ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ನ 12ನೇ ಆವೃತ್ತಿಯ ಫಿನಾಲೆಗೆ ಬೆರಳೆಣಿಕೆಯಷ್ಟು ದಿನಗಳು ಬಾಕಿಯಿವೆ. ಈ ನಡುವೆ ಗಿಲ್ಲಿ ನಟನ ಅಬ್ಬರ ಜೋರಾಗಿದೆ.

ಅಭಿಮಾನಿಗಳನ್ನು ಬಿಗ್ಬಾಸ್ ಮನೆಯೊಳಗೆ ಕರೆಸಲಾಗಿತ್ತು. ಈ ವೇಳೆ ಗಿಲ್ಲಿನಟನ ಅಭಿಮಾನಿಯೊಬ್ಬ ಕೈಗೆ ಟ್ಯಾಟೂ ಹಾಕಿಕೊಂಡು ಬಂದಿದ್ದಾನೆ. ಇದನ್ನು ನೋಡಿದ ಗಿಲ್ಲಿ ಪ್ರೀತಿಯಿಂದ ಮಾತಾಡಿಸಿದ್ದಾರೆ.

ಫಿನಾಲೆಯ ವಾರಗಳು ಹತ್ತಿರವಾಗುತ್ತಿದಂತೆಯೇ ಬಿಗ್ಬಾಸ್ ಸ್ಫರ್ಧಿಗಳಿಗೆ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ.

ಗಿಲ್ಲಿ ವೇದಿಕೆಗೆ ಬರುತ್ತಿದ್ದಂತೆ ‘ಯಾವುದೇ ಸಂದರ್ಭದಲ್ಲಿ ಆಟದ ದಿಕ್ಕನ್ನು ಬದಲಾಯಿಸುವ ತಾಕತ್ತು ಇರುವುದು ಕೇವಲ ಜೋಕರ್ಗೆ ಮಾತ್ರ’ ಎಂದು ಪರಿಚಯದ ವೇಳೆ ಬಿಗ್ ಬಾಸ್ ಹೇಳಿದ್ದಾರೆ. ವೇದಿಕೆ ಮೇಲೆ ಗಿಲ್ಲಿ ’ಮೀಟರ್ ಇದ್ರೆ ಲಡಾಯಿಸು, ಮುಂದೆ ಬಂದ್ರೆ ಉಡಾಯಿಸು, ಜೊತೆಯಲ್ಲಿದ್ದು ಕಟಾಯಿಸಬೇಡ’ ಎಂದು ಡೈಲಾಗ್ ಹೊಡೆದಿದ್ದಾರೆ.

ಅಭಿಮಾನಿಗಳನ್ನು ಕೊಂಡಾಡಿದ ಗಿಲ್ಲಿ

ತನ್ನದೇ ಶೈಲಿಯಲ್ಲಿ ಅಭಿಮಾನಿಗಳ ಅಭಿಮಾನಕ್ಕೆ ಗಿಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ನಡುವೆ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿಯನ್ನು ನೋಡಿ ಗಿಲ್ಲಿ ಒಂದು ಕ್ಷಣ ಭಾವುಕರಾಗಿದ್ದರು. ‘ಮನಿಗೂ ಅಭಿಮಾನಿಗೂ ಏನು ವ್ಯತ್ಯಾಸ ಗೊತ್ತಾ? ಮನಿ ಇವತ್ತು ಬರ್ತದೆ, ನಾಳೆ ಹೋಗ್ತದೆ. ಅಭಿಮಾನಿ ಬಂದರೆ ಯಾವತ್ತೂ ಹೋಗಲ್ಲ’ ಎಂದು ಪಂಚ್ ದಾಟಿಯಲ್ಲಿಯೇ ಹೇಳಿದ್ದಾರೆ.

ಗಿಲ್ಲಿ, ಧನುಷ್. ಕಾವ್ಯಾ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಅಭಿಮಾನಿಗಳ ಭೇಟಿ ವೇಳೆ ಸ್ಪರ್ಧಿಗಳ ಬಿಗ್ಬಾಸ್ ಪಯಣದ ಫೋಟೊವನ್ನು ವಿಡಿಯೊ ರೀತಿಯಲ್ಲಿ ತೋರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.