ಶನಿವಾರ, ಜೂನ್ 19, 2021
23 °C

ಚಾಕಲೇಟ್‌ ನಾಯಿಗೆ ಮಾರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಾಯಲ್ಲಿ ಇಟ್ಟರೆ ಮೆಲ್ಲನೆ ಕರಗುವ ಚಾಕಲೇಟ್‌ ಎಲ್ಲರಿಗೂ ಇಷ್ಟ. ಇದರ ಸೇವನೆಯಿಂದ ಸ್ಮರಣ ಶಕ್ತಿ ಹೆಚ್ಚುತ್ತದೆ, ಒತ್ತಡ ನಿವಾರಣೆಯಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಚಾಕಲೇಟ್‌ನಲ್ಲಿರುವ ಲವ್‌ ಡ್ರಗ್‌ ಎಂದು ಗುರುತಿಸುವ ಫಿನಿಲೆತ್ಲಮೈನ್‌ ಎಂಬ ಅಂಶವು ಉತ್ಸಾಹವನ್ನು ಹೆಚ್ಚು ಮಾಡಿ, ಹೃದಯದ ಬಡಿತವನ್ನು ಹೆಚ್ಚು ಮಾಡಿ, ವ್ಯಕ್ತಿಯನ್ನು ಖುಷಿಯಾಗಿರುವಂತೆ ಮಾಡುತ್ತದೆ. ಆದರೆ ಚಾಕಲೇಟ್‌ನಲ್ಲಿನ ಈ ಅಂಶವು ನಾಯಿಗಳ ಪ್ರಾಣಕ್ಕೆ ಮಾರಕ. ವಿಷವಾಗಿ ಪರಿಣಮಿಸಿ ಅದಕ್ಕೆ ಸಾವು ತರಬಹುದು. 

ಚಾಕಲೇಟ್‌ ಹಾಗೂ ಕೊಕೊದಲ್ಲಿನ  ಅಲ್ಕೆಲಾಯಿಡ್‌ ಥಿಯೋಬ್ರೋಮಿನ್‌ ಅನ್ನು ಮಾನವನ ದೇಹವು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. ಆದರೆ ನಾಯಿಗಳಿಂದ ಸಾಧ್ಯವಿಲ್ಲ. ಚಾಕಲೇಟ್‌ನ ಒಂದು ಸಣ್ಣ ಚೂರು ಅವುಗಳ ಹೊಟ್ಟೆಯ ಆರೋಗ್ಯವನ್ನು ಕೆಡಿಸಬಹುದು. ಹೆಚ್ಚು ಪ್ರಮಾಣದಲ್ಲಿ ಚಾಕಲೇಟ್‌ ತಿನ್ನಿಸಿದರೆ ನಾಯಿಗಳಲ್ಲಿ ಆಂತರಿಕ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ಹಾಗೇ ಹೃದಯಾಘಾತವನ್ನೂ ಉಂಟು ಮಾಡಬಹುದು. ಚಾಕಲೇಟ್‌ಗೆ ಸಕ್ಕರೆ ಅಥವಾ ಇತರ ಸಿಹಿ ಪದಾರ್ಥಗಳನ್ನು ಬಳಸಿರುತ್ತಾರೆ. ಸಿಹಿಗಾಗಿ ಬಳಸುವ ಕ್ಸಿಲಿಟೊಲ್‌ ಎಂಬ ಪದಾರ್ಥವೂ ನಾಯಿಗಳ ಆರೋಗ್ಯಕ್ಕೆ ಹಾನಿಕರ. ಇದು ನಾಯಿಗಳಲ್ಲಿ ವಾಂತಿ, ಹೊಟ್ಟೆ ಉಬ್ಬರ ಹಾಗೂ ಕಿಡ್ನಿ ವೈಫಲ್ಯದಂತಹ ತೊಂದರೆಗಳನ್ನು ತರಬಹುದು ಎಂದು ಅಧ್ಯಯನ ತಿಳಿಸಿದೆ. 

ಒಂದು ವೇಳೆ ನಾಯಿ ಚಾಕಲೇಟ್‌ ತಿಂದಿದೆ ಎಂದಾದರೆ ವೈದ್ಯರ ಬಳಿ ತೋರಿಸುವುದು ಉತ್ತಮ. ನಾಯಿಯಲ್ಲಿ ನಿರುತ್ಸಾಹ, ವಾಂತಿ, ನಡುಕ ಅಥವಾ ಜ್ವರ ಕಾಣಿಸಿಕೊಂಡರೆ ಅದಕ್ಕೆ ಹೊದಿಕೆ ಹಾಕಿ ಬೆಚ್ಚನೆ ಸ್ಥಳದಲ್ಲಿ ಇರಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು