ಹೂವಿನ ಕಣಿವೆ

7

ಹೂವಿನ ಕಣಿವೆ

Published:
Updated:
Deccan Herald

ಮಾನ್ಸೂನ್‌ ಕಾಲದ ಚಾರಣ ಸ್ಥಳಗಳಲ್ಲಿ ಅತ್ಯಂತ ಜನಪ್ರಿಯ ತಾಣಗಳಲ್ಲೊಂದು ಹೂವಿನ ಕಣಿವೆ (ವ್ಯಾಲಿ ಆಫ್‌ ಫ್ಲವರ್ಸ್‌). ಇದನ್ನು ಚಾರಣಪ್ರಿಯರ ಸ್ವರ್ಗ ಎಂದೇ ಪರಿಗಣಿಸಲಾಗುತ್ತದೆ. ಆಲ್ಪೈನ್‌ ಹುಲ್ಲುಗಾವಲಿನ ವೈಭವವನ್ನು ಸವಿಯಲು ಮಾನ್ಸೂನ್‌ ವಾತಾವರಣದಲ್ಲಿ ಈ ಕಣಿವೆಗೆ ಚಾರಣಿಗರ ದಂಡು ಮುಗಿಬೀಳುತ್ತದೆ.

ಹಿನ್ನೆಲೆಯಲ್ಲಿ ಮಂಜಿನ ಸೆರಗ ಹೊದ್ದ ಹಿಮಾಲಯ ಪರ್ವತಗಳನ್ನು ನೋಡುವುದೇ ಒಂದು ಸೌಭಾಗ್ಯ. ಆ ಸಮಯದಲ್ಲಿ ಇಡೀ ಕಣಿವೆ ಹೂಗಳ ಸೀರೆಯುಟ್ಟು ನಳನಳಿಸುತ್ತಿರುತ್ತದೆ. ಅವುಗಳ ಮಾದಕ ಸುಗಂಧ ಮನಸನ್ನು ಮುದಗೊಳಿಸುತ್ತಿರುತ್ತವೆ. ಬಣ್ಣಗಳ ಓಕುಳಿಯಿಂದ ಇಡೀ ಕಣಿವೆ ನರ್ತಿಸುತ್ತಿರುತ್ತದೆ.

ಈ ಕಣಿವೆ ಇರುವುದು ಉತ್ತಾರಾಖಂಡ ರಾಜ್ಯದಲ್ಲಿ. ಹಲವು ಅಪರೂಪದ ಪ್ರಾಣಿ, ಪಕ್ಷಿ, ಸಸ್ಯಪ್ರಭೇದಗಳಿಗೂ ಈ ಕಣಿವೆ ಹೆಸರುವಾಸಿಯಾಗಿದೆ.

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !