ವಾವ್ ಅನಾನಸ್ ಹಣ್ಣು; ಮನುಷ್ಯ ಎಷ್ಟು ಒಳ್ಳೆಯವನು ನಮಗೆ ಹಣ್ಣು ನೀಡಿದ್ದಾನೆ... ಅಮ್ಮ ಎದ್ದೇಳು, ನನಗೆ ಉಸಿರಾಡಲು ಆಗುತ್ತಿಲ್ಲ... ಅಮ್ಮ ಈ ಪ್ರಪಂಚವನ್ನು ನಾನು ನೋಡುವುದಿಲ್ಲವಾ?...

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸ್ಫೋಟಕ ತುಂಬಿದ ಅನಾನಸ್ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ ಸುದ್ದಿ ಪ್ರಕಟಗೊಂಡ ನಂತರ, ಆನೆ ಮತ್ತು ಅದರ ಮಗು ಮಾತನಾಡಿಕೊಳ್ಳುವಇಂಥ ಹತ್ತಾರುಮನಮಿಡಿಯುವ ಕ್ಯಾರಿಕೇಚರ್‌ಗಳು ಟ್ವೀಟರ್‌ನಲ್ಲಿ ಟ್ರೆಂಡ್ ಆಗಿವೆ.

ಪ್ರಕರಣವನ್ನು ನೋವಿನಿಂದ ಖಂಡಿಸುತ್ತಿರುವ ಜನರು#AllLivesMatter ಹಾಗೂ#humanityisdead ಹ್ಯಾಶ್‌ಟ್ಯಾಗ್ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದಲ್ಲಿ ಬಾಲಿವುಡ್ ನಟರು ಕೈಜೋಡಿಸಿದ್ದಾರೆ.ಸ್ಯಾಂಡಲ್‌ವುಡ್‌ನ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಕೂಡ ತಮ್ಮ ಟ್ವೀಟರ್ ಖಾತೆಯಲ್ಲಿ ದುಗುಡ, ಕೋಪ ಹೊರಹಾಕಿದ್ದಾರೆ.

ಈ ಘಟನೆ ಬಗ್ಗೆ ತಿಳಿದು ಅಘಾತಕೊಂಡ ನಟಿ ಅನುಷ್ಕಾ, ತಮ್ಮ ಟ್ವಿಟರ್ ಖಾತೆಯಲ್ಲಿ ಆನೆಯ ಸಾವಿನ ಸುದ್ದಿಯ ಕ್ಯಾರಿಕೇಚರ್ಶೇರ್ ಮಾಡಿ ‘ಇದಕ್ಕಾಗಿಯೇ ನಮಗೆ ಪ್ರಾಣಿಗಳ ಕ್ರೌರ್ಯದ ವಿರುದ್ಧ ಕಠಿಣ ಕಾನೂನಗಳು ಬೇಕಾಗುತ್ತವೆ‘ ಎಂದು ಬರೆದುಕೊಂಡಿದ್ದಾರೆ.

ಆನೆಯ ಸಾವಿನ ಸುದ್ದಿಯ ಬಗ್ಗೆ ಕೋಪಗೊಂಡ ಆಲಿಯಾ ಕ್ಯಾರಿಕೇಚರ್ ಶೇರ್ ಮಾಡಿ ‘ಭಯಾನಕ ಇದೂ ಭಯಾನಕ, ನಾವು ಅವುಗಳ ಧ್ವನಿ ಮತ್ತು ಸಹಬಾಳ್ವೆಯಾಗಿರಬೇಕು. ಇದು ಹೃದಯ ವಿದ್ರಾವಕವಾಗಿದೆ‘ ಎಂದಿದ್ದಾರೆ.

ನಟಿ ಶ್ರದ್ಧಾ ಕಪೂರ್ ಸಹ ಆನೆಯ ಕಾರ್ಟೂನ್ ಫೋಟೊ ಶೇರ್ ಮಾಡಿ, ಬೇಸರ ವ್ಯಕ್ತಪಡಿಸಿದ್ದಾರೆ.ನಟಿ ವರಲಕ್ಷ್ಮಿ ಶರತ್ ಕುಮಾರ್, ’ಇವರು ರಾಕ್ಷಸರು, ಕೊರೊನಾ ಈ ರಾಕ್ಷಸರನ್ನು ಬಲಿಪಡೆಯುತ್ತೆ. ಅವರು ಖಂಡಿತಾ ಸಾಯುತ್ತಾರೆ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.