ಕಣ್ಮರೆಯಾಗುತ್ತಿವೆ ಚಿಟ್ಟೆಗಳು

7

ಕಣ್ಮರೆಯಾಗುತ್ತಿವೆ ಚಿಟ್ಟೆಗಳು

Published:
Updated:
Deccan Herald

ಬಣ್ಣಬಣ್ಣದ ದಾವಣಿ ಧರಿಸಿ ಹೂವಿಂದ ಹೂವಿಗೆ ಹಾರುತ್ತಿರುವ ಚಿಟ್ಟೆಗಳ ನೋಟ ಇಂದು ನಿಸರ್ಗದಿಂದ ಮಾಯವಾಗುತ್ತಿದೆ.

ಇದರ ನಿಖರವಾದ ಕಾರಣ ಹೇಳಲಾಗದು. ಗುಬ್ಬಚ್ಚಿಗಳು, ಕಾಗೆಗಳು ಹೇಗೆ ಅಗೋಚರವಾಗುತ್ತಿವೆಯೋ ಹಾಗೆಯೇ ಹೂಗಿಡಗಳ ಮೇಲೆ ಲಲ್ಲೆಯಾಡುವ ಪತಂಗಗಳೂ ಕಾಣದಂತಾಗಿವೆ.

ಚಿಟ್ಟೆಗಳಲ್ಲಿ ಹಲವು ಜಾತಿಗಳನ್ನು ಗುರುತಿಸಲಾಗಿದೆ. ಹಲವು ಬಣ್ಣಗಳ ಅಥವಾ ಒಂದೇ ಬಣ್ಣದ ಚಿಟ್ಟೆಗಳಲ್ಲಿಯೂ ನಾನಾ ಆಕಾರ ವೈವಿಧ್ಯಗಳಿವೆ. ರೆಕ್ಕೆಗಳಲ್ಲಿ ನಿಸರ್ಗ ಮಾತೆ ಚಿತ್ತಾರಗಳನ್ನು ಬಿಡಿಸಿರುವುದೂ ಇದೆ. ನಾಲ್ಕು ದಿನದಿಂದ ಆರಂಭಿಸಿ ಹದಿನೆಂಟು ತಿಂಗಳ ವರೆಗೆ ಜೀವಿತಾವಧಿ ಹೊಂದಿದ ಚಿಟ್ಟೆಗಳ ಬಗೆಗೂ ಮಾಹಿತಿಗಳಿವೆ.

ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಮೈಲುದ್ದದ ಸಾಲುಗಟ್ಟಿ ಹಾರುತ್ತ ಹೋಗುವ ಸಮೂಹದ ಚಿಟ್ಟೆಗಳೂ ಇವೆಯಂತೆ.  ಚಿಟ್ಟೆ ಅಥವಾ ಪತಂಗದ ಬದುಕು ನಾಲ್ಕು ಹಂತಗಳಲ್ಲಿದೆ. ಮೊಟ್ಟೆಯಿಂದ ಹೊರಬಂದು ಹುಟ್ಟುವಾಗ ಸಣ್ಣ ಹುಳವಾಗಿದ್ದುದು ಮೈತುಂಬ ತುರಿಕೆಯ ರೋಮಗಳಿರುವ ಕಂಬಳಿಹುಳವಾಗುತ್ತದೆ. ಆಗ ರಾಕ್ಷಸನಂತೆ ವೇಗವಾಗಿ ತಿನ್ನುತ್ತಲೇ ಇರುತ್ತದೆ. ದೇಹದಲ್ಲಿ ಪ್ರೌಢ ಚಿಟ್ಟೆಯಾಗಲು ಬೇಕಾದಷ್ಟು ಆಹಾರ ಸಂಗ್ರಹವಾದ ಕೂಡಲೇ ಅದರ ದೇಹದಿಂದ ಜಿನುಗುವ ದ್ರವವು ಎಳೆಯಾಗಿ ಬದಲಾಯಿಸಿ ಸುತ್ತಲೂ ಒಂದು ಪೊರೆಯಾಗಿ ಮುಚ್ಚುತ್ತದೆ. ಈ ಅವಸ್ಥೆಯಲ್ಲಿ ಮರದ ಕೊಂಬೆಗೆ ತೂಗಾಡುತ್ತ ಕಡೆಗೆ ಪೊರೆಯನ್ನು ಒಡೆದು ಚಿಟ್ಟೆಯಾಗಿ ಪರಿವರ್ತನೆ ಹೊಂದಿ ಹೊರಬೀಳುತ್ತದೆ.

ರೆಕ್ಕೆಗಳಿರುವ ಈ ಚಿಟ್ಟೆ ಹೂವಿಂದ ಹೂವಿಗೆ ಹಾರಿ ಮಕರಂದವನ್ನು ಸವಿಯುತ್ತ ಪ್ರಣಯಲೀಲೆಯಾಡಿ ಮರಳಿ ಮೊಟ್ಟೆಯಿಡುತ್ತದೆ. ಮೊಟ್ಟೆ ಕಂಬಳಿಹುಳವಾಗುತ್ತದೆ. ನಿಸರ್ಗದ ಈ ನಿರಂತರ ಪ್ರಕ್ರಿಯೆಯಿಂದ ರೂಪುಗೊಳ್ಳುತ್ತಿದ್ದ ವರ್ಣಮಯ ಪತಂಗವನ್ನು ಕಂಡು ಆನಂದಿಸುವ ಕಾಲ ಬದಲಾಗಿ ವಿಧವಿಧದ ಆಕಾರದಿಂದ ರಂಜಿಸುತ್ತಿದ್ದ ಚಿಟ್ಟೆಯ ಜಾತಿಯೇ ಅಪರೂಪವಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !