‘ಸರಿಗಮಪ’, ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗಾಯಕ ಅನಿರುದ್ಧ ಶಾಸ್ತ್ರಿ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆ. 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಅನಿರುದ್ಧ ಶಾಸ್ತ್ರಿ, ಶ್ರೇಯಾ ಬಾಲಾಜಿ ಅವರ ಕೊರಳಿಗೆ ತಾಳಿ ಕಟ್ಟಿದ್ದಾರೆ.

ಕನ್ನಡದ ಕೆಲವು ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದ ಅನಿರುದ್ಧ ಶಾಸ್ತ್ರಿ ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕರಾಗಿ ಹೊರ ಹೊಮ್ಮಿದ್ದಾರೆ. ಈಗಾಗಲೇ ಕನ್ನಡದಲ್ಲಿ ಹಲವು ಸೂಪರ್ ಹಿಟ್ ಗೀತೆಗಳನ್ನು ಹಾಡಿರುವ ಅನಿರುದ್ಧ ಶಾಸ್ತ್ರಿ, ದರ್ಶನ್ ನಟನೆಯ 'ಕಾಟೇರ' ಚಿತ್ರದ ಥೀಮ್ ಸಾಂಗ್ ಹಾಡಿ ಸದ್ದು ಮಾಡಿದ್ದರು. ಬಳಿಕ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಕಾಳಿ ಹಾಡು ಕೂಡ ಹಾಡಿದ್ದರು.
.Photos: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’ .ಮದುವೆ ಬೆನ್ನಲ್ಲೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಶ್ಮಿಕಾ–ವಿಜಯ್ ದೇವರಕೊಂಡ ದಂಪತಿ.
ಎಸ್ಪಿ ಬಾಲಸುಬ್ರಹ್ಮಣ್ಯಂ ಮತ್ತು ಜಾನಕಿ ಅವರಂತ ಖ್ಯಾತ ಗಾಯಕರೊಂದಿಗೆ ವೇದಿಕೆ ಹಂಚಿಕೊಂಡ ಅನಿರುದ್ಧ ಶಾಸ್ತ್ರಿ ಅವರು ಗಾಯಕರಾಗಿ ಅಷ್ಟೇ ಅಲ್ಲದೆ ನಟ, ಸಂಗೀತ ನಿರ್ದೇಶಕ, ಸಾಹಿತಿ ಜೊತೆಗೆ ನಿರೂಪಕರೂ ಆಗಿ ಛಾಪು ಮೂಡಿಸಿದ್ದಾರೆ.

ಈಗ ಗಾಯಕ ಅನಿರುದ್ಧ ಶಾಸ್ತ್ರಿ ಅವರು ಭರತನಾಟ್ಯ ಕಲಾವಿದೆಯಾಗಿರುವ ಶ್ರೇಯಾ ಬಾಲಾಜಿ ಅವರ ಜೊತೆಗೆ ಮದುವೆಯಾಗಿದ್ದಾರೆ. ಮದುವೆ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರ: ಇನ್ಸ್ಟಾಗ್ರಾಂಈ ಜೋಡಿಯ ಮದುವೆಗೆ ಗಾಯಕಿ ಮಾಂಗ್ಲಿ, ಕನ್ನಡದ ಗಾಯಕ–ಗಾಯಕಿಯರು, ಚಂದನವನದ ಕಲಾವಿದರು, ಕಿರುತೆರೆ ನಟಿಯರು ಭಾಗಿಯಾಗಿ ಶುಭಹಾರೈಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್ ಮಾಡುವ ಮೂಲಕ ದಂಪತಿಗೆ ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.