ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿಯಲ್ಲಿ ಬರುತ್ತಿದ್ದಾಳೆ ‘ಕನ್ನಡತಿ’

Last Updated 20 ಏಪ್ರಿಲ್ 2022, 11:28 IST
ಅಕ್ಷರ ಗಾತ್ರ

ಜನಮನ್ನಣೆ ಪಡೆದ ಧಾರಾವಾಹಿಗಳಲ್ಲಿ ಕಿರಣ್ ರಾಜ್ – ರಂಜನಿ ರಾಘವನ್‌ ಅಭಿನಯದ ‘ಕನ್ನಡತಿ’ ಈಗ ಹಿಂದಿಗೆ ಡಬ್‌ ಆಗುತ್ತಿದೆ. ‘ಅಜ್ನಾಬಿ ಬನೇ ಹಮ್ ಸಫರ್’ ಎಂಬ ಹೆಸರಿನಲ್ಲಿ ಕಲರ್ಸ್ ರಿಷ್ತೇ ಯುಕೆ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈಗಾಗಲೇ ಈ ಧಾರಾವಾಹಿ ಮರಾಠಿಗೆ ಡಬ್‌ ಆಗಿ ಪ್ರಸಾರವಾಗುತ್ತಿದೆ. ಉಭಯ ಕಲಾವಿದರಿಗೂ ಹೆಸರು ತಂದುಕೊಟ್ಟ ಧಾರಾವಾಹಿಯಿದು. ಧಾರಾವಾಹಿ ಆರಂಭದ ದೃಶ್ಯದಲ್ಲಿ ತೋರಿಸುವ ‘ಸರಿಗನ್ನಡಂ ಗೆಲ್ಗೆ’ಯಲ್ಲಿ ಒಂದು ಕನ್ನಡ ಪದದ ಸರಿಯಾದ ಉಚ್ಚಾರ ಮತ್ತು ಪರಿಚಯದ ತುಣುಕು ಅಪಾರ ವೀಕ್ಷಕರ ಮೆಚ್ಚುಗೆ ಪಡೆದಿದೆ.

ಕಿರಣ್‌ರಾಜ್‌– ರಂಜನಿ ರಾಘವನ್‌ ಹಿರಿತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಕಿರಣ್‌ ಅವರ ‘ಬಡ್ಡೀಸ್‌’ ಚಿತ್ರದ ಟೀಸರ್‌ ಏ. 25ರಂದು ಬಿಡುಗಡೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT