ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಸ್ಟ್‌ಕಾರ್ಡ್‌ ಸ್ಕ್ಯಾನ್‌ ಮಾಡಿ ಪ್ರಾಣಿಗಳ ಬಗ್ಗೆ ತಿಳಿಯಿರಿ

‘ಫ್ಲಿಪ್‌ಎಆರ್‌’ ಸಂಸ್ಥೆಯಿಂದ ಪ್ರಯೋಗ
Last Updated 20 ಏಪ್ರಿಲ್ 2021, 20:11 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನ ಸ್ಥಾಪನೆಯಾಗಿದ್ದು ಯಾವಾಗ? ಉದ್ಯಾನದೊಳಗೆ ಏನೇನಿದೆ? ಅಲ್ಲಿರುವ ಹುಲಿ, ಚಿರತೆ, ಕರಡಿಯ ವೈಶಿಷ್ಟ್ಯಗಳೇನು? ಇವುಗಳನ್ನು ಅರಿತುಕೊಳ್ಳುವ ಕುತೂಹಲ ನಿಮ್ಮಲ್ಲಿದೆಯೇ? ಹಾಗಿದ್ದರೆ ಪೋಸ್ಟ್‌ಕಾರ್ಡ್‌ಗಳನ್ನು ಸ್ಕ್ಯಾನ್‌ ಮಾಡಿ!

ಉದ್ಯಾನ ಹಾಗೂ ಅದರಲ್ಲಿರುವ ಪ್ರಾಣಿಗಳ ವಿಶೇಷತೆಯನ್ನು ಪ್ರವಾಸಿಗರಿಗೆ ತಿಳಿಸುವ ಸಲುವಾಗಿ ‘ಫ್ಲಿಪ್‌ಎಆರ್‌’ ಸಂಸ್ಥೆ ವಿನೂತನ ಪೋಸ್ಟ್‌ಕಾರ್ಡ್‌ಗಳನ್ನು ಸಿದ್ಧಪಡಿಸಿದೆ.

‘ಬನ್ನೇರುಘಟ್ಟ ಉದ್ಯಾನದ ಸಹಯೋಗದಲ್ಲಿ ನಾವು ಈ ಯೋಜನೆ ಕೈಗೆತ್ತಿಕೊಂಡಿದ್ದೆವು. ಉದ್ಯಾನದೊಳಗಿರುವ ಸದರ್ನ್ ಬರ್ಡ್‌ ವಿಂಗ್‌ ಚಿಟ್ಟೆ (ರಾಜ್ಯ ಚಿಟ್ಟೆ), ಜೇನುತುಪ್ಪ ಸವಿಯುವ ಕಪ್ಪು ಕರಡಿ, ಹುಲಿ, ಚಿರತೆ ಹಾಗೂ ಉದ್ಯಾನದ ನಕಾಶೆಯನ್ನೊಳಗೊಂಡ ಪೋಸ್ಟ್‌ಕಾರ್ಡ್‌ಗಳನ್ನು ತಯಾರಿಸಿದ್ದೇವೆ. ಉದ್ಯಾನದ ಆವರಣದಲ್ಲಿ ಇವು ದೊರೆಯುತ್ತವೆ. ನಾವು FlippAR Go ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದ್ದೇವೆ. ಅದು ಗೂಗಲ್‌ ಹಾಗೂ ಆ್ಯಪಲ್‌ ಪ್ಲೇ ಸ್ಟೋರ್‌
ಗಳಲ್ಲಿ ಲಭ್ಯವಿದೆ. ಮೊದಲು ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಆ ಆ್ಯಪ್‌ ತೆರೆದ ಕೂಡಲೇ ‘ಮ್ಯಾಜಿಕ್‌ ಐ ಬಟನ್‌’ ಕಾಣುತ್ತದೆ. ಅದನ್ನು ಕ್ಲಿಕ್ಕಿಸಿ ನಂತರ ಕಾರ್ಡ್‌ ಸ್ಕ್ಯಾನ್‌ ಮಾಡಿದರೆ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಆ ಪ್ರಾಣಿಗಳ ಸಂಪೂರ್ಣ ಮಾಹಿತಿ ಸಿಗುತ್ತದೆ’ ಎಂದು ‘ಫ್ಲಿಪ್‌ಎಆರ್‌’ ಸಂಸ್ಥೆಯ ಸಂಸ್ಥಾಪಕ ವಿವೇಕ್‌ ಮಹಾವೀರ್‌ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮದು ಒಂಬತ್ತು ಜನರ ತಂಡ. ಇದಕ್ಕೂ ಮುನ್ನ ನಾವು ಹಂಪಿ, ಕಬ್ಬನ್‌ ಉದ್ಯಾನ, ಲಾಲ್‌ಬಾಗ್‌ ಸೇರಿದಂತೆ ಇತರ ಪ್ರೇಕ್ಷಣೀಯ ಸ್ಥಳಗಳು, ಕರ್ನಾಟಕದ ವಿಶೇಷ ಹಬ್ಬಗಳು ಹಾಗೂ ರೆಸ್ಟೋರೆಂಟ್‌ಗಳ ಕುರಿತಾದ ಪೋಸ್ಟ್‌ಕಾರ್ಡ್‌ಗಳನ್ನು ತಯಾರಿಸಿದ್ದೆವು. ಅವುಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಂದೇ ವರ್ಷದಲ್ಲಿ ಒಟ್ಟು 35 ದೇಶಗಳ ಜನರಿಗೆ ಇವು ತಲುಪಿವೆ. ಅಮೆಜಾನ್‌ ಹಾಗೂ ಬ್ಲಾಸಮ್ಸ್‌ ಪುಸ್ತಕ ಮಳಿಗೆಯಲ್ಲಿ ಈ ಕಾರ್ಡ್‌ಗಳು ಸಿಗುತ್ತವೆ. ಸದ್ಯದಲ್ಲೇ ನಾವು ವೆಬ್‌ಸೈಟ್‌ವೊಂದನ್ನು ಅನಾವರಣಗೊಳಿಸಲಿದ್ದೇವೆ. ಮತ್ತಷ್ಟು ಜನರನ್ನು ತಲುಪುವುದು, ಅವರಿಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಮಾಹಿತಿ ಒದಗಿಸುವುದು ಇದರ ಉದ್ದೇಶ’ ಎಂದರು.

‘ಕಾಡು ಮಲ್ಲೇಶ್ವರ ಸೇರಿದಂತೆ ಬೆಂಗಳೂರಿನ ಇತರ ಐತಿಹಾಸಿಕ ದೇವಾಲಯಗಳ ಕುರಿತು ಪೋಸ್ಟ್‌
ಕಾರ್ಡ್‌ ತಯಾರಿಸುವ ಯೋಜನೆಯೂ ಇದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT