ಮಂಗಳವಾರ, ಡಿಸೆಂಬರ್ 7, 2021
23 °C

ಹವಾಮಾನ ವರದಿ ವೇಳೆ ಪೋರ್ನ್‌ ತುಣುಕು ಪ್ರಸಾರ: ಕ್ಷಮೆಯಾಚಿಸಿದ ಸುದ್ದಿವಾಹಿನಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಹವಾಮಾನ ವರದಿ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ನೀಲಿ ಚಿತ್ರದ ತುಣುಕೊಂದು ಕಾಣಿಸಿಕೊಂಡಿರುವುದು ಸುದ್ದಿವಾಹಿನಿಯೊಂದರ ವೀಕ್ಷಕರನ್ನು ಗಾಬರಿ ಬೀಳಿಸಿದೆ.

ವಾಷಿಂಗ್ಟನ್‌ನ ಸ್ಥಳೀಯ ಸುದ್ದಿವಾಹಿನಿಯಲ್ಲಿ ಭಾನುವಾರ ಸಂಜೆ ಹವಾಮಾನ ವರದಿ ಪ್ರಸಾರಗೊಳ್ಳುತ್ತಿತ್ತು. ಆ ಸಮಯದಲ್ಲಿ 13 ಸೆಕೆಂಡುಗಳ ನೀಲಿ ಚಿತ್ರದ ತುಣುಕೊಂದು ಕಾಣಿಸಿಕೊಂಡಿತ್ತು. ಇದು ಆಕಸ್ಮಿಕ ಘಟನೆಯಾದರೂ ಸಹಿತ ಸುದ್ದಿವಾಹಿನಿಯ ಬೇಜವಾಬ್ದಾರಿತನಕ್ಕೆ ವೀಕ್ಷಕರು ಛೀಮಾರಿ ಹಾಕಿದ್ದಾರೆ.

ಸಿಬಿಎಸ್‌ನ ಅಂಗಸಂಸ್ಥೆಯಾದ ಕ್ರೆಮ್‌ ವಾಹಿನಿಯಲ್ಲಿ ಈ ಅಚಾತುರ್ಯ ನಡೆದಿತ್ತು. ಘಟನೆಗೆ ಸಂಬಂಧಪಟ್ಟಂತೆ ಸುದ್ದಿವಾಹಿನಿಯ ಮುಖ್ಯಸ್ಥರು ವೀಕ್ಷಕರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಭಾನುವಾರ ರಾತ್ರಿ 11 ಗಂಟೆಗೆ ಕ್ಷಮೆಯಾಚಿರುವ ವಾಹಿನಿಯ ಮುಖ್ಯಸ್ಥರು, 'ಸಂಜೆ 6 ಗಂಟೆಗೆ ಏನು ಸಂಭವಿಸಿದೆಯೋ ಅದಕ್ಕೆ ಕ್ಷಮೆ ಕೇಳಲು ಬಯಸುತ್ತೇವೆ' ಎಂದಿದ್ದಾರೆ.

'ಕಾರ್ಯಕ್ರಮದ ಮೊದಲ ಭಾಗದಲ್ಲಿ ಸೂಕ್ತವಲ್ಲದ ವಿಡಿಯೊ ಪ್ರಸಾರವಾಯಿತು. ಈ ರೀತಿಯ ಘಟನೆ ಮರುಕಳಿಸದಂತೆ ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ' ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು