ಗುರುವಾರ , ಅಕ್ಟೋಬರ್ 6, 2022
26 °C

ದೂರದರ್ಶನಕ್ಕೆ ಚೈತನ್ಯ ನೀಡಲು ದೇಶಭಕ್ತಿ ಮಾರ್ಗ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಿಲ್ಲದೇ ಸೊರಗುತ್ತಿರುವ ಸರ್ಕಾರಿ ಒಡೆತನದ ಮನರಂಜನಾ ವಾಹಿನಿ ದೂರದರ್ಶವನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ದೇಶಭಕ್ತಿಯ ಸಂದೇಶವಿರುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ಇದನ್ನೂ ಓದಿ: 

ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ, ಅಷ್ಟಾಗಿ ಪರಿಚಿತವಲ್ಲದ ಕಥೆಗಳನ್ನು ನಿರೂಪಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ‘ಸ್ವರಾಜ್‌– ಭಾರತ ಸ್ವಾತಂತ್ರ ಸಂಗ್ರಾಮದ ಸಮಗ್ರ ಗಾಥೆ’ ಹೆಸರಿನ 75-ಕಂತುಗಳ ಮೆಗಾ ಧಾರಾವಾಹಿಯನ್ನು ಪ್ರಸಾರ ಮಾಡಲಿದೆ. ಆಗಸ್ಟ್ 14ರಿಂದ ‘ಡಿಡಿ ನ್ಯಾಷನಲ್’ನಲ್ಲಿ ಹಿಂದಿಯಲ್ಲಿ ಧಾರಾವಾಹಿ ಪ್ರಸಾರವಾಗಲಿದೆ ಎಂದು ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.

ದೂರದರ್ಶನದ ಪ್ರಾದೇಶಿಕ ವಾಹಿನಿಗಳಲ್ಲಿ ಪ್ರಸಾರ ಮಾಡಲೆಂದು ಈ ಧಾರಾವಾಹಿಗಳನ್ನು ಒಂಬತ್ತು ಪ್ರಾದೇಶಿಕ ಭಾಷೆಗಳಲ್ಲಿ ಮತ್ತು ಇಂಗ್ಲಿಷ್‌ಗೆ ಡಬ್ ಮಾಡಲಾಗುತ್ತದೆ ಎಂದೂ ಅವರು ವಿವರಿಸಿದರು.

‘ಕಾಂಟಿಲೋ ಪಿಕ್ಚರ್ಸ್’ ನಿರ್ಮಿಸಿರುವ ಈ ಧಾರಾವಾಹಿಯು ಪ್ರತಿ ಭಾನುವಾರ ರಾತ್ರಿ 9.00 ರಿಂದ 10.00 ರವರೆಗೆ ಪ್ರಸಾರವಾಗಲಿದೆ. ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಮರು ಪ್ರಸಾರವಾಗುತ್ತದೆ. ಧಾರಾವಾಹಿಯ ಆಡಿಯೋ ಆವೃತ್ತಿಯು ಆಲ್ ಇಂಡಿಯಾ ರೇಡಿಯೋ ನೆಟ್‌ವರ್ಕ್‌ನಲ್ಲಿ ಶನಿವಾರ ಬೆಳಿಗ್ಗೆ 11.00 ರಿಂದ ಪ್ರಸಾರವಾಗಲಿದೆ.

‘ಸ್ವರಾಜ್’ ಧಾರಾವಾಹಿಯಲ್ಲದೇ, ದೂರದರ್ಶನವು ದೇಶಭಕ್ತಿ ಮತ್ತು ಮಹಿಳಾ ಸಬಲೀಕರಣದ ಸಂದೇಶವಿರುವ ‘ಜೈ ಭಾರತಿ’, ‘ಕಾರ್ಪೊರೇಟ್ ಸರ್ಪಂಚ್’ ಮತ್ತು ‘ಯೇ ದಿಲ್ ಮಾಂಗೆ ಮೋರ್’ ಎಂಬ ನಾಲ್ಕು ಧಾರಾವಾಹಿಗಳನ್ನು ಸಹ ಪ್ರಸಾರ ಮಾಡಲಿದೆ.

‘ಹೊಸ ಧಾರಾವಾಹಿಗಳು ಡಿಡಿ ನ್ಯಾಷನಲ್ ಅನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ’ ಎಂದು ಅಗರವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರಂತಹ ದಂತಕಥೆಗಳಿಗೆ ಸಂಬಂಧಿಸಿದ ಸಂಗೀತ ರಿಯಾಲಿಟಿ ಶೋ 'ಸುರೋನ್ ಕಾ ಏಕಲವ್ಯ' ಅನ್ನು ಸಹ ಪ್ರಸಾರ ಮಾಡಲಿದೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ 46 ಸ್ಟಾರ್ಟ್‌ಅಪ್‌ಗಳ ಯಶಸ್ಸನ್ನು ತಿಳಿಸುವ 'ಸ್ಟಾರ್ಟ್‌ಅಪ್ ಚಾಂಪಿಯನ್ಸ್ 2.0' ಕಾರ್ಯಕ್ರಮವನ್ನೂ ಚಾನಲ್ ಪ್ರಸಾರ ಮಾಡಲಿದೆ ಎಂದು ಅಗರ್ವಾಲ್ ಹೇಳಿದರು.

ದೂರದರ್ಶನದ ವೀಕ್ಷಕರ ಸಂಖ್ಯೆ ಹಲವು ವರ್ಷಗಳಿಂದ ಇಳಿಮುಖವಾಗುತ್ತಾ ಸಾಗುತ್ತಿದೆ.

ದೂರದರ್ಶನ ಚಾನೆಲ್‌ಗಳ ಒಟ್ಟು ವೀಕ್ಷಕರ ಸಂಖ್ಯೆ 2019 ರಲ್ಲಿ 760.4 ದಶಲಕ್ಷವಿತ್ತು. 2020 ರಲ್ಲಿ 747 ದಶಲಕ್ಷಕ್ಕೂ, 2021 ರಲ್ಲಿ 684.9 ದಶಲಕ್ಷಕ್ಕೂ ಇಳಿಕೆಯಾಗಿದೆ. ಈ ವಿಷಯವನ್ನು ಕೇಂದ್ರ ಸರ್ಕಾರವೇ ಸಂಸತ್‌ನಲ್ಲಿ ತಿಳಿಸಿದೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು