ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನವೆಂದರೆ ಜನರಿಗೆ ಭಯ

Last Updated 27 ಮೇ 2019, 19:30 IST
ಅಕ್ಷರ ಗಾತ್ರ

ಉದ್ಯಾನದ ಸುತ್ತಲೂ ಹೊಂಗೆ ಮರಗಳ ಸಾಲು, ಹಸಿರಿನ ಹೊದಿಕೆಯನ್ನೇ ಹೊತ್ತಿರುವ ಆ ಮರಗಳ ಕೆಳಗೆ ತಂಪಾದ ನೆರಳು. ಬಿರು ಬಿಸಿಲಿಗೆ ಬಸವಳಿದ ಜನರಿಗೆ ಆ ಮರಗಳ ಕೆಳಗೆ ಕುಳಿತುಕೊಳ್ಳುವ ಬಯಕೆ. ಆದರೆ, ಆ ಉದ್ಯಾನದ ಒಳಗೆ ಕಾಲಿಡುವ ಮುನ್ನ ಸ್ವಲ್ಪ ಯೋಚಿಸಬೇಕು. ಮುರಿದು ಬಿದ್ದಿರುವ ಬೆಂಚುಗಳು, ಕತ್ತರಿಸಿ ಬಿಸಾಡಿದ ಹೊಂಗೆ ಮರದ ಕೊಂಬೆಗಳು, ನೆಲದ ಮೇಲೆಲ್ಲಾ ಬಿದ್ದಿರುವ ಹೊಂಗೆ ಮರದ ತರಗೆಲೆಗಳು, ಅನಾಥವಾಗಿ ಬಿದ್ದಿರುವ ಜಿಮ್‌ ಉಪಕರಣಗಳು…

ಮೈಸೂರಿನ ತೊಣಚಿಕೊಪ್ಪಲು ಸಮೀಪದ ಗಂಗೋತ್ರಿ ಬಡಾವಣೆಯಲ್ಲಿರುವ ಉದ್ಯಾನದ ದುಃಸ್ಥಿತಿ ಇದು. ಇದರ ಪಕ್ಕದಲ್ಲೇ ಇನ್ನೂ ಎರಡು ಕಿರು ಉದ್ಯಾನಗಳಿವೆ. ಈ ಮೂರು ಉದ್ಯಾನಗಳು ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿವೆ. ಉದ್ಯಾನಗಳು ಇದ್ದೂ ಇಲ್ಲದಂತಾಗಿವೆ. ಕೆಲ ಮಕ್ಕಳು, ಯುವಕರನ್ನು ಹೊರತುಪಡಿಸಿ ಉದ್ಯಾನದೊಳಗೆ ಯಾರೂ ಕಾಲಿಡುವುದಿಲ್ಲ.

ಹಾಗೆ ನೋಡಿದರೆ, ಗಂಗೋತ್ರಿ ಬಡಾವಣೆ ವಿಸ್ತೀರ್ಣಕ್ಕೆ ತಕ್ಕಂತೆ ದೊಡ್ಡ ಉದ್ಯಾನವಿಲ್ಲ. ಸ್ವಲ್ಪ ಸ್ವಲ್ಪ ಜಾಗಗಳಲ್ಲೇ ಮೂರು ಉದ್ಯಾನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿದೆ. ಸುತ್ತಲೂ ಕಾಂಪೌಂಡ್, ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಒಳಭಾಗದಲ್ಲಿ ವಾಕಿಂಗ್ ಪಾತ್ ನಿರ್ಮಿಸಿ, ಸುತ್ತಲೂ ಬೆಂಚುಗಳನ್ನು ಅಳವಡಿಸಲಾಗಿದೆ. ಉದ್ಯಾನದ ಒಂದು ಬದಿಯಲ್ಲಿ ತೆರೆದ ಜಿಮ್ ಇದೆ. ಇಷ್ಟೆಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ್ದರೂ ನಿರ್ವಹಣೆಯಲ್ಲದೇ ಎಲ್ಲವೂ ಹಾಳಾಗಿವೆ.

ಬೆಂಚುಗಳು ಮುರಿದು ಬಿದ್ದಿದ್ದರೆ, ಜಿಮ್ ಉಪಕರಣಗಳು ಹಾಳಾಗಿವೆ. ಕೆಲವು ಕೆಳಗೆ ಬಿದ್ದು ತುಕ್ಕು ಹಿಡಿಯುತ್ತಿವೆ. ಪ್ಲಾಸ್ಟಿಕ್ ಹಾಗೂ ಕಸ ಸುರಿಯುವ ತಾಣವಾಗಿ ಮಾರ್ಪಟ್ಟಿದೆ. ಹಾವು, ಕೀಟಗಳ ಆವಾಸ ಸ್ಥಾನವಾಗಿದ್ದು, ಜನರು ಒಳಗೆ ಬರಲು ಹೆದರುವಂತಹ ವಾತಾವರಣ ಸೃಷ್ಟಿಯಾಗಿದೆ.

ಹುಲ್ಲಿನ ಹಾಸು ಇಲ್ಲ: ಯಾವುದೇ ಉದ್ಯಾನದಲ್ಲೂ ಹುಲ್ಲಿನ ಹಾಸು ಇಲ್ಲದೆ ಅದಕ್ಕೆ ಅಂದವೇ ಇರುವುದಿಲ್ಲ. ಹೀಗಾಗಿ, ಇವು ಮೈದಾನಗಳಂತೆ ಗೋಚರಿಸುತ್ತವೆ. ಒಂದು ಉದ್ಯಾನದಲ್ಲಿ ವಾಕಿಂಗ್ ಪಾತ್ ಪಕ್ಕದಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆದಿದ್ದರೂ ಅವುಗಳಿಗೆ ನೀರು ಹಾಯಿಸದ ಕಾರಣ ಒಣಗುತ್ತಿವೆ. ಇತ್ತೀಚೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಕೆಲ ಗಿಡಗಳು ಒಣಗಿವೆ. ವಾಕಿಂಗ್‌ ಪಾತ್‌ನ ಇಂಟರ್‌ ಲಾಕ್‌ ಟೈಲ್ಸ್‌ಗಳು ಹಾಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT