ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಚರ್‌ ನಮ್ರತಾ ಮಸ್ತ್‌ ಡ್ಯಾನ್ಸ್‌, ಬಿಗ್‌ಬಾಸ್‌ ಮಕ್ಕಳ ಕಾಟಕ್ಕೆ ತುಕಾಲಿ ಸುಸ್ತು

Published 13 ಡಿಸೆಂಬರ್ 2023, 3:10 IST
Last Updated 13 ಡಿಸೆಂಬರ್ 2023, 6:57 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ ಬಾಸ್‌ನಲ್ಲಿ ಈ ವಾರ ಪ್ರಾಥಮಿಕ ಶಾಲೆ ಟಾಸ್ಕ್‌ ಆರಂಭವಾಗಿದೆ. ಮನೆಯ ಸದಸ್ಯರೇ ಶಿಕ್ಷಕರಾಗಿ, ಮಕ್ಕಳಾದ ಇತರ ಸದಸ್ಯರಿಗೆ ಪಾಠ ಹೇಳುತ್ತಿದ್ದಾರೆ. ತನಿಷಾ ಮತ್ತು ಮೈಕಲ್‌ ಟೀಚರ್‌ ಆಗಿ ಮನರಂಜಿಸಿದ್ದಾರೆ. 

ಈಗ ತುಕಾಲಿ ಸಂತೋಷ್‌ ಮತ್ತು ನಮ್ರತಾ ಶಿಕ್ಷಕರಾಗಿದ್ದಾರೆ. ಇಂಗ್ಲೀಷ್‌ ಹೇಳಿಕೊಡುವ ಟೀಚರ್‌ ಆಗಿ ತುಕಾಲಿ ಬಂದಿದ್ದಾರೆ. ಆದರೆ ವಿದ್ಯಾರ್ಥಿಗಳು ತುಕಾಲಿ ಮೇಷ್ಟ್ರ ಪಾಠ ಕೇಳುವುದಕ್ಕಿಂತ ಕೊಡುವ ಕಾಟವೇ ಜಾಸ್ತಿಯಾಗಿದೆ. ‘ನಾನು ಹೇಳಿಕೊಟ್ಟಿದ್ದನ್ನು ಸರಿಯಾಗಿ ಹೇಳಬೇಕು’ ಎನ್ನುವ ಮೇಷ್ಟ್ರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ವಿದ್ಯಾರ್ಥಿಗಳು, ಗುರುಗಳು ‘ಥೂ’ ಎಂದು ಉಗಿದರೆ ಅದನ್ನೂ ಪಾಲಿಸುತ್ತ ಗುರುಗಳಿಗೆ ಉಗಿಯುತ್ತಿದ್ದಾರೆ.

ವರ್ತೂರು ಸಂತೋಷ್‌, ತನಿಷಾ ಕೆನ್ನೆಯ ಮೇಲೆ ಬೆರಳಾಡಿಸುತ್ತ, ‘ಪಟಾಕಿ ಯಾರದ್ದಾದ್ರೂ ಹಚ್ಚೋರು ಮಾತ್ರ ನಾವಾಗಿರ್ಬೇಕು’ ಅಂತ ಮಾಸ್ ಡೈಲಾಗ್ ಹೊಡೆದಿದ್ದಾರೆ.

ನಮ್ರತಾ ಟೀಚರ್‌ ಜೊತೆ ಸಖತ್‌ ಆಗಿ ಡ್ಯಾನ್ಸ್‌ ಮಾಡಿರುವ ಸ್ಪರ್ಧಿಗಳು, ತುಕಾಲಿಗೆ ಅಯ್ಯೋ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT