ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Bigg Boss 10: ಕಿಚ್ಚನ ಪಂಚಾಯತಿಯಲ್ಲಿ ಹೊರಬಿದ್ದ ಸಂಗೀತಾ, ವಿನಯ್‌ ಅಸಮಾಧಾನ

Published 10 ಡಿಸೆಂಬರ್ 2023, 4:15 IST
Last Updated 10 ಡಿಸೆಂಬರ್ 2023, 4:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಅವಾಂತರಗಳೇ ಸೃಷ್ಟಿಯಾಗುತ್ತಿವೆ. ಸ್ಪರ್ಧಿಗಳ ನಡುವಿನ ಅಸಮಾಧಾನ ಹೆಚ್ಚುತ್ತಲೇ ಇದೆ. ಟಾಸ್ಕ್‌ಗಳಲ್ಲಿ ಪರಸ್ಪರ ಹೊಡೆದಾಟ, ತಂತ್ರಗಾರಿಕೆ ಮುಂದುವರಿದಿದೆ. ಇದರ ನಡುವೆ ಕಣ್ಣಿಗೆ ಸೋಪಿನ ನೀರು ಬಿದ್ದು, ಆಸ್ಪತ್ರೆಗೆ ತೆರಳಿದ್ದ ಸಂಗೀತಾ ಮತ್ತು ಪ್ರತಾಪ್‌ ವೀಕೆಂಡ್‌ ಎಪಿಸೋಡ್‌ಗೆ ಹಾಜರಾಗಿದ್ದಾರೆ.

ಕಪ್ಪು ಕನ್ನಡಕ ಧರಿಸಿ ಮನೆಗೆ ಬಂದ ಇಬ್ಬರನ್ನೂ ನೋಡಿ ಮನೆಯ ಸದಸ್ಯರು ದಂಗಾಗಿದ್ದಾರೆ. ಈ ನಡುವೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೋಸದಾಟವಾಡಿ ವಿನಯ್‌ ಮತ್ತು ವರ್ತೂರು ಸಂತೋಷ್‌ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಮನೆಯಲ್ಲಿ ನಾಯಕನ ಕೋಣೆಗೆ ಸುದೀಪ್‌ ಬೀಗ ಹಾಕಿಸಿದ್ದು, ಕ್ಯಾಪ್ಟನ್‌ ಪಟ್ಟದಿಂದ ವರ್ತೂರು ಸಂತೋಷ್‌ ಅವರನ್ನು ವಜಾ ಮಾಡಿದ್ದಾರೆ. 

ವಾರಾಂತ್ಯದಲ್ಲಿ ಸುದೀಪ್‌ ಟಾಸ್ಕ್‌

ಭಾನುವಾರದ ಎಪಿಸೋಡ್‌ನಲ್ಲಿ ಪ್ರತಿವಾರದಂತೆ ಈ ವಾರವೂ ಕಿಚ್ಚ ಸುದೀ‍‍ಪ್‌ ಸ್ಪರ್ಧಿಗಳಿಗೆ ಟಾಸ್ಕ್‌ ನೀಡಿದ್ದು, ಪ್ರಾಣಿಗಳ ಪೋಟೊವನ್ನು ಹೋಲಿಕೆ ಮಾಡುವಂತೆ ಕೇಳಿದ್ದಾರೆ. ಅದಕ್ಕೆ ತನಿಷಾ ಅವರು ಗಿಳಿಯನ್ನು ವರ್ತೂರು ಸಂತೋಷಗೆ ನೀಡಿ, ಆರಂಭದಲ್ಲಿ ಇದ್ದ ಹಾಗೆ ಅವರು ಈಗ ಇಲ್ಲ ಎಂದಿದ್ದಾರೆ.

ಪವಿ ಅವರು ಸಂಗೀತಾ ಅವರಿಗೆ ಚೇಳಿನ ಚಿತ್ರ ಕೊಟ್ಟಿದ್ದರೆ, ಸ್ನೇಹಿತ್‌ ಜಿರಳೆ ಚಿತ್ರ ಕೊಟ್ಟಿದ್ದಾರೆ. ವಿನಯ್‌ಗೆ ಬೆಕ್ಕಿನ ಚಿತ್ರ ಸಿಕ್ಕಿದೆ. ಈ ಮಧ್ಯೆ ವಿನಯ್‌ ಅವರು ಸಂಗೀತಾ ಕುರಿತು. ‘ಸ್ಕೆಚ್‌ ಹಾಕಿ ಬೇಟೆಯಾಡುತ್ತಾರೆ’ ಎಂದಿದ್ದಾರೆ, ಇದಕ್ಕೆ ಉತ್ತರವಾಗಿ ಸಂಗೀತಾ, ‘ನನ್ನನ್ನು ಯಾರು ಟಾರ್ಗೆಟ್‌ ಮಾಡುತ್ತಿದ್ದಾರೆ ಎನ್ನುವುದು ಚೆನ್ನಾಗಿ ಗೊತ್ತು. ಅವರು ಗಲೀಜಿನಲ್ಲಿದ್ದಾರೆ, ಅವರಿಗೆ ಲೋಕವೆಲ್ಲಾ ಗಲೀಜಿನಂತೆ ಕಾಣುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.

ಸಂಗೀತಾ ತಮ್ಮನಿಂದ ಕಿಚ್ಚ ಸುದೀಪ್‌ಗೆ ಪತ್ರ? 

ಸಂಗೀತಾ ಶೃಂಗೇರಿ ತಮ್ಮನಾಗಿ ಪತ್ರ ಬರೆಯುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದೀಪ್‌ ಮತ್ತು ಕಲರ್ಸ್‌ ಕನ್ನಡ ಟ್ಯಾಗ್‌ ಮಾಡಿ ಬರೆದ ಪತ್ರವೊಂದು ಹರಿದಾಡುತ್ತಿದೆ.

‘ಬಿಗ್‌ ಬಾಸ್‌ ಮನೆ ಸ್ವರ್ಗದಂತೆ, ಯಾವ ಸಮಸ್ಯೆಯೂ ಆಗುವುದಿಲ್ಲ ಎಂದು ಹೇಳಿ, ನಮಗೆ ಭರವಸೆ ನೀಡಿದ್ದಿರಿ, ಆದರೆ ಈಗ ಬಿಗ್​ಬಾಸ್ ಮನೆಯೊಳಗೆ ನಡೆದಿರುವ ಘಟನೆಗಳ ನೋಡಿದರೆ ಹಾಗೆ ಕಾಣುತ್ತಿಲ್ಲ. ಇದು ಕುಟುಂಬದ ಕಾರ್ಯಕ್ರಮ ಅಂತ ಕಾಣಲ್ಲ. ಕೇವಲ ಹಿಂಸೆಯೇ ಕಾಣುತ್ತಿದೆ. ಕುಟುಂಬದವರು ಹೀಗೆ ಆಕ್ರಮಣಕಾರಿ ವರ್ತನೆಯನ್ನು ಹೇಗೆ ನೋಡುತ್ತಾರೆ? ಕಲರ್ಸ್ ಕನ್ನಡ ಚಾನೆಲ್​ ಅವರೇ, ಮನೆಯಲ್ಲಿ ಆಗಿರುವ ಸಮಸ್ಯೆಗಳನ್ನು ಪರಿಹರಿಸಲು, ಬುದ್ಧಿ ಹೇಳಲು ಸುದೀಪ್ ಅವರೇ ಬರಬೇಕು ಎಂದು ಕಾಯುವುದು ಯಾಕೆ? ಸ್ಪರ್ಧಿಗಳು ಮಾಡಿದ ತಪ್ಪನ್ನು ಸ್ಥಳದಲ್ಲಿಯೇ ಬಿಗ್​ಬಾಸ್ ಸರಿ ಮಾಡಬಹುದಲ್ಲವೇ? ಏಕೆ ಮಾಡುತ್ತಿಲ್ಲ?’ ಎಂದು ಬರೆಯಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT