ಶುಕ್ರವಾರ, ಜೂನ್ 25, 2021
22 °C

Bigg Boss 8: ಚಾಣಾಕ್ಷತನ ಪ್ರದರ್ಶಿಸಿದ ಶುಭಾ ಪೂಂಜಾ, ಇಲ್ಲಿದೆ ನಾಮಿನೇಶನ್ ಪಟ್ಟಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 9ನೇ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ವಾರಾಂತ್ಯದ ಎಲಿಮಿನೇಶನ್‌ಗೆ 6 ಜನ ನಾಮಿನೇಟ್ ಆಗಿದ್ದಾರೆ. ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಅರವಿಂದ್, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಈ ಪಟ್ಟಿಯಲ್ಲಿದ್ದಾರೆ. ಶುಭಾ ಪೂಂಜಾ ಅವರನ್ನು ಸಹ ನಾಯಕ ರಘು ನಾಮಿನೇಟ್ ಮಾಡಿದ್ದರು. ಆದರೆ, ಅವರು ಗೋಲ್ಡನ್ ಪಾಸ್ ಬಳಸಿ ಸೇಫ್ ಆಗಿದ್ದಾರೆ.

ಗಲಭೆ, ಗದ್ದಲದ ನಡುವೆ ನಡೆದ 9ನೇ ವಾರದ ಆಟದ ಬಳಿಕ ಮಂಜು ಪಾವಗಡ ಅವರ ಹೆಸರನ್ನು ಮನೆಯ ಹಲವು ಸದಸ್ಯರು ನಾಮಿನೇಟ್ ಮಾಡಿದರು. ಟಫ್ ಕಾಂಪಿಟೇಟರ್ ಎಂಬ ಕಾರಣಕ್ಕೆ ಅರವಿಂದ್ ಮತ್ತು ದಿವ್ಯಾ ಉರುಡುಗ ಮಂಜು ಹೆಸರು ಹೇಳಿದರು. ಕ್ಯಾಪ್ಟೆನ್ಸಿ ಕಂಟೆಂಡರ್ ಟಾಸ್ಕ್ ವೇಳೆ ಮಂಜು ಸರಿಯಾಗಿ ನಡೆದುಕೊಂಡಿಲ್ಲ. ಫೇವರ್ ಮಾಡಿದರು ಎಂದು ಪ್ರಶಾಂತ್ ಸಂಬರಗಿ, ಶಮಂತ್, ಪ್ರಿಯಾಂಕಾ ಮುಂತಾದವರು ಮಂಜು ಹೆಸರು ಹೇಳಿದರು.

ಇನ್ನು, ಪ್ರಶಾಂತ್ ಸಂಬರಗಿ ಅವರ ವರ್ತನೆಯಿಂದ ಬೇಸತ್ತ ಹಲವರು ಅವರ ಹೆಸರನ್ನು ಸೂಚಿಸಿದರು. ಮನೆಯ ವಾತಾವರಣ ಹಾಳು ಮಾಡಿದ್ದಾರೆ. ಬೇಕಂತಲೆ ಜಗಳ ಮಾಡುತ್ತಾರೆಂದು ಚಕ್ರವರ್ತಿ ಚಂದ್ರಚೂಡ್ ಹೆಸರು ಸೂಚಿಸಿದರು. ಟಫ್ ಕಾಂಪಿಟೇಟರ್ ಎಂಬ ಕಾರಣಕ್ಕೆ ಅರವಿಂದ್ ಮತ್ತೆ ನಾಮಿನೇಟ್ ಆದರು.

ಕ್ಯಾಪ್ಟೆನ್ಸಿ ಕಂಟೆಂಡರ್ ಟಾಸ್ಕ್ ವೇಳೆ ಮೂರನೇ ಸ್ಥಾನಕ್ಕೆ ಕುಸಿದಿದ್ದ ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನೇರವಾಗಿ ನಾಮಿನೇಟ್ ಆಗಿದ್ದರು.

ಬುದ್ಧಿವಂತಿಕೆ ತೋರಿದ ಶುಭಾ ಪೂಂಜಾ: ಶುಭಾ ಪೂಂಜಾ ಅವರ ಬಳಿ ರಾಜೀವ್ ಕೊಟ್ಟ ಗೋಲ್ಡನ್ ಪಾಸ್ ಇರುವ ಬಗ್ಗೆ ತಿಳಿದಿದ್ದ ಕ್ಯಾಪ್ಟನ್ ರಘು ಅವರು ಶುಭಾ ಹೆಸರನ್ನು ನಾಮಿನೇಟ್ ಮಾಡಿದರು. ಈ ಸಂದರ್ಭ ತಮ್ಮ ಬಳಿ ಇದ್ದ ಗೋಲ್ಡನ್ ಪಾಸ್ ಬಳಸುವುದಾಗಿ ಹೇಳಿದ ಅವರು ನಾಮಿನೇಶನ್‌ನಿಂದ ಪಾರಾದರು. ಈ ಹಿಂದೆ, ಗೋಲ್ಡನ್ ಪಾಸ್ ಹೊಂದಿದ್ದ ರಾಜೀವ್ ಅದನ್ನು ಬಳಸದೆ ಜನರ ಮತಗಳನ್ನು ನಂಬಿಕೊಂಡು ಮನೆಯಿಂದ ಹೊರಬಿದ್ದಿದ್ದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು