ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK10: ಒಂದು ಹೆಣ್ಣು, ಒಂದು ಗಂಡು.. ಇಬ್ಬರ ವೈಲ್ಡ್ ಕಾರ್ಡ್ ಎಂಟ್ರಿ! ಯಾರವರು?

Published 27 ನವೆಂಬರ್ 2023, 11:56 IST
Last Updated 27 ನವೆಂಬರ್ 2023, 11:56 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್ ಕನ್ನಡ 10ನೇ ಆವೃತ್ತಿಯು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದ್ದು, 8ನೇ ವಾರಕ್ಕೆ ಕಾಲಿಟ್ಟಿದೆ. ವಾರದ ಆರಂಭದಲ್ಲೇ ವೈಲ್ಡ್‌ ಕಾರ್ಡ್ ಎಂಟ್ರಿ ಮೂಲಕ ಆಟಕ್ಕೆ ಮತ್ತಷ್ಟು ರೋಚಕತೆ ನೀಡುವ ಕೆಲಸವನ್ನು ಬಿಗ್‌ಬಾಸ್ ಮಾಡಿದ್ದಾರೆ.

ಸೋಮವಾರ, ಬೆಳಿಗ್ಗೆ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಒಬ್ಬ ಹುಡುಗಿ ಮತ್ತು ಒಬ್ಬ ಹುಡುಗ ಐಷಾರಾಮಿ ಕಾರಿನಲ್ಲಿ ಬಂದು ಮನೆಗೆ ಪ್ರವೇಶಿಸುವುದನ್ನು ಕಾಣಬಹುದಾಗಿದೆ. ಮನೆಯ ಸದಸ್ಯರೆಲ್ಲ ಅವರನ್ನು ಆತ್ಮೀಯಾಗಿ ಸ್ವಾಗತಿಸಿದ್ದಾರೆ. ಅವರು ನಟ, ನಟಿಯರಾ?, ಮಾಡೆಲ್‌ಗಳ ಎಂಬ ಕುತೂಹಲ ಪ್ರೇಕ್ಷರಲ್ಲಿ ಮನೆ ಮಾಡಿದೆ.

ಈ ವಾರಾಂತ್ಯದಲ್ಲಿ ಕ್ಯಾಪ್ಟನ್ ಆಗಿದ್ದ ನೀತು ಶಾಕಿಂಗ್ ಎಲಿಮಿನೇಶನ್‌ನಲ್ಲಿ ಹೊರಬಿದ್ದರು. ಮುಂದಿನ ವಾರ ಅವರಿಗೆ ಇಮ್ಯುನಿಟಿ ಇತ್ತು. ಆದರೆ, ವೀಕ್ಷಕರ ಮತಗಳ ನಿರ್ಧಾರ ಬೇರೆ ಆಗಿತ್ತು. ಈ ಮೂಲಕ ಕಳೆದ 9 ಸೀಸನ್‌ನಲ್ಲಿ ಕ್ಯಾಪ್ಟನ್ ಆಗಿದ್ದವರು ಎಲಿಮಿನೇಟ್ ಆದ ಮೊದಲ ಪ್ರಸಂಗ ಇದಾಗಿದೆ.

ಇದಕ್ಕೂ ಮುನ್ನ, 6ನೇ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಶನ್ ಆಗಿತ್ತು. ಭಾಗ್ಯಶ್ರೀ ಮತ್ತು ಇಶಾನಿ ಬ್ಯಾಕ್ ಟು ಬ್ಯಾಕ್ ಹೊರಬಂದಿದ್ದರು.

ಈ ಹಿಂದಿನ ಸೀಸನ್‌ಗಳಲ್ಲಿ ಡಬಲ್ ಎಲಿಮಿನೇಶನ್ ಆದ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಆದ ಉದಾಹರಣೆಗಳಿವೆ. ಈ ಬಾರಿ ಬ್ರಹ್ಮಾಂಡ ಗುರೂಜಿಯನ್ನು ಕಳುಹಿಸಿ ಕೆಲ ದಿನ ಮನರಂಜನೆ ನೀಡಿದ ಬಿಗ್‌ಬಾಸ್, 8ನೇ ವಾರಕ್ಕೆ ವೈಲ್ಡ್‌ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.

ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾ ಆಗುತ್ತಾ?

7 ವಾರಗಳಿಂದ ಮನೆಯಲ್ಲಿ ತಮ್ಮದೇ ತಂಡ ಕಟ್ಟಿಕೊಂಡು ಆಡುತ್ತಿರುವ ಸ್ಪರ್ಧಿಗಳ ಲೆಕ್ಕಾಚಾರ ಈ ವಾರ ಬದಲಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ವೈಲ್ಡ್ ಕಾರ್ಡ್ ಎಂಟ್ರಿ ಆದಾಗ ಹೊಸಬರು ಮತ್ತು ಹಳಬರ ನಡುವೆ ಮನಸ್ಥಿತಿಯ ಸಂಘರ್ಷ ಶುರುವಾಗುತ್ತದೆ. ಇಲ್ಲಿಯವರೆಗೆ ಹೊರಗಿದ್ದುಕೊಂಡು ಒಳಗಿದ್ದವರನ್ನು ಗಮನಿಸಿದ್ದವರು ತಮ್ಮದೇ ಗೇಮ್ ಪ್ಲಾನ್ ಮೂಲಕ ಆಡುತ್ತಾರೆ. ಈ ಎಲ್ಲ ಕುತೂಹಲಗಳಿಗೆ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುವ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT