂಬರಗಿ, ಬೆಡ್ ರೂಮಲ್ಲಿ ಮಲಗಿದ್ದರೆ ನಾವು ಶಬ್ದ ಮಾಡುವುದಿಲ್ಲ. ಇದು ಲಿವಿಂಗ್ ಏರಿಯಾ. ಇದು ಇರುವುದೇ ಶಬ್ದ ಮಾಡುವುದಕ್ಕೆ ಎಂದರು. ಅಷ್ಟಕ್ಕೆ ಸುಮ್ಮನಾಗದೆ, ನೀನು ರಾತ್ರಿಯೆಲ್ಲ ಹುಡುಗಿಯರ ಜೊತೆ ಮಾತಾಡಬಹುದಾ? ಹೋಗು ‘ನಿನ್ನ ಡವ್‌ಗೆ ಬುದ್ಧಿ ಹೇಳು’ ಎಂದು ದಿವ್ಯಾ ಸುರೇಶ್ ಬಗ್ಗೆ ಕಾಮೆಂಟ್ ಮಾಡಿದರು

ನೀವು ಆಡುತ್ತಿರುವ ಮಾತು ಸರಿಯಲ್ಲ. ನಮ್ಮ ವಿಷಯದಲ್ಲೂ ಹೀಗೆ ಮಾಡಿದಿರಿ ಪ್ರಶಾಂತ್ ಎಂದು ಅರವಿಂದ್ ಮತ್ತು ದಿವ್ಯಾ ಉರುಡುಗ ತಿಳಿ ಹೇಳಿದರು. ಹಿಂಗೆಲ್ಲ ಮಾತಾಡಬೇಡ ಮಾವ ಎಂದು ಮಂಜು ಅತ್ತ ಕಡೆಯಿಂದ ಧಾವಿಸಿ ಬಂದರು. ಯಾಕೆ ಮಾತನಾಡಬಾರದು? ನನ್ನನ್ನು ಮಾವ ಅಂತೀಯಲ್ಲ. ನಾನೇನು ಬರೆದುಕೊಟ್ಟಿದ್ದೀನಾ? ಎಷ್ಟು ಹೇಳಿದರೂ ಅದೇ ಹೇಳ್ತೀಯಾ ಎಂದು ತಿರುಗೇಟು ನೀಡಿದರು. ಮಾತು ಅತಿರೇಕಕ್ಕೆ ಹೋಗಿ ಅಪ್ಪನ ವಿಷಯವೂ ಬಂದು ಹೋಯಿತು.

ತಾಳ್ಮೆ ಕಳೆದುಕೊಂಡ ದಿವ್ಯಾ ಸುರೇಶ್: ಈ ಮಾತುಗಳನ್ನು ಕೇಳಿ ಸ್ವಿಮ್ಮಿಂಗ್ ಪೂಲ್ ಬಳಿಗೆ ಬಂದ ದಿವ್ಯಾ ಸುರೇಶ್ ಅವರು, ಪ್ರಶಾಂತ್ ನನ್ನನ್ನು ಮಂಜು ಡವ್ ಎನ್ನುವುದಕ್ಕೆ ನಿನಗೆ ಯಾವುದೇ ಹಕ್ಕಿಲ್ಲ ಎಂದು ಕೋಪದಿಂದ ಕಿರುಚಾಡಿದರು. ಜಗತ್ಜಾಹೀರಾಗಿರುವುದನ್ನೇ ಹೇಳಿದ್ದು ಎಂದು ಸಂಬರಗಿ ಸಮರ್ಥಿಸಿಕೊಂಡರು.

ಗದ್ದಲ, ಕೋಲಾಹಲದ ಬಳಿಕ ಸಂಧಾನಕ್ಕೆ ಬಂದ ಮಂಜು ಪಾವಗಡ, ಪ್ರಶಾಂತ್ ಅವರೇ ನಾನು ನಿಮ್ಮನ್ನು ಮಾವ ಎಂದು ಕರೆಯುವುದಿಲ್ಲ. ನೀವೂ ಸಹ ದಿವ್ಯಾ ಅವರ ಬಗ್ಗೆ ಮಾತನಾಡಬಾರದು ಎಂದು ಹೇಳಿ ವಿವಾದವನ್ನು ಸಮಾಪ್ತಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT