ಬಿಗ್‌ಬಾಸ್‌ ವಿನ್ನರ್‌ ಯಾರು?

7

ಬಿಗ್‌ಬಾಸ್‌ ವಿನ್ನರ್‌ ಯಾರು?

Published:
Updated:

ಕಲರ್ಸ್‌ ಸೂಪರ್‌ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್‌ ಸೀಸನ್ 6 ಸ್ಪರ್ಧೆಯು ಅಂತಿಮ ಘಟ್ಟ ತಲುಪಿದೆ. ಶನಿವಾರ(ಜ. 26) ಮತ್ತು ಭಾನುವಾರ(ಜ.27)ದಂದು ಗ್ರ್ಯಾಂಡ್‌ ಫಿಲಾನೆ ನಡೆಯಲಿದೆ. 

ಬಿಗ್‌ಬಾಸ್‌ ಮನೆಯಲ್ಲಿ ನವೀನ್ ಸಜ್ಜು, ಶಶಿಕುಮಾರ್, ಕವಿತಾ ಗೌಡ, ರ‍್ಯಾಪಿಡ್ ರಶ್ಮಿ ಹಾಗೂ ಆ್ಯಂಡಿ ಉಳಿದಿದ್ದಾರೆ. ಇವರಲ್ಲಿ ಯಾರು ಬಿಗ್‌ಬಾಸ್‌ ಆಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಮನೆಯಲ್ಲಿ ಉಳಿದಿರುವ ಐದು ಮಂದಿಯ ಪೈಕಿ ಒಬ್ಬರು ಶನಿವಾರ ಎಲಿಮಿನೇಷನ್ ಆಗಲಿದ್ದಾರೆ.

ಸೀಸನ್ 1ರಲ್ಲಿ ನಟ ವಿಜಯ್ ರಾಘವೇಂದ್ರ ಗೆದ್ದಿದ್ದರು. ಎರಡನೇ ಸೀಸನ್‌ನಲ್ಲಿ ನಿರೂಪಕ ಅಕುಲ್ ಬಾಲಾಜಿ ಬಿಗ್‌ಬಾಸ್ ಕಿರೀಟ ಧರಿಸಿದ್ದರು. ಮೂರನೇ ಸೀಸನ್‌ನಲ್ಲಿ ನಟಿ ಶ್ರುತಿ ವಿನ್ನರ್‌ ಆಗಿದ್ದರು. ನಾಲ್ಕನೇ ಸೀಸನ್‌ನಲ್ಲಿ ಪ್ರಥಮ್ ಗೆದ್ದಿದ್ದರು. ಐದನೇ ಸೀಸನ್‌ನಲ್ಲಿ ಗಾಯಕ ಚಂದನ್ ಶೆಟ್ಟಿ ವಿನ್ನರ್‌ ಆಗಿದ್ದರು.

ಈ ಹಿಂದಿನ ಬಿಗ್‌ಬಾಸ್ ಸೀಸನ್‌ನಲ್ಲಿ ವಿನ್ನರ್‌ಗೆ ₹ 50 ಲಕ್ಷ ಬಹುಮಾನ ಹಾಗೂ ಟ್ರೋಫಿ ನೀಡಿ ಪುರಸ್ಕರಿಸಲಾಗಿತ್ತು. ರನ್ನರ್ ಅಪ್ ಸ್ಪರ್ಧಿಗೆ ₹ 1 ಲಕ್ಷ ಬಹುಮಾನ ಲಭಿಸಲಿದೆ. ಈ ಬಾರಿಯೂ ಕಿಚ್ಚ ಸುದೀಪ್ ಬಹುಮಾನ ವಿತರಿಸಲಿದ್ದಾರೆ. ಹಿಂದಿನ ಸೀಸನ್‌ಗಳಲ್ಲಿ ಸುದೀಪ್‌ ರನ್ನರ್ ಅಪ್ ಸ್ಪರ್ಧಿಗೆ ವೈಯಕ್ತಿಕವಾಗಿ ಸಹಾಯ ನೀಡಿದ್ದರು.

ಬಿಗ್‌ಬಾಸ್‌ನ ಸ್ಪರ್ಧೆಯಲ್ಲಿ ಗೆದ್ದವರು ಮತ್ತು ಭಾಗವಹಿಸುವ ಸ್ಪರ್ಧಿಗಳಿಗೆ ಬೆಳ್ಳಿತೆರೆಯಲ್ಲಿ ನಟನೆಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಹಿಂದಿನ ಸೀಸನ್‌ಗಳಲ್ಲಿ ಭಾಗವಹಿಸಿದ್ದ ಹಲವರು ಈಗ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಈ ಸೀಸನ್‌ನ ಸ್ಪರ್ಧಿಗಳಿಗೂ ಇಂತಹ ಅವಕಾಶಗಳು ಸಿಗುವುದರಲ್ಲಿ ಅನುಮಾನವಿಲ್ಲ.

Tags: 

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 3

  Sad
 • 2

  Frustrated
 • 7

  Angry

Comments:

0 comments

Write the first review for this !