ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK 10 | ಆಸ್ಪತ್ರೆಯಿಂದ ಬಿಗ್‌ಬಾಸ್‌ ಮನೆಗೆ ಮರಳಿದ ಡ್ರೋನ್‌ ಪ್ರತಾಪ್‌

Published 6 ಜನವರಿ 2024, 7:29 IST
Last Updated 6 ಜನವರಿ 2024, 7:29 IST
ಅಕ್ಷರ ಗಾತ್ರ

ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಡ್ರೋನ್‌ ಪ್ರತಾಪ್ ಅವರು ಇಂದು ಮರಳಿ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ತಕ್ಷಣ ಪ್ರತಾಪ್‌ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಇದಾದ ಬೆನ್ನಲ್ಲೇ ಪ್ರತಾಪ್‌ ಅವರು ಬಿಗ್‌ಬಾಸ್ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಇದಕ್ಕೆ ಸ್ಪಷ್ಟನೆ ನೀಡಿದ್ದ ಬಿಗ್‌ಬಾಸ್‌, ‘ಪ್ರತಾಪ್‌ ಅವರು ಆತ್ಮಹತ್ಯೆಗೆ ಯತ್ನಿಸಿಲ್ಲ. ಎರಡು ದಿನದಿಂದ ಸರಿಯಾಗಿ ಊಟ ಮಾಡದೇ ಇರುವುದರಿಂದ ಆರೋಗ್ಯ ಹದಗೆಟ್ಟಿತ್ತು’ ಎಂದು ತಿಳಿಸಿತ್ತು.

ಇಂದು ಬಿಡುಗೊಡೆಗೊಂಡ ಪ್ರೊಮೊದಲ್ಲಿ ಪ್ರತಾಪ್ ಅವರು ಮನೆಗೆ ಮರಳಿರುವುದನ್ನು ಕಾಣಬಹುದಾಗಿದೆ. ಹೊಸ್ತಿಲು ದಾಟಿ ಒಳಗೆ ಬರುತ್ತಿದ್ದಂತೆ ಪ್ರತಾಪ್‌ ಅವರನ್ನು ಸಂಗೀತಾ ಮತ್ತು ನಮ್ರತಾ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ನಂತರ ದೇವರ ಪೂಜೆ ಮಾಡುವ ಮೂಲಕ ಮತ್ತೆ ಸ್ಪರ್ಧೆಗೆ ಇಳಿದಿದ್ದಾರೆ.

ಈ ವಾರದ ಕಳಪೆ ಪಟ್ಟ ಮೈಕಲ್ ಅವರಿಗೆ ಹೋದರೆ, ಉತ್ತಮ ಪಟ್ಟ ಕಾರ್ತಿಕ್‌ ಅವರ ಪಾಲಾಗಿದೆ. ಮುಂದಿನ ವಾರದ ಕ್ಯಾಪ್ಟನ್ ಆಗಿ ಸಂಗೀತಾ ಅವರು ಆಯ್ಕೆಯಾಗಿದ್ದಾರೆ.

ವರ್ತೂರು ಸಂತೋಷ್, ಕಾರ್ತಿಕ್‌, ತುಕಾಲಿ ಸಂತೋಷ್, ಮೈಕಲ್‌ ,ಪ್ರತಾಪ್ ಈ ವಾರದ ನಾಮಿನೇಷನ್‌ ಪಟ್ಟಿಯಲ್ಲಿ ಇದ್ದಾರೆ. ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT