ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video: ಸಫಾರಿ ವೇಳೆ ನಟಿ ರವೀನಾ ಟಂಡನ್‌ಗೆ ಅತಿ ಸನಿಹ ಬಂದ ಹುಲಿ

Last Updated 30 ನವೆಂಬರ್ 2022, 12:38 IST
ಅಕ್ಷರ ಗಾತ್ರ

ಮುಂಬೈ:ಬಾಲಿವುಡ್ ನಟಿ ರವೀನಾ ಟಂಡನ್ ಅವರ ಸಫಾರಿ ವೇಳೆ ಹುಲಿಯೊಂದು ಅತಿ ಸನಿಹ ಬಂದು ಘರ್ಜಿಸಿ ಹೋಗಿರುವ ಘಟನೆ ನಡೆದಿದೆ.

ಹೌದು, ಸಫಾರಿ ಪ್ರಿಯೆ ಹಾಗೂ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕಿಯಾಗಿರುವ ಕೆಜಿಎಫ್ ಚಾಫ್ಟರ್ 2 ಖ್ಯಾತಿಯ ನಟಿ ರವೀನಾ, ಕಳೆದ ನವೆಂಬರ್ 22 ರಂದು ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ 'ಸಾತ್ಪುರಾ ಹುಲಿ ಸಂರಕ್ಷಿತ ಅರಣ್ಯ'ದಲ್ಲಿ ಸಫಾರಿಗೆ ಹೋಗಿದ್ದರು.

ಈ ವೇಳೆ ಹುಲಿಯೊಂದು ಪೊದೆಯಿಂದ ಹೊರಗೆ ಬಂದು ರವೀನಾ ಅವರು ನಿಂತಿದ್ದ ಸಫಾರಿ ಜೀಪ್ ಬಳಿ ನಡೆದುಕೊಂಡು ಬಂದಿದೆ. ಅಷ್ಟೇ ಅಲ್ಲದೇ ಜೀಪ್‌ನ ತೀರಾ ಸನಿಹ ಬಂದು ಮುಂದೆ ಸಾಗಿದೆ. ಈ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ರವೀನಾ ಅವರು ಹುಲಿಯ ಆಕರ್ಷಕ ಫೋಟೊಗಳನ್ನು ಸೆರೆಹಿಡಿದಿದ್ದಾರೆ.

ವಿಡಿಯೊವನ್ನು ರವೀನಾ ಟ್ವಿಟರ್‌ನಲ್ಲಿ ಹಂಚಿಕೊಂಡ ಮೇಲೆಮಧ್ಯಪ್ರದೇಶದ ಸಾತ್ಪುರಾ ಹುಲಿ ಸಂರಕ್ಷಿತ ಅರಣ್ಯದ ಅಧಿಕಾರಿಗಳು, ಸಫಾರಿ ವೇಳೆ ಹುಲಿಯ ಅತಿ ಸನಿಹ ಹೋಗಿರುವುದು ಸರಿಯಲ್ಲ ಎಂದು ಸಫಾರಿ ಜೀಪ್ ಚಾಲಕನಿಗೆ ನೋಟಿಸ್ ಕೊಟ್ಟಿದ್ದಾರೆ. ಅಲ್ಲದೇ ಈ ಕುರಿತು ವಿಭಾಗೀಯ ಅರಣ್ಯ ಅಧಿಕಾರಿ ಧೀರಜ್ ಸಿಂಗ್ ಚೌಹಾಣ್ ಅವರು ತನಿಖೆಗೆ ಆದೇಶಿಸಿದ್ದಾರೆ. ರವೀನಾ ಅವರಿಗೆ ನೋಟಿಸ್ ನೀಡಿಲ್ಲ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ರವೀನಾ, ‘ಸಫಾರಿ ವೇಳೆ ನಾವು ನಮ್ಮದೇ ಸರಿಯಾದ ಸಫಾರಿ ಮಾರ್ಗದಲ್ಲಿದ್ದೇವು. ಯಾವುದೇ ಗಲಾಟೆ ಮಾಡದೇ ಸುಮ್ಮನೇ ಹುಲಿ ನೋಡಿದ್ದೇವೆ. ಹುಲಿಗಳು ನಡದಿದ್ದೇ ದಾರಿ. ಹುಲಿಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ನಿರೀಕ್ಷಿಸಲು ಆಗುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಅದರ ಜೊತೆ ವನ್ಯಜೀವಿಗಳು ಸಫಾರಿ ವೇಳೆ ಸಫಾರಿ ಜೀಪ್ ಬಳಿ ಬರುವ ವಿಡಿಯೊಗಳನ್ನು ಅವರು ಹಂಚಿಕೊಂಡಿದ್ದಾರೆ.

ಅರಣ್ಯ ಅಧಿಕಾರಿ ಧೀರಜ್ ಸಿಂಗ್ ಚೌಹಾಣ್ ಅವರು ತನಿಖೆಗೆ ಆದೇಶಿಸಿದ ನಂತರ ರವೀನಾ, ಹುಲಿಯ ವಿಡಿಯೊವನ್ನು ಅಳಿಸಿ ಹಾಕಿದ್ದಾರೆ. ಇನ್ನೊಂದು ಹೆಣ್ಣು ಹುಲಿ ತನ್ನ ಮರಿಗಳೊಂದಿಗೆ ಆಟ ಆಡುವ ವಿಡಿಯೊ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT