ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿ ಇಂಡಿಯಾ– ಜೀ ಎಂಟರ್‌ಟೈನ್‌ಮೆಂಟ್ ವಿಲೀನ ಒಪ್ಪಂದಕ್ಕೆ ಸಹಿ

Last Updated 22 ಡಿಸೆಂಬರ್ 2021, 16:55 IST
ಅಕ್ಷರ ಗಾತ್ರ

ನವದೆಹಲಿ: ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಮತ್ತು ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಕಂಪನಿಗಳು ಪರಸ್ಪರ ವಿಲೀನಕ್ಕೆ ಅಂತಿಮ ಒಪ್ಪಿಗೆ ನೀಡಿವೆ.

ಜೀ ಅನ್ನು ಸೋನಿಯೊಂದಿಗೆ ವಿಲೀನಗೊಳಿಸಲು ಹಾಗೂ ಎರಡೂ ಕಂಪನಿಗಳ ನೆಟ್‌ವರ್ಕ್‌ಗಳು, ಡಿಜಿಟಲ್ ಸ್ವತ್ತುಗಳು, ಕಾರ್ಯಾಚರಣೆ ಮತ್ತು ಪ್ರೋಗ್ರಾಂ ಲೈಬ್ರರಿಗಳನ್ನು ಸಂಯೋಜಿಸಲು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಕಂಪನಿಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ವಿಲೀನದ ಕುರಿತು ಸೆಪ್ಟೆಂಬರ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಸೋನಿ ಕಂಪನಿಯು ₹ 11,812 ಕೋಟಿ ಹೂಡಿಕೆ ಮಾಡಲಿದ್ದು, ವಿಲೀನದ ನಂತರದ ಕಂಪನಿಯಲ್ಲಿ ಶೇ 52.93ರಷ್ಟು ಷೇರುಪಾಲು ಹೊಂದಲಿದೆ. ಉಳಿದ ಶೇ 47.07ರಷ್ಟು ಷೇರುಗಳನ್ನು ಜೀ ಹೊಂದಲಿದೆ.

ಹೊಸ ಕಂಪನಿಯು ಷೇರುಪೇಟೆಯಲ್ಲಿ ನೋಂದಣಿ ಆಗಲಿದೆ.ಜೀ ಎಂಟರ್‌ಟೇನ್‌ಮೆಂಟ್‌ ಎಂಟರ್‌ ಪ್ರೈಸಸ್‌ ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪುನೀತ್ ಗೋಯಂಕಾ ಅವರು ವಿಲೀನದ ನಂತರದ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಗಿರಲಿದ್ದಾರೆ. ಆಡಳಿತ ಮಂಡಳಿಯ ಬಹುಪಾಲು ನಿರ್ದೇಶಕರನ್ನು ಸೋನಿ ಸಮೂಹವು ನೇಮಕ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT