ಮಂಗಳವಾರ, ಏಪ್ರಿಲ್ 7, 2020
19 °C

ಸಾಧಕಿಯರ ಕಿಚನ್ ದರ್ಬಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹಿಳಾ ದಿನಾಚರಣೆ ಪ್ರಯುಕ್ತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಒಂದು ವಾರ ಮಹಿಳಾ ಸಾಧಕಿಯರ ‘ಕಿಚನ್ ದರ್ಬಾರ್’ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ.

ಅಡುಗೆಮನೆಯಿಂದ ಬಾಹ್ಯಾಕಾಶ ನಿಲ್ದಾಣದವರೆಗೂ ಮಹಿಳೆಯರ ಸಾಧನೆ ಆಕಾಶದೆತ್ತರಕ್ಕೆ ಹಬ್ಬಿನಿಂತಿದೆ. ಇಂತಹ ಮಹಿಳಾ ಸಾಧಕಿಯರು ಈ ಬಾರಿ ಅಡುಗೆ ಮನೆಯಲ್ಲಿ ತಮ್ಮ ಕೈರುಚಿ ತೋರಿಸಲಿದ್ದಾರೆ. ಮಾರ್ಚ್ 2ರಿಂದ -9ರವರೆಗೆ ಸ್ಟಾರ್ ಸುವರ್ಣವಾಹಿನಿಯ ಕಿಚನ್ ದರ್ಬಾರ್ ಕಾರ್ಯಕ್ರಮದಲ್ಲಿ ಸಾಧಕಿಯರ ದರ್ಬಾರ್ ನಡೆಯಲಿದೆ. ಮಧ್ಯಾಹ್ನ 12ಗಂಟೆಗೆ ಕಿಚನ್ ದರ್ಬಾರ್‌ನಲ್ಲಿ ಸಾಧಕಿಯರ ಕೈ ಅಡುಗೆಯ ಸವಿರುಚಿ ಉಣಬಡಿಸಲಿದ್ದಾರೆ.

ಮಾರ್ಚ್ 2 ಸೋಮವಾರದಂದು ನಟಿ ವನಿತಾ ವಾಸು, ಮಂಗಳವಾರ ಡಿಸಿಪಿ ಇಶಾ ಪಂತ್, ಬುಧವಾರ ರಾಯಚೂರಿನ ರೈತ ಮಹಿಳೆ ಕವಿತಾ ಉಮಾಶಂಕರ್, ಮಾರ್ಚ್ 5 ಗುರುವಾರ ಪಿಡಿಯಾಟ್ರಿಕ್ ಕಾರ್ಡಿಯೋಜಿಸ್ಟ್ ಡಾ.ವಿಜಯ್ ಲಕ್ಷ್ಮಿ ಬಾಳೇಕುಂದ್ರಿ, ಶುಕ್ರವಾರ  ಲೇಖಕಿ ಬಿ.ಟಿ.ಲಲಿತಾ ನಾಯಕ್, ಶನಿವಾರ ಬಿಎಂಟಿಸಿಯ ಮೊದಲ ಬಸ್ ಚಾಲಕಿ ಪ್ರೇಮಾ, ಭಾನುವಾರ ಮತ್ತು ಸೋಮವಾರ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿಯವರು ಪಾಲ್ಗೊಳ್ಳಲ್ಲಿದ್ದಾರೆ. ವೃತ್ತಿ ಬದುಕಿನಲ್ಲಿ ಮಹತ್ತರ ಸಾಧನೆಗೈದಿರುವ ಈ ಮಹಿಳೆಯರು, ಅಡುಗೆಮನೆಯಲ್ಲೂ ತಮ್ಮ ಕೈಚಳಕ ತೋರಿಸಲಿದ್ದಾರೆ. ಈ ಕಾರ್ಯಕ್ರಮವನ್ನು ನಟಿ, ನಿರೂಪಕಿ ಸುಜಾತಾ ನಡೆಸಿಕೊಡಲಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು