ಬೆಂಗಳೂರು: ಬಿಗ್ ಬಾಸ್ ಕನ್ನಡ 9ನೇ ಆವೃತ್ತಿಯ ಒಂಬತ್ತನೇ ವಾರ ಮನೆಯಲ್ಲಿ 11 ಸ್ಪರ್ಧಿಗಳು ಉಳಿದಿದ್ದಾರೆ. ದಿನಕಳೆದಂತೆ ಕಠಿಣ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಅದರ ಜೊತೆಗೆ ಈ ವಾರ ಎಲ್ಲ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಅಗ್ನಿ ಪರೀಕ್ಷೆಯನ್ನು ನೀಡಿದ್ದಾರೆ.
8 ವಾರಗಳ ಏಳುಬೀಳುಗಳ ನಡುವೆಯೂ ಮನೆಯಲ್ಲಿ ಮುಂದುವರಿದಿರುವ 11 ಸ್ಪರ್ಧಿಗಳ ಬಲಾಬಲ ತಿಳಿಯಲು ಉದ್ದೇಶಿಸಿರುವ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಹೀಗಾಗಿ, ಕೆಲವಾರಗಳಿಂದ ಮನೆಯ ಸದಸ್ಯರು ಆಯ್ಕೆ ಮಾಡಿದ್ದ ನಾಮಿನೇಶನ್‌ನಿಂದ ತಪ್ಪಿಸಿಕೊಂಡಿದ್ದ ಸದಸ್ಯರಿಗೆ ಢವ ಢವ ಶುರುವಾಗಿದೆ.
ಕಳೆದ 3 ಮೂರು ವಾರಗಳಿಂದ ಎಲಿಮಿನೇಶನ್‌ನಿಂದ ಪಾರಾಗಿದ್ದ ಕಿರುತೆರೆ ನಟಿ ಕಾವ್ಯಶ್ರೀ ಗೌಡ ಸಹ ಈಗ ಎಲಿಮಿನೇಶನ್ ತೂಗುಗತ್ತಿ ಅಡಿ ನಿಂತಿದ್ದಾರೆ. ವೀಕ್ಷಕರ ಮತಗಳ ಆಧಾರದ ಮೇಲೆ ಈ 11 ಮಂದಿಯಲ್ಲಿ 10 ಮಂದಿ ಪಾರಾಗಲಿದ್ದಾರೆ. ಒಬ್ಬರಿಗೆ ಈ ವಾರಾಂತ್ಯ ಗೇಟ್ ಪಾಸ್ ಸಿಗಲಿದೆ.
ಈ ವಾರಾಂತ್ಯದ ಎಲಿಮಿನೇಶನ್ ಬಳಿಕವೂ ಮನೆಯಲ್ಲಿ 11 ಮಂದಿ ಉಳಿಯಲಿದ್ದಾರೆ. ಏಕೆಂದರೆ, ಈ ವಾರ ವೈಲ್ಡ್ ಎಂಟ್ರಿ ಪಡೆಯುತ್ತಿರುವ ಬಗ್ಗೆ ಬಿಗ್ ಬಾಸ್ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ನಾಮಿನೇಟ್ ಆದ ಸದಸ್ಯರ ಪಟ್ಟಿ
1. ವಿನೋದ್ ಗೊಬ್ಬರಗಾಲ
2. ರೂಪೇಶ್ ರಾಜಣ್ಣ
3.ಪ್ರಶಾಂತ್ ಸಂಬರಗಿ
4. ಆರ್ಯವರ್ಧನ್ ಗುರೂಜಿ
5. ಅರುಣ್ ಸಾಗರ್
6. ರಾಕೇಶ್ ಅಡಿಗ
7. ಅನುಪಮಾ ಗೌಡ
8. ದಿವ್ಯಾ ಉರುಡುಗ
9. ಅಮೂಲ್ಯ ಗೌಡ
10. ಕಾವ್ಯಾ ಗೌಡ
11. ರೂಪೇಶ್ ಶೆಟ್ಟಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.