‘ಲ್ಯಾಕ್ಮೆ ಫ್ಯಾಷನ್‌ ವೀಕ್‌ಸಮ್ಮರ್‌ ರಿಸಾರ್ಟ್‌ 2019ಇಸ್ತಾನ್‌ಬುಲ್‌ಕಲೆಕ್ಷನ್ಸ್‌

7

‘ಲ್ಯಾಕ್ಮೆ ಫ್ಯಾಷನ್‌ ವೀಕ್‌ಸಮ್ಮರ್‌ ರಿಸಾರ್ಟ್‌ 2019ಇಸ್ತಾನ್‌ಬುಲ್‌ಕಲೆಕ್ಷನ್ಸ್‌

Published:
Updated:
Prajavani

ಒಟ್ಟಾವಿಯನ್‌ ದೊರೆಗಳ ಕಾಲದ ಸಮೃದ್ಧತೆ, ಬೊಸ್ಪರೊಸ್‌ (ಕಪ್ಪು ಸಮುದ್ರವನ್ನು ಮರ್ಮರಾ ಸಮುದ್ರ ಪ್ರದೇಶಕ್ಕೆ ಸೇರಿಸುವ ನೈಸರ್ಗಿಕ ಜಲಸಂಧಿ) ವಿನೂತನ ಲ್ಯಾಂಡ್‌ಸ್ಕೇಪ್‌ ಇಸ್ತಾನಬುಲ್‌ನ ಅನನ್ಯತೆ. ಬೊಸ್ಪರೊಸ್‌ ಎನ್ನುವುದು ಥ್ರಾಸಿಯನ್‌ ಭಾಷೆಯ ಪದ. ಇಂಡೋ–ಯುರೋಪಿಯನ್‌ ಬುಡಕಟ್ಟು ಜನಾಂಗ ಆಡುವ ಭಾಷೆ ಇದು. ಬೊಸ್ಪರೊಸ್‌ ಎಂದರೆ ಥ್ರಾಸಿಯನ್‌ ಭಾಷೆಯಲ್ಲಿ ‘ಹಸುವಿನ ಅಂಗೀಕಾರ’ ಎಂದರ್ಥವಂತೆ. ಇಂಥ ಇಸ್ತಾನ್‌ಬುಲ್‌ನ ದೇಸೀಯತೆಯನ್ನು ಬಣ್ಣಗಳ ಮೂಲಕ ದಿರಿಸುಗಳಲ್ಲಿ ತರಲು ಬಯಸುವ ರಾಜದೀಪ್‌ ರಣಾವತ್‌, ‘ಲ್ಯಾಕ್ಮೆ ಫ್ಯಾಷನ್‌ ವೀಕ್‌ ಸಮ್ಮರ್‌ ರಿಸಾರ್ಟ್‌ 2019’ ನಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಇದಕ್ಕೆ ಇಸ್ತಾನ್‌ಬುಲ್‌ ಕಲೆಕ್ಷನ್‌ ಎಂದೇ ಹೆಸರಿಟ್ಟಿದ್ದಾರೆ. ಟರ್ಕಿ ದೇಶದ ಪ್ರಮುಖ ಶಹರು ಇಸ್ತಾನ್‌ಬುಲ್‌ ತುಂಬ ವರ್ಣರಂಜಿತ. ಅದರ ಸೌಂದರ್ಯ ಮತ್ತು ಲಾಸ್ಯವನ್ನು ಈ ಫ್ಯಾಷನ್‌ ಷೋನಲ್ಲಿ ರಣಾವತ್‌ ಅರ್ಥಪೂರ್ಣವಾಗಿ ಧ್ವನಿಸುವಂತೆ ಮಾಡಿದ್ದಾರೆ.

 ತೆಳುವಾದ ಚೂಡಿದಾರ್‌, ಬಹುವರ್ಣ ಛಾಯೆಯ ಸುರುಳಿಯಾಕಾರದ ಚಿತ್ರಿಕೆಯ ಕುರ್ತಾ ದಿರಿಸು ಇಲ್ಲಿನ ಆಕರ್ಷಣೆಯಾಗಿತ್ತು. ಸೆಕ್ಸಿ ಬಿಕಿನಿ ಮತ್ತು ಕೇಪ್‌ (ತೆರೆದ ತೋಳಿನ ಬಾಹ್ಯ ದಿರಿಸು), ಮ್ಯಾಕ್ಸಿ, ಸ್ಟೈಲಿಶ್‌ ಆದ ಜಂಪ್‌ಸೂಟ್‌, ಟೈಟ್‌ ಲೆಗ್ಗಿಂಗ್ಸ್‌ ಇತ್ಯಾದಿ ಬಳಸಿ ವಿಭಿನ್ನ ವಿನ್ಯಾಸಗಳ ದಿರಿಸು ಹೊತ್ತ ರೂಪದರ್ಶಿಗಳು ರ‍್ಯಾಂಪ್‌ ಮೇಲೆ ಬಳುಕಿ ನಡೆದ ಷೋ ಇಸ್ತಾನ್‌ಬುಲ್‌ನ ವೈಭವವನ್ನು ಕಣ್ಣೆದುರು ನಿಲ್ಲಿಸಿದಂತಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !