ಶುಕ್ರವಾರ, ಜನವರಿ 27, 2023
21 °C

Bigg Boss 8: ಮಂಜು ಅವರಿಂದಲೂ ಕಳಪೆ ಪಟ್ಟ! ಜೈಲು ಸೇರಿದ ದಿವ್ಯಾ ಸುರೇಶ್ ಅಳಲು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 8ರ ಟಾಪ್ ಸ್ಪರ್ಧಿಗಳಲ್ಲಿ ಒಬ್ಬರಾದ ದಿವ್ಯಾ ಸುರೇಶ್ ಕಳಪೆ ಪಟ್ಟ ಹೊತ್ತು ಮನೆಯ ಜೈಲು ಸೇರಿದ್ದಾರೆ.

ಹೌದು, ಕಾರ್ಯಕ್ರಮ ಆರಂಭವಾದಾಗಿನಿಂದ ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ದಿವ್ಯಾ ಸುರೇಶ್ ಅವರು ಈ ವಾರ ಕಳಪೆ ಸ್ಪರ್ಧಿಯಾಗಿದ್ದಾರೆ. ಬಿಗ್ ಬಾಸ್ ಕೊಟ್ಟ ಮೂರೂ ಟಾಸ್ಕ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಅವರು ಮೂರರಲ್ಲೂ ಸೋತಿದ್ದರು. ಈ ಬಗ್ಗೆ ಅವರ ಜೊತೆ ಆಪ್ತವಾಗಿರುವ ಮಂಜು ಪಾವಗಡ ಅವರು, ತೀವ್ರ ಅಸಮಾಧಾನ ತೋರ್ಪಡಿಸಿದ್ದರು. ನಿನ್ನನ್ನು ನೋಡುತ್ತಿರುವ ಜನ ಏನೆಂದುಕೊಳ್ಳಬೇಕು. ಉತ್ಸಾಹ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು ತಿಳಿ ಹೇಳಿದ್ದರು.

ಕಳಪೆ ಎಂದು ಒಪ್ಪಿಕೊಂಡ ದಿವ್ಯಾ: ಎಂದಿನಂತೆ ಮನೆಯಲ್ಲಿ ಕಳಪೆ ಮತ್ತು ಅತ್ಯುತ್ತಮ ಸ್ಪರ್ಧಿಗಳ ಆಯ್ಕೆ ವೇಳೆ ದಿವ್ಯಾ ಸುರೇಶ್ ಅವರು ನಾನು 3 ಟಾಸ್ಕ್‌ಗಳಲ್ಲಿ ಸೋತಿರುವೆ. ನಾನು ಕಳಪೆ ಎಂದರು. ಆದರೆ, ತಮಗೆ ತಾವೆ ವೋಟ್ ಮಾಡುವಂತಿಲ್ಲ ಎಂಬ ನಿಯಮವಿದ್ದಿದ್ದರಿಂದ ಹಿಂದೆ ಸರಿದರು. ಅದೇ ಸೂಚನೆ ಬಳಸಿಕೊಂಡ ಮನೆಯ ಮೂವರು ಸದಸ್ಯರು ದಿವ್ಯಾ ಅವರಿಗೆ ವೋಟ್ ಹಾಕಿದರು.

ಮಂಜು ವೋಟ್ ಹಾಕಿದ್ದೇ ಅಚ್ಚರಿ: ಈ ಮಧ್ಯೆ, ದಿವ್ಯಾ ಸುರೇಶ್ ಜೊತೆ ಆಪ್ತವಾಗಿರುವ ಮಂಜು ಪಾವಗಡ ಅವರೂ ಸಹ ಕಳಪೆ ಎಂದು ವೋಟ್ ನೀಡಿದರು. ಹಾಗೆ ನೋಡಿದರೆ, ಈ ವಾರ ಅರವಿಂದ್ ಮತ್ತು ದಿವ್ಯಾ ಇಬ್ಬರೂ ಅಷ್ಟಾಗಿ ಪ್ರದರ್ಶನ ನೀಡಿಲ್ಲ. ಆದರೆ, ನಾನು ದಿವ್ಯಾ ಸುರೇಶ್ ಹೆಸರು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಜೈಲಿಗೆ ಹೋದ ಬಳಿಕ ಈ ವಿಷಯವಾಗಿ ಮಂಜು ಅವರ ಬಳಿ ಅಸಮಾಧಾನ ತೋಡಿಕೊಂಡ ದಿವ್ಯಾ ಸುರೇಶ್, ಬೇರೆಯವರು ನನಗೆ ಕಳಪೆ ಎಂದು ಹೇಳಿದ್ದರೆ ಓಕೆ. ನೀನೂ ವೋಟ್ ಹಾಕಿದ್ದು ಬೇಸರ ತರಿಸಿದೆ ಎಂದರು. ಇದಕ್ಕೆ ಉತ್ತರಿಸಿದ ಮಂಜು, ಯಾವಾಗಲೂ ಒಳ್ಳೆಯ ಆಟ ಆಡುವವರು ಇದ್ದಕ್ಕಿದ್ದ ಹಾಗೆ ಎಡವಿದರೆ ಕಳಪೆ ಕೊಟ್ಟೆ ಕೊಡುವೆ ಎಂದರು. ದಿವ್ಯಾ ಸುರೇಶ್ ಅವರನ್ನು ತಿದ್ದಲೆಂದೇ ಮಂಜು ವೋಟ್ ಹಾಕಿರುವುದು ಅಲ್ಲಿಗೆ ಸ್ಪಷ್ಟವಾಯ್ತು.

ಬಿಗ್ ಬಾಸ್ ಶೋನ ಅಂತಿಮ ಭಾಗದಲ್ಲಿ ದಿವ್ಯಾ ಸುರೇಶ್ ಉತ್ಸಾಹ ಕಳೆದುಕೊಂಡಿದ್ದು, ವೀಕ್ಷಕರಿಗೂ ಅಚ್ಚರಿ ಮೂಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು