ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳದನಿ ಆಲಿಸಲು, ಅಂತಃಶಕ್ತಿ ಹೆಚ್ಚಿಸಲು...

ಸಂಖ್ಯೆಗಳು ಸುಳ್ಳು ಹೇಳುವುದಿಲ್ಲ
Last Updated 5 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಬೆಂಗಳೂರಿಗರು ತಮ್ಮ ಆಂತರ್ಯದ ಧ್ವನಿಯನ್ನು ಕೇಳುವುದು ಮರೆತಿದ್ದಾರೆ. ಧಾವಂತ, ಓಟ, ಯಾವುದೋ ಸ್ಪರ್ಧೆಗಿಳಿದವರಂತೆ ತಮ್ಮನ್ನೇ ಮರೆತಂತೆ ಬದುಕುತ್ತಾರೆ.

ಹೀಗಿರುವಾಗಲೇ ಅವರಲ್ಲಿ ಅಸಮಾಧಾನ ಹೆಚ್ಚುತ್ತದೆ. ಮಾಡಿದ ಕಾರ್ಯಗಳಲ್ಲಿ ಸಂತೋಷವಾಗಲೀ, ಜಯವಾಗಲೀ ಸಿಗುವುದಿಲ್ಲ. ಕೆಲವೊಮ್ಮೆ ವಿಶ್ವದಲ್ಲಿರುವ ನಕಾರಾತ್ಮಕ ಶಕ್ತಿಗಳಿಗೂ ನೆಲೆ ನೀಡಿರುತ್ತಾರೆ.

ನಾವು ಅದೇನು ಯೋಚಿಸುತ್ತೇವೆಯೋ, ವಿಶ್ವ ನಮಗದನ್ನೇ ತಂದು ನೀಡುತ್ತದೆ. ನಮ್ಮ ಮಡಿಲಿಗೆ ಅದನ್ನೇ ತಂದು ಸುರಿಯುತ್ತದೆ. ಮೋರಿಯ ಕೊಳಕನ್ನು ಯೋಚಿಸಿದಾಗ ಹೊಲಸು ನೊಣಗಳೇ ನಿಮ್ಮನ್ನು ಮುತ್ತುತ್ತವೆ. ಜೇನಿನ ಹನಿಯಾದಾಗ, ದುಂಬಿ, ಚಿಟ್ಟೆಗಳೇ ನಿಮ್ಮನ್ನು ಮುತ್ತುತ್ತವೆ. ಆದರೆ ನಾವು ಯಾವಾಗ ಏನಾಗುತ್ತೇವೆ ಎಂಬ ಪ್ರಜ್ಞೆಯನ್ನೇ ಮರೆತಿದ್ದೇವೆ.

ನಕಾರಾತ್ಮಕ ಶಕ್ತಿಗಳು ನಮ್ಮಲ್ಲಿ ಎಳೆಎಳೆಯಾಗಿ ಸೇರ್ಪಡೆಯಾಗುತ್ತಲೇ ಗೂಡು ಕಟ್ಟುತ್ತವೆ. ನಿಧಾನಕ್ಕೆ ನಮ್ಮನ್ನು ಆವರಿಸಿಕೊಳ್ಳುತ್ತವೆ. ಅವುಗಳನ್ನು ಹೊಡೆದೋಡಿಸುವುದೇ ಈ ಚಿಕಿತ್ಸೆಗಳಾಗಿವೆ. ನಮ್ಮಲ್ಲಿ ಕೆಲವರು ಜೀವನಾಸಕ್ತಿಯನ್ನೇ ಕಳೆದುಕೊಂಡಿದ್ದೇವೆ ಎಂದು ಬರುತ್ತಾರೆ. ಮಿದುಳಿನಲ್ಲಿ ವಿದ್ಯುತ್ಕಾಂತೀಯ ತರಂಗಗಳು ಹಿಂದೆ ಮುಂದೆ ಆದಾಗಲೂ ನಮ್ಮ ವರ್ತನೆಯಲ್ಲಿ ಬದಲಾವಣೆಗಳಾಗುತ್ತವೆ.

ಅವನ್ನು ಉದ್ದೀಪಿಸುವುದು, ನಿಮ್ಮ ದೇಹದ ಚಕ್ರಗಳನ್ನು ಜಾಗೃತಾವಸ್ಥೆಗೆ ತರುವುದು ಈ ಚಿಕಿತ್ಸೆಗಳ ಮೂಲ ಉದ್ದೇಶವಾಗಿದೆ. ಒಮ್ಮೆ ನಮ್ಮಲ್ಲಿ ಬಂದವರು ಮತ್ತೆ ಬಾರದಿರಲಿ ಎಂದು ಆಶಿಸುತ್ತೇವೆ. ಆದರೆ ಇಲ್ಲಿ ಬಂದವರಿಗೆ ಶಾಶ್ವತ ಪರಿಹಾರ ದೊರೆತಾಗ ಅವರಲ್ಲಿಯೂ ಈ ವಿಧಾನಗಳಲ್ಲಿ ಆಸ್ಥೆ ಮೂಡುತ್ತದೆ. ನಮ್ಮಲ್ಲಿ ತರಬೇತಿಗೆ ಬರುತ್ತಾರೆ. ನಿಧಾನವಾಗಿ ಅವರೂ ಚಿಕಿತ್ಸಕರಂತೆ, ಸಲಹೆಗಳನ್ನು ನೀಡಲಾರಂಭಿಸುತ್ತಾರೆ.

ನಮ್ಮ ಆಂತರ್ಯವನ್ನು ಸಕಾರಾತ್ಮಕ ಶಕ್ತಿಯಿಂದ ಕಂಗೊಳಿಸುವಂತೆ ಮಾಡಬೇಕು. ಅದೊಂಥರ ನಮ್ಮ ಫೋನು ಅಥವಾ ಲ್ಯಾಪ್‌ಟಾಪುಗಳನ್ನು ಫಾರ್ಮ್ಯಾಟ್‌ ಮಾಡಿದಂತೆ. ಅನಗತ್ಯದ ನೆನಪುಗಳು, ಅಸಂಗತ ಯೋಚನೆಗಳು, ಇನ್ನೆಲ್ಲೋ ನಮ್ಮಂತರಂಗದೊಳಗೆ ಮನೆ ಮಾಡಿರುವ ದೃಶ್ಯಗಳು ಇವೆಲ್ಲವೂ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿರುತ್ತವೆ. ಆಗ ಚೇತನ ನಿಶ್ಚೇತನಗೊಳ್ಳುತ್ತ ಹೋಗುತ್ತದೆ. ಮನೆಯಲ್ಲಿ, ಮನಸಿನೊಳಗೆ ಸಮಾಧಾನವೆಂಬುದು ಅಳಿಯುತ್ತ ಹೋಗುತ್ತದೆ. ಇದೆಲ್ಲವೂ ಒಂದು ವೃತ್ತವಿದ್ದಂತೆ. ಈ ಅಸಮಾಧಾನವನ್ನು ಬೆಂಬತ್ತಿ ವೈಫಲ್ಯ ಬರುತ್ತದೆ. ಅದರೊಟ್ಟಿಗೆ ಆತ್ಮವಿಶ್ವಾಸ ಕುಂಠಿತಗೊಳ್ಳುತ್ತದೆ.

ಈ ಇಡೀ ವೃತ್ತವನ್ನು ಒಂದೆಡೆ ಒಡೆದು, ಪುನಃಶ್ಚೇತನ ಗೊಳಿಸಬೇಕು. ಸಕಾರಾತ್ಮಕ ಚಿಂತನೆಗಳು ನಮ್ಮ ಒಳಗನ್ನು ಬೆಳಗುತ್ತದೆ. ಸಕಾರಾತ್ಮಕ ಶಕ್ತಿಗಾಗಿ ಮತ್ತೆ ವಿಶ್ವಕ್ಕೇ ಮೊರೆಹೋಗಬೇಕು. ಅದಕ್ಕಾಗಿ ಒಂದಷ್ಟು ಗಿಡಮೂಲಿಕೆಗಳಿವೆ. ಒಂದಷ್ಟು ಮಂತ್ರೋಚ್ಛಾರಣೆಗಳಿವೆ. ಇನ್ನಷ್ಟು ಆಚರಣೆಗಳಿವೆ. ಅವನ್ನು ಅನುಸರಿಸಿದರೆ ಆಯಿತು. ವಾಸ್ತು ಎಂದಾಕ್ಷಣ ಗೋಡೆಗಳನ್ನು ಕೆಡುವುದು, ಗೋಡೆ ಎತ್ತರಿಸುವುದು, ಮನೆ ಮುಂದಿನ ಬಾವಿ ಮುಚ್ಚುವುದು ಇಂಥ ಪರಿಹಾರಗಳು ನಗರದ ಜೀವನದಲ್ಲಿ ಅಸಾಧ್ಯ. ಆದರೆ ಅದಕ್ಕಾಗಿ ವಿಶೇಷ ಪರಿಹಾರಗಳನ್ನು ಸೂಚಿಸಲಾಗುತ್ತದೆ.

ಪಂಚಮಹಾಭೂತಗಳಿಂದ ಸಕಾರಾತ್ಮಕ ಶಕ್ತಿಯನ್ನು ಆವಾಹಿಸಲಾಗುತ್ತದೆ. ಅದಕ್ಕಾಗಿಯೇ ಕೆಲವು ಉತ್ಪನ್ನಗಳನ್ನು ಸಿದ್ಧಪಡಿಸಿದ್ದೇನೆ. ಇದಲ್ಲದೇ ಆಗಾಗ ಪುನಃಶ್ಚೇತನ ತರಬೇತಿಗಳನ್ನೂ ನೀಡುತ್ತೇವೆ. ಇದರಲ್ಲಿ ಪಾಲ್ಗೊಂಡವರು ತಮ್ಮ ಅಂತಃಶಕ್ತಿಯನ್ನು ಅರಿತುಕೊಳ್ಳುತ್ತಾರೆ. ಆ ಆರಿವು ಅವರ ಅನುಭೂತಿಯಾದಾಗ ಬದಲಾವಣೆಯನ್ನು ಅನುಭವಿಸುತ್ತಾರೆ. ಈ ಸಕಾರಾತ್ಮಕ ಬದಲಾವಣೆಯಿಂದಲೇ ಅವರ ಬದುಕಿನಲ್ಲಿ ಸುಧಾರಣೆಯಾಗುತ್ತದೆ. ಜೊತೆಗೆ ಸಂಖ್ಯಾಬಲವೂ ಇರುತ್ತದೆಯಲ್ಲ...

ಯಾವ ಸಮಸ್ಯೆಗಳೂ ಶಾಶ್ವತವಲ್ಲ. ಯಾವುದೂ ನಮ್ಮನ್ನು ಅರಸಿ ಬರುವುದಿಲ್ಲ. ನಾವು ಅವುಗಳನ್ನು ಆಹ್ವಾನಿಸಿರುತ್ತೇವೆ. ಕೆಲವೊಮ್ಮೆ ಕೆಟ್ಟ ನಿರ್ಣಯಗಳಿಂದ, ಇನ್ನೂ ಕೆಲವೊಮ್ಮೆ ಅಸಮಂಜಸ ಆಯ್ಕೆಗಳಿಂದ ಕೆಟ್ಟ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಎಲ್ಲದಕ್ಕೂ ನಾವೇ ಕಾರಣ, ನನಗ್ಯಾಕೆ ಹೀಗಾಯಿತು ಎಂದೆನಿಸಿಕೊಂಡು ಕುಳಿತರೆ ಅದು ಸ್ವಮರುಕಕ್ಕೆ ಹಾತೊರೆಯುತ್ತಿದ್ದಾರೆ ಎಂದರ್ಥ. ಆಗಿದ್ದಾಗಿದೆ, ಮುನ್ನಡೆಯುವುದು ಹೇಗೆ? ಇರುವುದೊಂದು ಬದುಕು, ಒಂದೇ ಅವಕಾಶ. ಇದನ್ನು ಸುಂದರಗೊಳಿಸುವುದು, ಸರಳವಾಗಿ ಬದುಕುವುದು ಹೇಗೆ ಎಂಬ ಆಯ್ಕೆ ನಿಮ್ಮದಾಗಿದ್ದಲ್ಲಿ ಪ್ರತಿಯೊಂದಕ್ಕೂ ಪರಿಹಾರ ಸಿಕ್ಕೇಸಿಗುತ್ತದೆ

ಯಾರು ಶೀಲಾ ಎಂ. ಬಜಾಜ್‌?

ಶೀಲಾ ಎಂ.ಬಜಾಜ್‌ ನ್ಯುಮರಾಲಜಿಸ್ಟ್‌. NUMEROGICA, BRAINGORITHM, ALLERGGONE, ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ, ಎರಡು ದಶಕಗಳಿಂದ ಚಿಕಿತ್ಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿ ಪಡೆದಿರುವ ಶೀಲಾ ಅವರ ವಿಶೇಷಗಳನ್ನು ಗಮನಿಸಲು, Sheelaa.com ವೆಬ್‌ಪುಟಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT