ಪ್ಯಾರಿಸ್ನಲ್ಲಿ ಗ್ರೇಟಾ ತಂಬರ್ಗ್ ಆಂದೋಲನ

ಪ್ಯಾರಿಸ್: ಸ್ವೀಡನ್ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾ ತಂಬರ್ಗ್ (16) ತರಗತಿ ಬಹಿಷ್ಕಾರ ಆಂದೋಲವನ್ನು ಶುಕ್ರವಾರ ಪ್ಯಾರಿಸ್ನಲ್ಲಿ ನಡೆಸುವ ಮೂಲಕ ಗಮನ ಸೆಳೆದಿದ್ದಾಳೆ.
ಇಲ್ಲಿಯ ವಿದ್ಯಾರ್ಥಿಗಳು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಬೀದಿಗಳಿದು ಹೋರಾಟ ನಡೆಸಲು ಜಾಗೃತಿ ಮೂಡಿಸುವ ಪ್ರಯತ್ನ ಆರಂಭಿಸಿದ್ದಾಳೆ.
ಈ ಆಂದೋಲನದ ಭಾಗವಾಗಿ ಪತ್ರಿಕಾಗೋಷ್ಠಿ ನಡೆಸಿದಳು. ನಂತರ ಹವಾಮಾನ ಬದಲಾವಣೆ ಕುರಿತು ಅರಿವು ಮೂಡಿಸುವ ಮೆರವಣಿಗೆಯಲ್ಲಿ ಭಾಗವಹಿಸಿದಳು.
ಕಳೆದ ಡಿಸೆಂಬರ್ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ತಂಬರ್ಗ್ ಮಾಡಿದ ಭಾಷಣಕ್ಕೆ ರಾಜಕೀಯ ನಾಯಕರು ಮತ್ತು ಪರಿಸರ ಹೋರಾಟಗಾರರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸಿಡ್ನಿ, ಬ್ರುಸೆಲ್, ಬರ್ಲಿನ್, ಲಂಡನ್ನಿನ ಹಲವು ನಗರಗಳ ವಿದ್ಯಾರ್ಥಿಗಳು ಈಕೆಯಿಂದ ಪ್ರೇರಣೆ ಪಡೆದು ಜಾಗತಿಕ ತಾಪಮಾನದ ವಿರುದ್ಧ ಹೋರಾಡುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.