ಕನ್ನಡ ಬಿಗ್ಬಾಸ್ 12ನೇ ಆವೃತ್ತಿ ಫಿನಾಲೆ ಹಂತಕ್ಕೆ ತಲುಪಿದೆ. ಇನ್ನೇನು ಬಿಗ್ಬಾಸ್ ಫಿನಾಲೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಇದರ ನಡುವೆ ಗಿಲ್ಲಿ ನಟ ಸಾಮಾಜಿಕ ಮಾಧ್ಯಮದಲ್ಲಿ ಹೊಸ ದಾಖಲೆಯನ್ನು ಮಾಡಿದ್ದಾರೆ.

ಈ ಬಾರಿಯ ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಟ ಸಂಚಲನ ಸೃಷ್ಟಿಸಿದ್ದಾರೆ. ಗಿಲ್ಲಿ ಅವರ ಮಾತು, ತಮಾಷೆ, ತಿರುಗೇಟು, ಟಾಸ್ಕ್ ಶೈಲಿ, ಮಾಸ್ ಡೈಲಾಗ್ ಎಲ್ಲವನ್ನೂ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇದರ ಮತ್ತೊಂದು ಹಂತವೆಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಗಿಲ್ಲಿ ನಟನ ಅಭಿಮಾನಿಗಳ ಕ್ರೇಜ್ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗಿಲ್ಲಿ ನಟನಿಗೆ ಇನ್ಸ್ಟಾಗ್ರಾಂನಲ್ಲಿ ಅನುಯಾಯಿಗಳು ಸಂಖ್ಯೆ ದಿಢೀರ್ ಹೆಚ್ಚಳ ಕಂಡಿದೆ.

ಬಿಗ್ಬಾಸ್ ಮನೆಗೆ ಕಾಲಿಡುವ ಮುನ್ನ ಗಿಲ್ಲಿ ಇನ್ಸ್ಟಾಗ್ರಾಂನಲ್ಲಿ 1 ಲಕ್ಷ ಅನುಯಾಯಿಗಳಿದ್ದರು. ಕಳೆದ ಎರಡು ದಿನಗಳ ಹಿಂದೆ ಅಚ್ಚರಿ ಎಂಬಂತೆ ಅನುಯಾಯಿಗಳ ಸಂಖ್ಯೆ 10 ಲಕ್ಷಕ್ಕಿಂತಲೂ ಹೆಚ್ಚಾಗಿದೆ. ಅತ್ತ ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಟ ಸದ್ದು ಮಾಡುತ್ತಿದ್ದು, ಇತ್ತ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಅನುಯಾಯಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಈ ಹಿಂದೆ ಬಿಗ್ಬಾಸ್ ವಿಜೇತರ ಇನ್ಸ್ಟಾಗ್ರಾಂ ಅನುಯಾಯಿಗಳು ಹಾಗೂ ಗಿಲ್ಲಿ ನಟನಿಗೆ ಇರುವ ಅನುಯಾಯಿಗಳನ್ನು ನೆಟ್ಟಿಗರು ಹೊಂದಾಣಿಕೆ ಮಾಡುತ್ತಿದ್ದಾರೆ. ಸೀಸನ್ 1ರಿಂದ 11ರವರೆಗೂ ಬಿಗ್ಬಾಸ್ ಗೆದ್ದವರಲ್ಲಿ ಗಿಲ್ಲಿ ನಟನಿಗೆ ಮಾತ್ರ 10 ಲಕ್ಷಕ್ಕಿಂತೂ ಹೆಚ್ಚು ಅನುಯಾಯಿಗಳು ಇರುವುದನ್ನು ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.