ಮಂಗಳೂರು: ನಟಿ, ನಿರೂಪಕಿ ಅನುಶ್ರೀ ಶನಿವಾರವಷ್ಟೇ ವಿಚಾರಣೆ ಎದುರಿಸಿದ್ದು, ಇದೀಗ ಅವರ ರಕ್ತದ ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಚಾರಣೆಯ ವೇಳೆ ಅನುಶ್ರೀ ಅವರು, ‘ಡ್ರಗ್ಸ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ಕಿಶೋರ್ ಮತ್ತು ತರುಣ್ 12 ವರ್ಷಗಳ ಹಿಂದೆ ನನ್ನ ಕೊರಿಯೋಗ್ರಫರ್ ಆಗಿದ್ದರು. ಅವರ ಜೊತೆಗೆ ಬೇರೆ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ. ಆದರೆ, ತರುಣ್ ರಾಜ್ ಮಾತ್ರ ಬೆಂಗಳೂರಿನಲ್ಲೂ ಡ್ರಗ್ಸ್ ಪಾರ್ಟಿ ಮಾಡಿದ್ದು, ಅನುಶ್ರೀ ಕೂಡ ಭಾಗವಹಿಸಿದ್ದರು ಎಂದು ತಿಳಿಸಿದ್ದಾನೆ. ಹೀಗಾಗಿ ಅನುಶ್ರೀ ಅವರನ್ನು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಮಧ್ಯೆ ತರುಣ್ ರಾಜ್ ಹಾಗೂ ಕಿಶೋರ್ ಶೆಟ್ಟಿ ನೀಡಿದ ಮಾಹಿತಿಯಂತೆ ನಗರ ಸಿಸಿಬಿ ಪೊಲೀಸರು ಮಹಮ್ಮದ್ ಶಾಕೀರ್ ಎಂಬಾತನನ್ನು ಬಂಧಿಸಿದ್ದಾರೆ. ಈಗಾಗಲೇ ಬಂಧಿತರಾಗಿರುವ ಎಲ್ಲರಿಗೂ ಶಾಕೀರ್ ಡ್ರಗ್ಸ್ ಲಿಂಕ್ ಕೊಡಿಸಿದ್ದ ಎಂಬ ಮಾಹಿತಿ ದೊರೆತಿದ್ದು, ಶಾಕೀರ್ ವಿಚಾರಣೆ ವೇಳೆ ಹಲವರ ಹೆಸರು ಬಹಿರಂಗವಾಗುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.