
ಖಳ ನಟನಾಗಿ ಗುರುತಿಸಿಕೊಂಡಿದ್ದ ಕಾಕ್ರೋಚ್ ಸುಧಿ ಈ ಸೀಸನ್‌ನ ಮೊದಲ ಸ್ಪರ್ಧಿ. ಸಲಗ, ಟಗರು, ಭೀಮ ಸಿನಿಮಾದಲ್ಲಿ ನಟಿಸಿ

ನಟಿ ಕಾವ್ಯ ಶೈವ: ಕೆಂಡಸಂಪಿಗೆ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಕಾವ್ಯ ಶೈವ ಅವರು ಬಿಗ್‌ಬಾಸ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.ಕಾವ್ಯ ಇತ್ತೀಚೆಗಷ್ಟೇ ತೆರೆಕಂಡ ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿದ್ದರು.

ಡಾಗ್ ಸತೀಶ್:ಕೋಟಿ ಬೆಲೆ ಬಾಳುವ ನಾಯಿಗಳಿಗೆ ನಾನೇ ಒಡೆಯ ಎಂದು ಹೇಳಿಕೊಂಡಿರುವ ಸತೀಶ್ ಕೂಡ ದೊಡ್ಮನೆ ಪ್ರವೇಶಿಸಿದ್ದಾರೆ.

ಗಿಲ್ಲಿ ನಟ ನಟರಾಜ್:ಗಿಚ್ಚಿಗಿಲಿಗಿಲಿ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದ ನಟರಾಜ್, ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾರೆ.

ಆಂಕರ್ ಜಾನ್ವಿ: ಕನ್ನಡ ಸುದ್ದಿವಾಹಿನಿಯಲ್ಲಿ ನ್ಯೂಸ್ ಆಂಕರ್ ಆಗಿ ಗಮನ ಸೆಳೆದಿದ್ದ ಜಾನ್ವಿ ಈ ಸೀಸನ್‌ನ ಸ್ಪರ್ಧಿಯಾಗಿದ್ದಾರೆ. ಗಿಚ್ಚಿಗಿಲಿಗಿಲಿ, ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗಳ ಮೂಲಕ ಜಾನ್ವಿ ಮಿಂಚಿದ್ದರು.

ಧನುಷ್ ಗೌಡ:"ಗೀತಾ" ಸೀರಿಯಲ್ ನಟ ಧನುಷ್ ಗೌಡ ಕೂಡ ಬಿಗ್‌ಬಾಸ್ ಪ್ರವೇಶಿಸಿದ್ದಾರೆ.

ಚಂದ್ರಪ್ರಭ: ಮಜಾಭಾರತ ಮೂಲಕ ಖ್ಯಾತಿ ಗಳಿಸಿದ ಚಂದ್ರಪ್ರಭ ಇದೀಗ ಸ್ಪರ್ಧಿಯಾಗಿದ್ದು, ಕಾಮಿಡಿ ಮೂಲಕ ಜನರ ಮನಸ್ಸು ಗೆಲ್ಲಲಿದ್ದಾರೆಯೇ ನೋಡಬೇಕಿದೆ.

ಧಾರಾವಾಹಿ ಸಿಲ್ಲಿ ಲಲ್ಲಿ ಮೂಲಕ ಮನೆಮಾತಾಗಿದ್ದ ನಟಿ ಮಂಜು ಭಾಷಿಣಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು.

ರಾಶಿಕಾ ಶೆಟ್ಟಿ: ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾ ಮೂಲಕ ನಾಯಕಿಯಾಗಿದ್ದ ಎಂಟ್ರಿ ನೀಡಿದ್ದ ರಾಶಿಕಾ ಈ ಸೀಸನ್‌ನ ಸ್ಪರ್ಧಿಯಾಗಿದ್ದಾರೆ.

ಅಭಿಷೇಕ್: ಲಕ್ಷಣ ಧಾರಾವಾಹಿಯಲ್ಲಿ ಖಳನಟನಾಗಿ ನಟಿಸಿದ್ದ ಅಭಿಷೇಕ್ ಶ್ರೀಕಾಂತ್ ದೊಡ್ಮನೆ ಸೇರಿದ್ದಾರೆ.

ಮಲ್ಲಮ್ಮ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಣ್ಣ ಗ್ರಾಮದವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದ ಅವರು ತಮ್ಮದೇ ಆದ ಮಲ್ಲಮ್ಮ ಟಾಕ್ಸ್ ಹೆಸರಿನ ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ 1.69 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

ಅಶ್ವಿನಿ ಎಸ್.ಎನ್: ಮುದ್ದುಲಕ್ಷ್ಮಿ ಧಾರಾವಾಹಿ ನಟಿ ಅಶ್ವಿನಿ ಕೂಡ ಈ ಸೀಸನ್ ಸ್ಪರ್ಧಿಯಾಗಿದ್ದಾರೆ. ಬದುಕಿನಲ್ಲಿ ಒಂಟಿಯಾಗಿ ಹೋರಾಟ ನಡೆಸಿದ್ದೆ ಎಂದು ಹೇಳಿಕೊಂಡಿರುವ ಅಶ್ವಿನಿ, ತಮ್ಮನ್ನು ತಾವು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಮುದ್ದುಲಕ್ಷ್ಮಿ ಸೀರಿಯಲ್ ನಟ ಧ್ರುವಂತ್ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ

ಸೋಷಿಯಲ್ ಮೀಡಿಯಾ ಸ್ಟಾರ್ ರಕ್ಷಿತಾ ಶೆಟ್ಟಿ ಕೂಡ ದೊಡ್ಮನೆ ಸೇರಿದ್ದಾರೆ. ತುಳು, ಕನ್ನಡ, ಹಿಂದಿ ಭಾಷೆಯನ್ನು ಮಿಕ್ಸ್ ಮಾಡಿ ಮಾತನಾಡಿಯೇ ರಕ್ಷಿತಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗೆದ್ದಿರುವ ಬಾಡಿಬಿಲ್ಡರ್ ಕರಿಬಸಪ್ಪ ಬಿಗ್ ಬಾಸ್ ಮನೆ ಆಟ ಆಡಲು ಬಂದಿದ್ದಾರೆ

ನಾ ಡ್ರೈವರಾ, ನೀ ನನ್ನ ಲವ್ವರಾ ಹಾಡಿನ ಖ್ಯಾತಿಯ ಫೇಮಸ್ ಆಗಿರುವ ಉತ್ತರ ಕರ್ನಾಟಕದ ಪ್ರತಿಭೆ ಮಾಳು ಯುಟ್ಯೂಬ್‌ನಲ್ಲಿ ಖ್ಯಾತಿ ಗಳಿಸಿದ್ದಾರೆ.

ಕರಿಮಣಿ ಧಾರಾವಾಹಿ ಖ್ಯಾತಿಯ ಸ್ಪಂದನಾ ಕೂಡ ಬಿಗ್‌ಬಾಸ್ ಮನೆಯ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ.

ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅಶ್ವಿನಿ, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

RJ ಆಗಿ ಗುರುತಿಸಿಕೊಂಡಿರುವ ಅಮಿತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.