ಶನಿವಾರ, ಮಾರ್ಚ್ 25, 2023
25 °C

Bigg Boss 8: ಶಾಕಿಂಗ್ ಎಲಿಮಿನೇಶನ್.. ಇವರೇ ನೋಡಿ ಟಾಪ್ 5 ಫೈನಲಿಸ್ಟ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಲವು ಏಳುಬೀಳುಗಳನ್ನು ಕಂಡ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 8ರ ಫಿನಾಲೆಗೆ ಕೆಲವೇ ದಿನ ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆಯೇ, ಫಿನಾಲೆಯಲ್ಲಿ ಕಾಣಿಸಿಕೊಳ್ಳುವ ಟಾಪ್ 5 ಸ್ಪರ್ಧಿಗಳನ್ನು ಬಿಗ್ ಬಾಸ್ ಅಂತಿಮಗೊಳಿಸಿದ್ದಾರೆ.

ಕಳೆದ ವಾರಾಂತ್ಯದಲ್ಲಿ ನಡೆದ ಎಲಿಮಿನೇಶನ್‌ನಲ್ಲಿ ಉಳಿದುಕೊಂಡಿದ್ದ 6 ಸದಸ್ಯರ ಪೈಕಿ ದಿವ್ಯಾ ಸುರೇಶ್ ಬುಧವಾರ ಮನೆಯಿಂದ ಹೊರಬಿದ್ದಿದ್ದಾರೆ. ಮಂಜು ಪಾವಗಡ, ಕೆ.ಪಿ. ಅರವಿಂದ್, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಫಿನಾಲೆಗೆ ಹೋಗುತ್ತಿದ್ದಾರೆ.

ಮೊದಲ ಸುತ್ತಿನಲ್ಲೇ ಸೇಫ್ ಆದ ಅರವಿಂದ್ ಫಿನಾಲೆಗೆ ಮೊದಲ ಅಡಿ ಇಟ್ಟರು. ಬಳಿಕ ಮತ್ತೊಬ್ಬ ಟಾಪ್ ಸ್ಪರ್ಧಿ ವೈಷ್ಣವಿ ಸೇಫ್ ಆಗುವುದರೊಂದಿಗೆ ಇಬ್ಬರು ಫಿನಾಲೆಗೆ ಎಂಟ್ರಿ ಹಾಕಿದರು. ಬಳಿಕ, ಕ್ರಮವಾಗಿ ಮಂಜು ಪಾವಗಡ, ದಿವ್ಯಾ ಉರುಡುಗ ಅಂತಿಮ ಹಂತಕ್ಕೆ ಲಗ್ಗೆ ಇಟ್ಟರು.

ಕೊನೆಯಲ್ಲಿ ಉಳಿದಿದ್ದ ಪ್ರಶಾಂತ್ ಸಂಬರಗಿ ಮತ್ತು ದಿವ್ಯಾ ಸುರೇಶ್ ಅವರಿಗೆ ಬಿಗ್ ಬಾಸ್ ಎರಡು ಆಯ್ಕೆ ಕೊಟ್ಟರು. ಮನೆಯಲ್ಲಿ ಕಾಣುವ ಎರಡು ಬಾಗಿಲ ಮೂಲಕ ಇಬ್ಬರೂ ಹೊರ ಹೋಗಬೇಕು. ಬಜರ್ ಆದಾಗ ಯಾವ ಬಾಗಿಲು ತೆರೆದು ಯಾರು ಮನೆಯ ಒಳಗೆ ಬರುತ್ತಾರೋ ಅವರು ಸೇಫ್ ಎಂದು ಬಿಗ್ ಬಾಸ್ ಹೇಳಿದರು. ಅದೃಷ್ಟವಾಶಾತ್, ಸಂಬರಗಿಗೆ ಬಾಗಿಲು ತೆರೆಯಿತು. ಮನೆಯಲ್ಲಿ ವಿವಾದಿತ ವ್ಯಕ್ತಿ ಎಂದು ಹೆಸರಾಗಿದ್ದ ಪ್ರಶಾಂತ್ ಸಂಬರಗಿ ಫಿನಾಲೆಗೆ ಕಾಲಿಡುವ ಮೂಲಕ ಗಮನ ಸೆಳೆದರು.

ಕಳೆದ ವಾರ ಮನೆಯ ಟಾಸ್ಕ್‌ಗಳಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ತೋರದೆ ಕಳಪೆ ಪಟ್ಟ ಹೊತ್ತಿದ್ದ ದಿವ್ಯಾ ಸುರೇಶ್ ಮನೆಯಿಂದ ಹೊರ ಹೋಗಿದ್ದಾರೆ. ಕೊನೆಯ ಹಂತದಲ್ಲಿ ಉತ್ಸಾಹ ಕಳೆದುಕೊಂಡಿದ್ದೇ ದಿವ್ಯಾ ಅವರಿಗೆ ಮುಳುವಾಯ್ತೆ ಎಂಬ ಪ್ರಶ್ನೆ ಎದ್ದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು