ಶನಿವಾರ, ಏಪ್ರಿಲ್ 4, 2020
19 °C

ಎಮ್ಮಿ ಪುರಸ್ಕಾರದ ನಿರೀಕ್ಷೆಯಲ್ಲಿ ‘ಲಸ್ಟ್‌ ಸ್ಟೋರಿಸ್‌‘ನ ರಾಧಿಕಾ ಆಪ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನೆಟ್‌ಪ್ಲಿಕ್ಸ್‌ನ ‘ಲಸ್ಟ್‌ ಸ್ಟೋರಿಸ್‌‘ ನಟನೆಗೆ ರಾಧಿಕಾ ಆಪ್ಟೆ ಅವರು ಅಂತರರಾಷ್ಟ್ರೀಯ ಎಮ್ಮಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದಾರೆ. ಆ ಮೂಲಕ ನ್ಯೂಯಾರ್ಕ್‌ನಲ್ಲಿ ನಡೆಯುವ ಅಂತರರಾಷ್ಟ್ರೀಯ ಎಮ್ಮಿ ಅವಾರ್ಡ್‌–2019ರ ಅತ್ಯುತ್ತಮ ನಟಿ ಪುರಸ್ಕಾರದ ರೇಸ್‌ನಲ್ಲಿದ್ದಾರೆ. 

‘ನಾಮನಿರ್ದೇಶನ ಪದಕ‘ ಸ್ವೀಕರಿಸಿರುವ ರಾಧಿಕಾ ಆಪ್ಟೆ ಅವರು, ಅದರ ಭಾವಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ರಾಧಿಕಾ ಆಪ್ಟೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. 

‘ಇದು ನಾಮನಿರ್ದೇಶನ ಪದಕವಾಗಿದ್ದು, ಅಂತರರಾಷ್ಟ್ರೀಯ ಎಮ್ಮಿ ಪುರಸ್ಕಾರಕ್ಕೆ ಧನ್ಯವಾದಗಳು! ನಾಮನಿರ್ದೇಶನ ಆಗಿರುವ ಪ್ರತಿ ವ್ಯಕ್ತಿಗೂ ಈ ಪದಕ ನೀಡಲಾಗಿದೆ. ನನಗೆ ಬಹಳ ಹೆಮ್ಮೆಯಾಗುತ್ತಿದೆ. ಸೋಮವಾರ ನಡೆಯುವ ಪುರಸ್ಕಾರ ಸಮಾರಂಭವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.’ ಎಂದಿದ್ದಾರೆ. 

ಎಮ್ಮಿ ನಾಮಿನೇಶನ್‌ ಪದಕ ಧರಿಸಿರುವ ಭಾವ ಚಿತ್ರವನ್ನು ಸಹ ಅವರು ತಮ್ಮ ಇನ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸೆಪ್ಟಂಬರ್‌ನಲ್ಲಿ ಅಂತರರಾಷ್ಟ್ರೀಯ ಎಮ್ಮಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿತ್ತು. ಸೋಮವಾರ ಸಂಜೆ (ಭಾರತದ ಕಾಲಮಾನದ ಪ್ರಕಾರ ಮಂಗಳವಾರ ಬೆಳಗ್ಗೆ) ಪುರಸ್ಕಾರ ಸಮಾರಂಭ ನಡೆಯಲಿದೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು