ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಇಟಾವಾ ಸಫಾರಿ: 4 ಮರಿಗಳಿಗೆ ಜನ್ಮನೀಡಿದ ಸಿಂಹಿಣಿ ನಿರ್ಜಾ

Published 1 ಜೂನ್ 2024, 16:22 IST
Last Updated 1 ಜೂನ್ 2024, 16:22 IST
ಅಕ್ಷರ ಗಾತ್ರ

ಇಟಾವಾ: ಉತ್ತರ ಪ್ರದೇಶದ ಇಟಾವಾ ಲಯನ್ ಸಫಾರಿಯಲ್ಲಿ ಸಿಂಹಿಣಿ ನೀರ್ಜಾ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮರಿಗಳು ಆರೋಗ್ಯವಾಗಿವೆ. ನಾಲ್ಕು ಮರಿಗಳ ಜನನದಿಂದ ಸಫಾರಿಯಲ್ಲಿ ಸಿಂಹಗಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ’ ಎಂದು ಸಫಾರಿಯ ನಿರ್ದೇಶಕ ಅನಿಲ್ ಕುಮಾರ್ ಪಟೇಲ್ ತಿಳಿಸಿದ್ದಾರೆ.

'ಸಿಂಹಿಣಿ ಹಾಗೂ ನವಜಾತ ಮರಿಗಳ ಆರೋಗ್ಯ ಕುರಿತು ನಿರಂತರ ನಿಗಾ ಇಡಲಾಗಿದೆ. ವಾತಾವರಣದಲ್ಲಿ ಏರುಮುಖವಾಗಿರುವ ಶಾಖದಿಂದ ಇವುಗಳನ್ನು ರಕ್ಷಿಸಲು ಕೂಲರ್‌ ಹಾಗೂ ನೀರನ್ನು ಸಿಂಪಡಿಸಲಾಗುತ್ತಿದೆ’ ಎಂದು ಉಪ ನಿರ್ದೇಶಕ ಡಾ. ವಿನಯ್ ಕುಮಾರ್ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT