ಶನಿವಾರ, ಮಾರ್ಚ್ 25, 2023
28 °C

Bigg Boss 8: ಅರವಿಂದ್‌ಗೆ ಶಾಕ್ ಕೊಟ್ಟು ಹೊರ ನಡೆದ ನಟಿ ನಿಧಿ ಸುಬ್ಬಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನ ಎರಡನೇ ಇನಿಂಗ್ಸ್‌ನಲ್ಲಿ ಎರಡನೇ ವಾರ ಮೊದಲ ಎಲಿಮಿನೇಶನ್ ನಡೆದಿದೆ. ಎಲ್ಲರ ನಿರೀಕ್ಷೆ ಮೀರಿ ನಟಿ ನಿಧಿ ಸುಬ್ಬಯ್ಯ ಹೊರಹೋಗಿದ್ದಾರೆ.

ನಟಿ ನಿಧಿ ಸುಬ್ಬಯ್ಯ ಅವರು ಎಲಿಮಿನೇಟ್ ಆಗುತ್ತಾರೆಂದು ಬಹುತೇಕರು ಊಹಿಸಿರಲಿಲ್ಲ. ಕನ್ನಡದ ದೊಡ್ಡ ಚಿತ್ರಗಳು, ಹಿಂದಿಯಲ್ಲೂ ನಟಿಸಿರುವ ಅವರಿಗೆ ಫ್ಯಾನ್ ಫಾಲೋಯಿಂಗ್ ಇರುವುದರಿಂದ ಅವರು ಸೇಫ್ ಎಂಬ ನಿರ್ಧಾರವೇ ಬಹುತೇಕರಲ್ಲಿತ್ತು. ಕೊನೆಯ ಹಂತದಲ್ಲಿದ್ದ ಚಕ್ರವರ್ತಿ ಮತ್ತು ನಿಧಿ ನಡುವೆ ಯಾರು ಹೊರಹೋಗಬಹುದೆಂದು ಸುದೀಪ್ ಕೇಳಿದಾಗ ಮನೆಯ ಎಲ್ಲ ಸದಸ್ಯರೂ ಚಕ್ರವರ್ತಿ ಹೋಗುತ್ತಾರೆಂಬ ಅಭಿಪ್ರಾಯ ನೀಡಿದ್ದರು. ಆದರೆ, ಪ್ರೇಕ್ಷಕರ ಮತದಾನದ ಲೆಕ್ಕಾಚಾರವೇ ಬೇರೆ ಆಗಿತ್ತು. ಚಕ್ರವರ್ತಿ ಯು ಆರ್ ಸೇಫ್ ಎಂದು ಸುದೀಪ್ ಘೋಷಿಸುತ್ತಿದ್ದಂತೆ ಎಲ್ಲರಿಗೂ ಅಚ್ಚರಿ ಕಾದಿತ್ತು. ಎರಡನೇ ವಾರ, ಪ್ರಶಾಂತ್ ಮತ್ತು ಅರವಿಂದ್ ವಿರುದ್ಧ ಸಿಡಿದಿದ್ದ ನಿಧಿ ಅವರಿಗೆ ಅವರ ನೇರ ನಡೆಯೇ ಮುಳುವಾಯಿತೇ ಎಂಬ ಪ್ರಶ್ನೆ ಎದ್ದಿದೆ.

ಬಿಕ್ಕಿ ಬಿಕ್ಕಿ ಅತ್ತ ಶುಭಾ: ಮನೆಯಲ್ಲಿ ನಿಧಿ ಮತ್ತು ಶುಭಾ ಪೂಂಜಾ ನಡುವೆ ಉತ್ತಮ ಬಾಂಧವ್ಯವಿತ್ತು. ಆಗಾಗ್ಗೆ ಜಗಳವಾಡಿದರೂ ಮನೆಯಲ್ಲಿ ಇವರಿಬ್ಬರು ಒಳ್ಳೆಯ ಫ್ರೆಂಡ್ಸ್ ಎಂಬುದು ಮನೆಯ ಸದಸ್ಯರ ಜೊತೆ ವೀಕ್ಷಕರಿಗೂ ಗೊತ್ತು. ಕಳೆದ ವಾರ, ಜಗಳ ಮಾಡಿಕೊಂಡು ನಿಧಿ ಜೊತೆ ಮಾತು ಬಿಟ್ಟಿದ್ದ ಶುಭಾ ಅದೇ ವಿಚಾರ ನೆನಪು ಮಾಡಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. ಅವಳನ್ನು ಬಿಟ್ಟು ಮನೆಯಲ್ಲಿ ಇರಲಾರೆ. ಹೋಗುವ ಮುನ್ನ ಜಗಳ ಮಾಡಿಕೊಂಡಿದ್ದೆ ಎಂದು ಮಂಜು ಬಳಿ ತಮ್ಮ ನೋವು ತೋಡಿಕೊಂಡರು.

ದಿವ್ಯಾ ಸುರೇಶ್ ಕೈಹಿಡಿದ ಅನುಕಂಪ?: ಮಂಜು ಪಾವಗಡ ಅವರು ದಿವ್ಯಾ ಸುರೇಶ್ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಗಂಡ ಹೆಂಡತಿ ನಾಟಕ ನಡೆಯುತ್ತೆ ಎಂಬಿತ್ಯಾದಿ ವಿವಾದಾತ್ಮಕ ಹೇಳಿಕೆ ನೀಡಿ ಚಂದ್ರಚೂಡ್ ಮಾಡಿದ ರಂಪಾಟ ದಿವ್ಯಾ ಸುರೇಶ್ ಅವರಿಗೆ ಪ್ಲಸ್ ಪಾಯಿಂಟ್ ಆದಂತೆ ಕಾಣುತ್ತಿದೆ. 7 ಸದಸ್ಯರ ಪೈಕಿ ಮೊದಲಿಗರಾಗಿ ದಿವ್ಯಾ ಸುರೇಶ್ ಎಲಿಮಿನೇಶನ್ನಿಂದ ಸೇಫ್ ಆದರು. ಎರಡನೆಯವರಾಗಿ ಮಂಜು ಸೇಫ್ ಆಗುವ ಮೂಲಕ ನಾವಿಬ್ಬರೂ ಟಾಪ್ ಕಂಟೆಂಡರ್ಸ್ ಎಂಬುದನ್ನು ಮತ್ತೆ ಸಾಬೀತು ಮಾಡಿದರು.

ಹೋಗುವಾಗಲೂ ಅರವಿಂದ್‌ಗೆ ಶಾಕ್ ಕೊಟ್ಟ ನಿಧಿ: ಮನೆಯಿಂದ ಹೊರನಡೆದ ನಿಧಿಸುಬ್ಬಯ್ಯ ಅವರಿಗೆ ಬಿಗ್ ಬಾಸ್ ಒಂದು ವಿಶೇಷ ಅಧಿಕಾರ ಕೊಟ್ಟಿದ್ದರು. ಮುಮದಿನ ವಾರ ಎಲಿಮಿನೇಶನ್‌ಗೆ ನೀವು ನೇರವಾಗಿ ಒಬ್ಬ ಸ್ಪರ್ಧಿಯನ್ನು ನಾಮಿನೇಟ್ ಮಾಡಬಹುದು ಎಂದು ಸೂಚಿಸಿದ್ದರು. ಈ ಅವಕಾಶ ಬಳಸಿಕೊಂಡ ನಟಿ ನಿಧಿ ಸುಬ್ಬಯ್ಯ ಅರವಿಂದ್ ಹೆಸರು ಸೂಚಿಸಿದರು.

ಇದನ್ನೂ ಓದಿ..  Bigg Boss 8: ‘ಪತ್ರವಳ್ಳಿ’ ಪದದ ಅರ್ಥವೇನು? ಚಕ್ರವರ್ತಿಗೆ ಸುದೀಪ್ ಚಾಟಿ

   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು